Asianet Suvarna News Asianet Suvarna News

ಪೊಲೀಸ್ ಕಸ್ಟಡಿಗೆ ಬಾಂಬರ್ ಆದಿತ್ಯ, ಕಾಂಡೋಮ್ ಜಗಳ ಕೊಲೆಯಲ್ಲಿ ಅಂತ್ಯ; ಜ.23ರ ಟಾಪ್ 10 ಸುದ್ದಿ!

ನಿರ್ಭಯ ಹತ್ಯಾಚಾರಿಗಳ ಗಲ್ಲು ಶಿಕ್ಷೆ ಸಮೀಪಿಸುತ್ತಿದ್ದಂತೆ ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡದೆ ಸುಮ್ಮನೆ ಕುಳಿತಿದ್ದಾರೆ. ಇತ್ತ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಮಧ್ಯ ಪ್ರದೇಶದ ಶಕ್ತಿ ದೇಗುಲದಲ್ಲಿ ಮಹಾ ಪೂಜೆ ನೆರವೇರಿಸಿದ್ದಾರೆ. ಮಂಗಳೂರು ಬಾಂಬರ್ ವಿಚಾರಣೆಯಲ್ಲಿ ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. ಫುಟ್ಬಾಲ್ ಪಂದ್ಯದ ವೇಳೆ ಹುಡುಗಿಗೆ ಮತ್ತಿಕ್ಕಿ ಅಭಿಮಾನಿ ಕೆಟ್ಟರೆ, ಬಿಗ್‌ಬಾಸ್‌ನಲ್ಲಿ ಮುತ್ತಿಕ್ಕಲು ಹೋದವನಿಗೆ ವಾರ್ನಿಂಗ್. ಜನವರಿ 23ರ ಟಾಪ್ 10 ಸುದ್ದಿ ಇಲ್ಲಿವೆ.

Mangaluru bomber adithya rao to condom case top 10 news of January 23
Author
Bengaluru, First Published Jan 23, 2020, 5:10 PM IST
  • Facebook
  • Twitter
  • Whatsapp

ಮನೆಯವ್ರನ್ನ ಮೀಟ್ ಮಾಡ್ತಿರಾ, ವಿಲ್ ಬರೀತಿರಾ?: ಎಲ್ಲ ಪ್ರಶ್ನೆಗೂ ಏಕೆ ಸೈಲೆಂಟ್ ಆಗಿದ್ದೀರಾ?...

Mangaluru bomber adithya rao to condom case top 10 news of January 23

ಗಲ್ಲಿನಿಂದ ಪಾರಾಗುವ ಎಲ್ಲ ದಾರಿಗಳು ಬಂದ್ ಆಗಿವೆ ಎಂದು ಗೊತ್ತಾದ ಬಳಿಕ ಮೌನಕ್ಕೆ ಶರಣಾಗಿರುವ ನಾಲ್ವರೂ ನಿರ್ಭಯಾ ಹತ್ಯಾಚಾರಿಗಳು, ಅಧಿಕಾರಿಗಳ ಯಾವ ಪ್ರಶ್ನೆಗಳಿಗೂ ಉತ್ತರಿಸದೇ ಮುಖ ತಿರುಗಿಸುತ್ತಿದ್ದಾರೆ ಎನ್ನಲಾಗಿದೆ.

ಮಧ್ಯ ಪ್ರದೇಶದ ಶಕ್ತಿ ದೇಗುಲದಲ್ಲಿ ಮಹಾ ಪೂಜೆ, ಹೋಮ ನಡೆಸಿದ ಡಿಕೆಶಿ.

Mangaluru bomber adithya rao to condom case top 10 news of January 23

ಮಧ್ಯಪ್ರದೇಶ ಧಾತಿಯಾದ ಪೀತಾಂಬರ ಪೀಠದ ಬಾಗಲ್ಮುಖಿ ಹಾಗೂ ದೂಮವತಿ ದೇಗುಲದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಡಿ.ಕೆ. ಶಿವಕುಮಾರ್ ಅವರು  ಹೋಮ, ಪೂಜೆ ನೆರವೇರಿಸಿದರು.

ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿಸಿದ್ಲು : ಕೊಂದೇ ಬಿಟ್ಟ ಪಾಪಿ !

Mangaluru bomber adithya rao to condom case top 10 news of January 23

ಕಾಂಡೋಮ್ ಬಳಸಲ್ಲ ಎಂದ ಪುರುಷನ ಜೊತೆಗೆ ಆಕೆ ಲೈಂಗಿಕ ಸಂಪರ್ಕ ಬೆಳೆಸಲು ನಿರಾಕರಿಸಿದಳು. ಆದರೆ ದುಡ್ಡುಕೊಟ್ಟಿದ್ದ ಆತ ಆಕೆ ಹೇಳಿದ್ದನ್ನು ಕೇಳಲಿಲ್ಲ. ಕಾಂಡೋಮ್ ಜಗಳ ಕೊನೆಗೆ ಕೊಲೆಯಲ್ಲಿ ಕೊನೆಯಾಯ್ತು. 

ಬಾಂಬಿಟ್ಟದ್ದು ಯಾಕೆ? ತನಿಖೆಯಲ್ಲಿ ಬಾಯ್ಬಿಟ್ಟ ಮಂಗಳೂರು ಬಾಂಬರ್‌

Mangaluru bomber adithya rao to condom case top 10 news of January 23

 ಬುಧವಾರ ರಾತ್ರಿಯಿಡಿ ಮಂಗಳೂರು ಪೊಲೀಸರು ಏರ್ಪೋರ್ಟ್‌ ಬಾಂಬರ್  ಆದಿತ್ಯ ರಾವ್‌ನನ್ನು ವಿಚಾರಣೆ ನಡೆಸಿದ್ದಾರೆ.ವಿಚಾರಣೆಯಲ್ಲಿ  ಶಾಕಿಂಗ್ ವಿಚಾರಗಳನ್ನು ಆದಿತ್ಯ ರಾವ್ ಬಾಯ್ಬಿಟ್ಟಿದ್ಧಾನೆ.

BB ಮನೆಯಲ್ಲಿ ಮುತ್ತಿಟ್ಟ ಸ್ಪರ್ಧಿ: ತುಟಿ ಸೀಳುತ್ತಾರಂತೆ ಈ ನಟಿ!

Mangaluru bomber adithya rao to condom case top 10 news of January 23

ಬಿಗ್ ಬಾಸ್ ಸೀಸನ್‌-13ರಲ್ಲಿ ಶುರುವಾಯ್ತು ಕಿಸ್ಸಿಂಗ್ ಸೀನ್‌, ಕೆಟ್ಟದಾಗಿ ವರ್ತಿಸಿ, ಪದೇ ಪದೇ ಮುತ್ತು ಕೊಟ್ಟ ನಟನಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾಳೆ ಈ ನಟಿ.

ಫುಟ್ಬಾಲ್ ಪಂದ್ಯದಲ್ಲಿ ಮತ್ತೊಬ್ಬಳಿಗೆ ಮುತ್ತು; ವೈರಲ್ ವಿಡಿಯೋದಿಂದ ಲವ್ ಬ್ರೇಕ್ಅಪ್!

Mangaluru bomber adithya rao to condom case top 10 news of January 23

ಒಂದಲ್ಲ, ಎರಡೆರಡು ಪ್ರೇಯಸಿರನ್ನು ಮೈಂಟೇನ್ ಮಾಡುವವರು ಹಲವರಿದ್ದಾರೆ. ಎಳ್ಳಷ್ಟು ಅನುಮಾನ ಬರದೆ, ಇಬ್ಬರಿಗೂ ಸಮಯ ನೀಡುತ್ತಾ, ಇಬ್ಬರ ಕೋರಿಕೆ ಈಡೇರಿಸುತ್ತಾ ಸರ್ಕಸ್ ಮಾಡುವವರನ್ನು ಮೆಚ್ಚಲೇ ಬೇಕು. ಹೀಗೆ ಇಷ್ಟು ದಿನ ಬಲಕ್ಕೊಂದು, ಎಡಕ್ಕೊಂದು ಎಂದು ಎರಡು ಹುಡುಗಿಯನ್ನು ಮೈಂಟೇನ್ ಮಾಡುತ್ತಿದ್ದ ಕಿಲಾಡಿ ಸಿಹಿ ಮುತ್ತಿನಿಂದ ಸಿಕ್ಕಿಬಿದ್ದಿದ್ದಾನೆ. ಫುಟ್ಬಾಲ್ ಪಂದ್ಯದ ವೇಳೆ ನೀಡಿದ ಮುತ್ತು ಮನೆಯಲ್ಲಿದ್ದ ಪ್ರೇಯಸಿಗೆ ನುಂಗಲಾರದ ತುತ್ತಾಗಿ ಪರಿಣಿಸಿದೆ.

