'ಐರಾವತ'ನ ಸುಂದರಿ ಊರ್ವಶಿ ಫೇಸ್‌ಬುಕ್‌ ಖಾತೆ ಹ್ಯಾಕ್‌; ಲೀಕ್‌ ಆಗಿದ್ದಾದರೂ ಏನು?

ಬಿ-ಟೌನ್‌ ನಟಿ ಊರ್ವಶಿ ರೌಟೇಲಾ ಫೇಸ್‌ಬುಕ್‌ ಖಾತೆ ಹ್ಯಾಕ್‌ . ನಿಜಕ್ಕೂ ಪಾರ್ನ್‌ ವಿಡಿಯೋ ಲಿಂಕ್‌ ಶೇರ್ ಆಗಿದ್ಯಾ?

Bollywood urvashi rautela facebook account hacked

ಬಾಲಿವುಡ್‌ ಚಿತ್ರರಂಗದ ಸುಂದರಿ ನಟಿ ಊರ್ವಶಿ ರೌಟೇಲಾ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿದೆ ಎಂದು ಟ್ಟಿಟ್ಟರ್‌ನಲ್ಲಿ ತಿಳಿಸಿದ್ದಾರೆ.ಅಷ್ಟೇ ಅಲ್ಲದೆ ಅಕೌಂಟ್‌ಯಿಂದ ಬರುವ ಯಾವ ಮೆಸೇಜಿಗೂ ಸ್ಪಂದಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

'ಅಲ್ಲಿಗೆ' ಹೊಡೆದಿದ್ರೆ ಬೋನಿ? ರಂಭೆ, ಮೇನಕೆ ಯಾರೂ ಈ ಊರ್ವಶಿ ಮುಂದೆ ಸೊನ್ನೆ! .

'ನನ್ನ ಫೇಸ್‌ಬುಕ್‌ ಹ್ಯಾಕ್‌ ಆಗಿದೆ, ದಯವಿಟ್ಟು ಯಾರೂ ಮೆಸೇಜ್‌ಗೆ ಪ್ರತಿಕ್ರಿಯಿಸಬೇಡಿ. ಅದನ್ನು ನಾನು ಅಥವಾ ನನ್ನ ಟೀಂ ಮಾಡುತ್ತಿರುವುದಲ್ಲ' ಎಂದು ಬರೆದುಕೊಂಡಿದ್ದಾರೆ. ಊರ್ವಶಿಗೆ ತನ್ನ ಅಭಿಮಾನಿಗಳು ಹಾಗೂ ಸ್ನೇಹಿರು ಹೆಚ್ಚಿನ ಸಂಖ್ಯೆಯಲ್ಲಿ ಒಂದೇ ದಿನ ಅಷ್ಟೊಂದು ಮೆಸೇಜ್‌ ಮಾಡುತ್ತಿರುವುದನ್ನು ನೋಡಿ ಗಾಬರಿ ಆಗಿದ್ದಾರೆ. ತಕ್ಷಣವೇ ಏನೆಂದು  ಪರಿಶೀಲಿಸಿದಾಗ ಪಾರ್ನ್‌ ಲಿಂಕ್ ಶೇರ್ ಆಗಿರುವುದು ತಿಳಿದು ಬಂದಿದೆ. 

 

ಈ ವಿಚಾರದ ಬಗ್ಗೆ ಊರ್ವಶಿ ಮುಂಬೈ ಪೊಲೀಸರಿಗೆ ತಿಳಿಸಿದ್ದಾರೆ, ಸೈಬರ್‌ ಪೊಲೀಸ್ ಸೆಲ್‌ನಲ್ಲಿ ದೂರು ದಾಖಲಿಸಿದ್ದಾರೆ. ಊರ್ವಶಿ ಬರೆದುಕೊಂಡಿರುವ ಪೋಸ್ಟ್‌ಗೆ ಮುಂಬೈ ಪೊಲೀಸರು 'ನಾವು  ದೂರನ್ನು ಸೈಬರ್ ಟೀಂಗೆ ತಿಳಿಸಿದ್ದೇವೆ ' ಎಂದು ಪ್ರತಿಕ್ರಿಯಿಸಿದ್ದಾರೆ. ಊರ್ವಶಿ ಖಾತೆಯಿಂದ ಲಿಂಕ್‌ ಶೇರ್ ಆಗಿದೆ ಆದರೆ ಯಾವುದೇ ಮಾಹಿತಿ ಲೀಕ್‌ ಆಗಿಲ್ಲ.

ಬಾಲಿವುಡ್‌ ನಟಿ ಕಮ್‌ ಮಾಜಿ ಮಿಸ್‌ ಇಂಡಿಯಾ ಊರ್ವಶಿ ಎಂದಿಗೂ ಸೋಷಿಯಲ್‌ ಮೀಡಿಯಾ ಟ್ರೆಂಡ್‌ ಕ್ರಿಯೇಟ್‌ ಮಾಡುವ ನಟಿ ಹೀಗಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಅವಾರ್ಡ್‌ ಕಾರ್ಯಕ್ರಮದಲ್ಲಿ ಊರ್ವಶಿ ಧರಿಸಿದ ರೆಡ್‌ ಗೌನ್‌ ನೆಟ್ಟಿಗರ ಗಮನ ಸೆಳೆದಿತ್ತು. ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಆಕೆಯ ಮುಂದಿನ ಚಿತ್ರ 'ವರ್ಜಿನ್‌ ಭಾನುಪ್ರಿಯಾ' ಚಿತ್ರೀಕರಣ ಸ್ಥಗಿತವಾಗಿದೆ.

ಕೂತ್ಕೊಳ್ಳಕ್ಕೆ 1 ಚೇರ್ ಆದ್ರೆ, ಇವ್ರ ಬಟ್ಟೆಗೆ 3 ಚೇರ್‌: ಏನಮ್ಮಾ ಊರ್ವಶಿ ಇದು?

2015ರಲ್ಲಿ ಜಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ 'ಮಿಸ್ಟರ್‌. ಐರಾವತ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಆ ನಂತರ ಹಿಂದಿ ಹಾಗೂ ಬೆಂಗಾಲಿ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios