5ರ ಕಂದನ ರೇಪ್, ಹತ್ಯೆ: ನಾಲ್ವರು ಕಾಮುಕರು ಎನ್ಕೌಂಟರ್, ಮೂವರು ಪರಾರಿ!
ಕೊರೋನಾ ವಿರುದ್ಧ ಸಮರ ಸಾರಿರುವ ವಿಶ್ವದಲ್ಲಿ ಸದ್ಯ ಬೇರಾವ ಸಮಸ್ಯೆಗಳು ಕಾಣದಿರಬಹುದು, ಆದರೆ ಸಂಭವಿಸುತ್ತಿರುವ ಕೆಲ ಘಟನೆಗಳು ಮನುಷ್ರನ್ನು ತಲೆ ತಗ್ಗಿಸುವಂತೆ ಮಾಡಿವೆ. ಸದ್ಯ ಪಾಕಿಸ್ತಾನದಲ್ಲಿ ಇಂತಹ ಘಟನೆ ವರದಿಯಾಗಿದೆ. ಕೊರೋನಾದಿಂದ ಬಲಲುತ್ತಿರುವ ಪಾಕಿಸ್ತಾನದಲ್ಲಿ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ಡೌನ್ ಹೇರಲಾಗಿದೆ. ಹೀಗಿರುವಾಗಲೇ ಫೈಸಲಾಬಾದ್ನಲ್ಲಿ ಶಾಕಿಂಗ್ ಘಟನೆ ನಡೆದಿದೆ. ಇಲ್ಲಿ ಏಳು ಮಂದಿ ಕಾಮುಕರು, ಐದು ವರ್ಷದ ಪುಟ್ಟ ಮಗುವಿನ ರೇಪ್ ಮಾಡಿ, ಹತ್ಯೆಗೈದಿದ್ದಾರೆ. ಈ ಘಟನೆ ಬೆನ್ನಲ್ಲೇ ಇಲ್ಲಿನ ಸಿಪಿಓ ತೆಗೆದುಕೊಂಡ ನಿರ್ಧಾರಕ್ಕೆ ಸದ್ಯ ಎಲ್ಲರೂ ಭೇಷ್ ಎಂದಿದ್ದಾರೆ. ಹೌದು ಸಿಪಿಓ ಈ ಏಳು ಮಂದಿಯಲ್ಲಿ ನಾಲ್ವರನ್ನು ಎನ್ಕೌಂಡರ್ ಮಾಡಿದ್ದಾರೆ. ಆದರೆ ಮೂವರು ಅಪರಾಧಿಗಳು ಪರಾರಿಯಾಗಿದ್ದು, ಹುಡುಕಾಟ ಮುಂದುವರೆದಿದೆ. ಸದ್ಯ ವಿಶ್ವದೆಲ್ಲೆಡೆ ಸಿಪಿಓ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಪಾಕಿಸ್ತಾನದ ಫೈಸಲಾಬಾದ್ ಸಿಪಿಓ ಸೋಹೈಲ್ ಅಹಮದ್ ಚೌಧರಿಗೆ, ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪಾಕಿಸ್ತಾನದಲ್ಲಿ ನಡೆದ ಈ ಘಟನೆ ಕಳೆದ ವರ್ಷ ಭಾರತದ, ಹೈದರಾಬಾದ್ನಲ್ಲಿ ವೈದ್ಯೆ ಮೇಲೆ ನಡೆದಿದ್ದ ರೇಪ್ ಹಾಗೂ ಹತ್ಯೆ ಪ್ರಕರಣವನ್ನು ನೆನಪಿಸಿದೆ.
ವರದಿಯನ್ವಯ ಫೈಸಲಾಬಾದ್ನ ಏಳು ಮಂದಿ ಕಾಮುಕರು ಸೇರಿ, ಐದು ವರ್ಷದ ಪುಟ್ಟ ಮಗುವನ್ನು ರೇಪ್ ಮಾಡಿದ್ದಲ್ಲದೇ ಹತ್ಯೆ ಮಾಡಿದ್ದಾರೆ. ಮಗು ಲಾಕ್ಡೌನ್ ವೇಳೆ ಮನೆ ಹೊರಗೆ ಆಡುತ್ತಿದ್ದಾಗ ಈ ಘಟನೆ ನಡೆದಿದೆ.
ಈ ದುಷ್ಕರ್ಮಿಗಳು ಮಗುವನ್ನು ಪುಸಲಾಯಿಸಿ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಎಲ್ಲರೂ ಒಬ್ಬರಾದ ಬಳಿಕ ಮತ್ತೊಬ್ಬರಂತೆ ಮಗುವನ್ನು ರೇಪ್ ಮಾಡಿ ಬಳಿಕ ಹತ್ಯೆ ಮಾಡಿದ್ದಾರೆ.
ಈ ಘಟನೆ ಬೆಳಕಿಗೆ ಬಂದ ಬಳಿಕ ಪೊಲೀಸರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ. ದುಷ್ಕರ್ಮಿಗಳ ಹುಡುಕಾಡಲು ಪೊಲೀಸರಿಗೆ ಸ್ಥಳೀಯರೂ ಸಾಥ್ ನೀಡಿದ್ದಾರೆ. ಈ ಮೂಲಕ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆದರೆ ಅರೆಸ್ಟ್ ಮಾಡಲು ತೆರಳಿದಾಗ ಆರೋಪಿಗಳು ಪೊಲೀಸರ ಮೇಲೆರಗಿದ್ದು, ಅವರನ್ನು ತಡೆಯಲು ಫೈರಿಂಗ್ ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಿಪಿಓ ಸೋಹೈಲ್ ನಾಲ್ವರು ಆರೋಪಿಗಳಿಗೆ ಅಲ್ಲೇ ಗುಂಡು ಹಾರಿಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ ಉಳಿದ ಮೂವರು ತಪ್ಪಿಸಿಕೊಂಡಿದ್ದು, ಹಹುಡುಕಾಟ ಮುಂದುವರೆದಿದೆ.
ಈ ಎನ್ಕೌಂಡರ್ ಬಳಿಕ ಜನರು ಸಿಪಿಓ ಸೋಹೈಲ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ಎನ್ಕೌಂಟರ್ ಪುಟ್ಟ ಕಂದನಿಗೆ ಬಹುಬೇಗ ನ್ಯಾಯ ಒದಗಿಸಿದೆ ಎಂದಿದ್ದಾರೆ.
ಪಾಕಿಸ್ತಾನದಲ್ಲಿ ಮಕ್ಕಳ ಮೇಲಿನ ರೇಪ್ ಪ್ರಕರಣಗಳು ಬಳಷ್ಟು ವರದಿಯಾಗುತ್ತವೆ. ಆದರೆ ಇಂತಹ ಕುಕೃತ್ಯ ಎಸಗಿದವರಿಗೆ ಶಿಕ್ಷೆಯೂ ಬಹಳ ಕಠಿಣವಾಗಿದೆ.
ಜನರು ಕೂಡಾ ಇದು ಸರಿಯಾದ ನಡೆ ಇಂತಹವರಿಗೆ ಇಂತಹ ಶಿಕ್ಷೆಯೇ ನೀಡಬೇಕು ಎಂದಿದ್ದಾರೆ.