ಜಡ್ಜ್‌ ಮುಂದೆ ಬನಿಯನ್‌ನಲ್ಲಿ ವಿಚಾರಣೆಗೆ ಹಾಜರಾದ ವಕೀಲ!| ನ್ಯಾಯವಾದಿ ವೇಷ ಕಂಡು ಜಡ್ಜ್‌ ಗರಂ| ವಿಡಿಯೋ ಕಾನ್ಫರೆನ್ಸ್‌ ವಿಚಾರಣೆ ಎಡವಟ್ಟು

ಜೈಪುರ(ಏ.26): ಕೊರೋನಾ ನಿಗ್ರಹಕ್ಕಾಗಿ ಲಾಕ್‌ಡೌನ್‌ ಘೋಷಣೆ ಮಾಡಿರುವುದರಿಂದ ತುರ್ತು ಅರ್ಜಿಗಳನ್ನು ನ್ಯಾಯಾಲಯಗಳು ಆನ್‌ಲೈನ್‌ ಮೂಲಕ ನಡೆಸುತ್ತಿವೆ. ಆದರೆ ಇಂಥದ್ದೇ ಒಂದು ವಿಚಾರಣೆ ವೇಳೆ ರಾಜಸ್ಥಾನದಲ್ಲಿ ಅವಾಂತರ ನಡೆದಿದೆ.

ರಾಜಸ್ಥಾನ ಹೈಕೋರ್ಟ್‌ನ ಜೈಪುರ ಪೀಠದ ನ್ಯಾಯಮೂರ್ತಿ ಸಂಜೀವ್‌ ಪ್ರಕಾಶ್‌ ಶರ್ಮಾ ಅವರು ನಡೆಸಿದ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆಗೆ ವಕೀಲರೊಬ್ಬರು ಬನಿಯನ್‌ನಲ್ಲೇ ಹಾಜರಾದ, ಇದನ್ನು ಕಂಡು ಜಡ್ಜ್‌ ಗರಂ ಆದ ಪ್ರಸಂಗ ಜರುಗಿದೆ.

ಕಿಟ್ ದುರುಪಯೋಗ: ಕಾಂಗ್ರೆಸ್ ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ

Scroll to load tweet…

ಲಾಲ್‌ರಾಮ್‌ ಎಂಬುವರ ತುರ್ತು ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಂಜೀವ್‌ ಪ್ರಕಾಶ್‌ ನಡೆಸುತ್ತಿದ್ದರು. ಈ ವಿಚಾರಣೆಗೆ ವಕೀಲ ರವೀಂದ್ರ ಕುಮಾರ್‌ ಮನೆಯಲ್ಲಿದ್ದ ಅವತಾರದಲ್ಲಿ ಅಂದರೆ ಬನಿಯನ್‌ನಲ್ಲೇ ಹಾಜರಾದರು. ಇದರಿಂದ ಸಿಟ್ಟಿಗೆದ್ದ ನ್ಯಾಯಮೂರ್ತಿಗಳು, ಜಾಮೀನು ಅರ್ಜಿಯನ್ನೇ ವಜಾ ಮಾಡಲು ಮುಂದಾದರು.

ಸಾಮಾನ್ಯ ನೌಕರನಿಗಿಂತ 1085 ಪಟ್ಟು ಅಧಿಕ ವೇತನ ಪಡೆಯುವ ಪಿಚೈ!

ವಕೀಲರ ತಪ್ಪಿಗೆ ಅರ್ಜಿದಾರರಿಗೆ ಶಿಕ್ಷೆ ನೀಡುವುದು ಸರಿಯಲ್ಲ ಎಂಬ ಸರ್ಕಾರಿ ವಕೀಲರ ಮನವಿಗೆ ಓಗೊಟ್ಟಜಡ್ಜ್‌, ಮುಂದಿನ ವಿಚಾರಣೆ ವೇಳೆ ಸೂಕ್ತ ವಸ್ತ್ರ ಧರಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿದರು.