ಬಿರಿಯಾನಿ..ಕುಷ್ಕಾ..ಲೇಕೆ ಆವೋ.. ಪಾದರಾಯನ ಪುಂಡರ ಧಿಮಾಕು!...

ಮಾಡಿದ ಕೆಟ್ಟ ಕೆಲಸಕ್ಕೆ ಇವರನ್ನು ಬಂಧನ ಮಾಡಲಾಗಿದೆ. ಕೊರೋನಾ ಆತಂಕ ಒಂದು ಕಡೆ ಹೆಚ್ಚಾಗುತ್ತಲೇ ಇದೆ. ಆದರೆ ಇವರಿಗೆ ಮಾತ್ರ ಬಿರಿಯಾನಿ ಬೇಕಂತೆ .
ರಾಮನಗರದಿಂದ ಹಜ್ ಭವನಕ್ಕೆ ಕರೆದು ತಂದಿದ್ದರೂ ಇವರ ಕಿರಿಕ್ ಕಡಿಮೆ ಆಗಿಲ್ಲ.  ಹಜ್ ಭವನದಲ್ಲಿ ಪಾದರಾಯನಪುರ‌ ಪುಂಡರು ಕಿರಿಕ್ ಮಾಡಿದ್ದಾರೆ. ಊಟದ ಮೆನ್ಯು ಬದಲಿಸುವಂತೆ ತಾಕೀತು ಮಾಡಿದ್ದಾರೆ!


ಹೇರ್‌ ಕಟ್ಟಿಂಗ್ ಮಾಡಿಸಿದ್ದ 6 ಮಂದಿಗೆ ಕೊರೋನಾ: ಇಡೀ ಗ್ರಾಮ ಸೀಲ್‌ಡೌನ್!

ಹೇರ್‌ ಕಟ್ಟಿಂಗ್ ಮಾಡಿಸಲು ಹೋಗಿದ್ದ ಆರು ಮಂದಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿರುವ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ. ಈ ಮಾಹಿತಿ ಸಿಕ್ಕ ಬೆನ್ನಲ್ಲೇ ಇಡೀ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ.

ಜಡ್ಜ್‌ ಮುಂದೆ ಬನಿಯನ್‌ನಲ್ಲಿ ವಿಚಾರಣೆಗೆ ಹಾಜರಾದ ವಕೀಲ!

ಕೊರೋನಾ ನಿಗ್ರಹಕ್ಕಾಗಿ ಲಾಕ್‌ಡೌನ್‌ ಘೋಷಣೆ ಮಾಡಿರುವುದರಿಂದ ತುರ್ತು ಅರ್ಜಿಗಳನ್ನು ನ್ಯಾಯಾಲಯಗಳು ಆನ್‌ಲೈನ್‌ ಮೂಲಕ ನಡೆಸುತ್ತಿವೆ. ಆದರೆ ಇಂಥದ್ದೇ ಒಂದು ವಿಚಾರಣೆ ವೇಳೆ ರಾಜಸ್ಥಾನದಲ್ಲಿ ಅವಾಂತರ ನಡೆದಿದೆ.

ಲಾಕ್‌ಡೌನ್ ವೇಳೆ ಕಪಿಲ್ ದೇವ್ ಹೊಸ ಸ್ಟೈಲ್; ಇಬ್ಬರು ಕ್ರಿಕೆಟಿಗರು ಸ್ಪೂರ್ತಿ!.

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಸಮಯದಲ್ಲಿ ಇದೀಗ ಹೊಸ ಹೇರ್ ಸ್ಟೈಲ್ ಟ್ರೆಂಡ್ ಆಗಿದೆ. ಎಲ್ಲಾ ಕೂದಲು ತೆಗೆದು ಬಾಲ್ಡ್ ಸ್ಟೈಲ್ ಟ್ರೆಂಡ್ ಆಗಿದೆ. ಇದೀಗ ಟೀಂ ಇಂಡಿಯಾ ನಾಯಕ ಕಪಿಲ್ ದೇವ್ ಹೊಸ ಟ್ರೆಡಿಂಗ್ ಸ್ಟೈಲ್ ಮಾಡಿದ್ದಾರೆ. ಆದರೆ ಈ ಸ್ಟೈಲ್ ಮಾಡಲು ಕಪಿಲ್ ದೇವ್ 2011ರಲ್ಲೇ ಯೋಚನೆ ಮಾಡಿದ್ದರು. ಕಪಿಲ್ ಹೊಸ ಸ್ಟೈಲ್ ಹಿಂದಿದೆ ಇಬ್ಬರು ಕ್ರಿಕೆಟಿಗರ ಸ್ಪೂರ್ತಿ.

ಲಾಕ್‌ಡೌನ್‌ನಲ್ಲಿ ದಿಂಬು ಹಿಡಿದು ಮುದ್ದಾಡುತ್ತಿರುವ ನಟಿಯರು; ವಿಡಿಯೋ ನೋಡ್ರಪ್ಪಾ!.

ತಿಂಗಳುಗಟ್ಟೆಲೆ ಮನೆಯಲ್ಲಿಯೇ ಕುಳಿತು ಟೈಂ ಪಾಸ್‌ ಮಾಡುತ್ತಿರುವ ಸೆಲೆಬ್ರಿಟಿಗಳು ಇತ್ತೀಚಿಗೆ ಹೊಸ ಟ್ರೆಂಡ್  ಶುರು ಮಾಡಿಕೊಂಡಿದ್ದಾರೆ. ಅದೇನಪ್ಪಾ ಅಂತೀರಾ? ಇಲ್ಲಿದೆ ನೋಡಿ...

'ಐರಾವತ'ನ ಸುಂದರಿ ಊರ್ವಶಿ ಫೇಸ್‌ಬುಕ್‌ ಖಾತೆ ಹ್ಯಾಕ್‌; ಲೀಕ್‌ ಆಗಿದ್ದಾದರೂ ಏನು?

ಬಾಲಿವುಡ್‌ ಚಿತ್ರರಂಗದ ಸುಂದರಿ ನಟಿ ಊರ್ವಶಿ ರೌಟೇಲಾ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿದೆ ಎಂದು ಟ್ಟಿಟ್ಟರ್‌ನಲ್ಲಿ ತಿಳಿಸಿದ್ದಾರೆ.ಅಷ್ಟೇ ಅಲ್ಲದೆ ಅಕೌಂಟ್‌ಯಿಂದ ಬರುವ ಯಾವ ಮೆಸೇಜಿಗೂ ಸ್ಪಂದಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಆನ್‌ಲೈನ್‌ನಲ್ಲಿ ಚಿನ್ನ, ಕೊಳ್ಳುವುದು ಹೇಗಣ್ಣ?.

ಇಂದು ಅಕ್ಷಯ ತೃತೀಯ. ಚಿನ್ನ ಖರೀದಿಸಲು ಪ್ರಶಸ್ತವಾದ ಸಮಯ. ಆದರೆ ಈ ಬಾರಿ ಅಕ್ಷಯ ತೃತೀಯ ಆಚರಿಸಲಾಗುವುದಿಲ್ಲ. ಕೊರೋನಾ ಕಾರಣದಿಂದ ಜ್ಯುವೆಲ್ಲರಿ ಶಾಪ್‌ಗಳು ಮುಚ್ಚಿವೆ. ಆದರೆ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳಬೇಡಿ. ಆನ್‌ಲೈನ್‌ನಲ್ಲಿ ಚಿನ್ನ ಖರೀದಿ ಮಾಡಬಹುದು. ಆನ್‌ಲೈನ್‌ನಲ್ಲಿ ಚಿನ್ನ ಖರೀದಿ ಮಾಡುವುದು ಹೇಗೆ? ಯಾವ ರೀತಿ ಆಯ್ಕೆ ಮಾಡಬೇಕು? ಎಲ್ಲವುಗಳ ಬಗ್ಗೆ ಹೂಡಿಕೆ ತಜ್ಞ ರುದ್ರಮೂರ್ತಿ ಒಂದಷ್ಟು ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಇಲ್ಲಿದೆ ನೋಡಿ! 

5ರ ಕಂದನ ರೇಪ್, ಹತ್ಯೆ: ನಾಲ್ವರು ಕಾಮುಕರು ಎನ್‌ಕೌಂಟರ್‌, ಮೂವರು ಪರಾರಿ!

ಕೊರೋನಾ ವಿರುದ್ಧ ಸಮರ ಸಾರಿರುವ ವಿಶ್ವದಲ್ಲಿ ಸದ್ಯ ಬೇರಾವ ಸಮಸ್ಯೆಗಳು ಕಾಣದಿರಬಹುದು, ಆದರೆ ಸಂಭವಿಸುತ್ತಿರುವ ಕೆಲ ಘಟನೆಗಳು ಮನುಷ್ರನ್ನು ತಲೆ ತಗ್ಗಿಸುವಂತೆ ಮಾಡಿವೆ. ಸದ್ಯ ಪಾಕಿಸ್ತಾನದಲ್ಲಿ ಇಂತಹ ಘಟನೆ ವರದಿಯಾಗಿದೆ. ಕೊರೋನಾದಿಂದ ಬಲಲುತ್ತಿರುವ ಪಾಕಿಸ್ತಾನದಲ್ಲಿ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗಲೇ ಫೈಸಲಾಬಾದ್‌ನಲ್ಲಿ ಶಾಕಿಂಗ್ ಘಟನೆ ನಡೆದಿದೆ. ಇಲ್ಲಿ ಏಳು ಮಂದಿ ಕಾಮುಕರು, ಐದು ವರ್ಷದ ಪುಟ್ಟ ಮಗುವಿನ ರೇಪ್ ಮಾಡಿ, ಹತ್ಯೆಗೈದಿದ್ದಾರೆ.

ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್ ಬಿಡುಗಡೆ ರೆಡಿ, ಬೆಲೆ ಬಹಿರಂಗ!

ಕೊರೋನಾ ವೈರಸ್ ಕಾರಣ ಈಗಾಗಲೇ ಬಿಡುಗಡೆಯಾಗಬೇಕಿದ್ದ ರಾಯಲ್ ಎನ್‌ಫೀಲ್ಡ್ ಮೆಟೊರ್ ಇದೀಗ ಲಾಕ್‌ಡೌನ್ ತೆರವಾದ ಬಳಿಕ ಬಿಡುಗಡೆಯಾಗಲಿದೆ. ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್‌ ಬೈಕ್‌ಗೆ ಬದಲಾಗಿ ನೂತನ ಮೆಟೊರ್ 350 ಬೈಕ್ ಮಾರುಕಟ್ಟೆ ಪ್ರವೇಶಿಸಲು ರೆಡಿಯಾಗಿದೆ. ಇದೀಗ ನೂತನ ಬೈಕ್ ಬೆಲೆ ಬಹಿರಂಗವಾಗಿದೆ. 


ಡಾ. ರಾಜ್‌ಕುಮಾರ್‌ ಅವರ ಅಪರೂಪದ ವಿಡಿಯೋ ವೈರಲ್‌; ನೋಡಿ ಅಣ್ಣಾವ್ರ ಸನ್ಮಾನ!

ಕನ್ನಡ ಚಿತ್ರರಂಗದ ನಟಸಾರ್ವಭೌಮ ಡಾ.ರಾಜ್‌ಕುಮಾರ್‌ ಅಂದ್ರೆ ರಾಜ್‌ಕುಮಾರ್‌. ನಮ್ಮಗೆಲ್ಲಾ ಅವರ ಹೆಸರು ಕೇಳಿದರೆ ಮೊದಲು  ಜ್ಞಾಪಕ ಬರುವುದು ಏಪ್ರಿಲ್‌ ತಿಂಗಳು.  ರಾಜ್ ಮಾಸದಲ್ಲಿ ಎಲ್ಲೇ ನೋಡಿದರೂ  ಅಣ್ಣಾವ್ರ ಸಿನಿಮಾ ಪೋಸ್ಟರ್‌ಗಳು, ವಿಡಿಯೋಗಳು.