KYCಗೆ ಎನ್‌ಪಿಆರ್‌ ದಾಖಲೆ: ವದಂತಿ ನಂಬಿ ಬ್ಯಾಂಕ್‌ಗೆ ದೌಡು!

Mangaluru bomber adithya rao to condom case top 10 news of January 23

ಬ್ಯಾಂಕ್‌ಗಳಲ್ಲಿ ಆಗ್ಗಿಂದಾಗ್ಗೆ ನಡೆಸುವ ಕೆವೈಸಿ (ನೋ ಯುವರ್‌ ಕಸ್ಟಮರ್‌) ದಾಖಲೆಗಳ ಪರಿಷ್ಕರಣೆ ಸಂಬಂಧ ಬ್ಯಾಂಕೊಂದು ನೀಡಿದ ಜಾಹೀರಾತು, ಗ್ರಾಹಕರನ್ನು ಕಂಗಾಲು ಮಾಡಿ, ಬ್ಯಾಂಕಿಗೆ ದೌಡಾಯಿಸುವಂತೆ ಮಾಡಿದ ಘಟನೆ ತಮಿಳುನಾಡಿನ ತೂತ್ತುಕುಡಿ ಸಮೀಪದ ಕಾಯಲ್‌ಪಟ್ಟಿಣಂ ಎಂಬಲ್ಲಿ ನಡೆದಿದೆ.

ಮಹೀಂದ್ರ XUV300 ಕ್ರಾಶ್ ಟೆಸ್ಟ್ ರಿಸಲ್ಟ್ ಬಹಿರಂಗ; ಭಾರತದ ಮತ್ತೊಂದು ಸೇಫ್ಟಿ ಕಾರು!

Mangaluru bomber adithya rao to condom case top 10 news of January 23

ಟಾಟಾ ಮೋಟಾರ್ಸ್ ಭಾರತದಲ್ಲಿ ವಾಹನ ಸುರಕ್ಷತೆಯಲ್ಲಿ ಕ್ರಾಂತಿ ಮಾಡಿದೆ. ಟಾಟಾ ನೆಕ್ಸಾನ್, ಟಾಟಾ ಅಲ್ಟ್ರೋಜ್ ಕಾರುಗಳು 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆಯೋ ಮೂಲಕ ಭಾರತದ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ನೆಕ್ಸಾನ್, ಅಲ್ಟ್ರೋಜ್ ಬಳಿಕ ಮಹೀಂದ್ರ ಕೂಡ 5 ಸ್ಟಾರ್ ರೇಟಿಂಗ್ ಪಡೆದಿದೆ.   

ಕ್ರಿಕೆಟರ್‌ ಅಯ್ಯಪ್ಪ - ಕಿರುತೆರೆ ನಟಿ ಅನು ಪೋವಮ್ಮ ಪೇಮ ಕಥೆ ರಿವೀಲ್‌! ಇಲ್ಲಿದೆ ನೋಡಿ

Mangaluru bomber adithya rao to condom case top 10 news of January 23

ಭಾರತ ಕ್ರಿಕೆಟ್‌ ತಂಡ ಫಾಸ್ಟ್‌ ಬೌಲರ್‌, ಬಿಗ್ ಬಾಸ್‌ ಸ್ಪರ್ಧಿ ಅಯ್ಯಪ್ಪ ಹಾಗೂ ಸ್ಯಾಂಡಲ್‌ವುಡ್‌ ನಟಿ ಅನು ಲವ್‌ ಸ್ಟೋರಿ ಕೇಳಿದ್ದೀರಾ? ಅವರಿಬ್ಬರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳು ಅವರ ಲವ್ ಸ್ಟೋರಿ ಕತೆ ಹೇಳುತ್ತಿದೆ.

ಜೈ ಹಿಂದ್: ದೇಶಕ್ಕೆ ನೇತಾಜಿ ಕೊಡುಗೆ ನೆನೆದ ಪ್ರಧಾನಿ ಮೋದಿ!.

Mangaluru bomber adithya rao to condom case top 10 news of January 23

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮ ಜಯಂತಿ ಅಂಗವಾಗಿ, ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ನೇತಾಜಿ ಜನ್ಮ ಜಯಂತಿ ಅಂಗವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನೇತಾಜಿ ಅವರ ಧೈರ್ಯ ಮತ್ತು ದೇಶಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲಾಗದು ಎಂದು ಹೇಳಿದ್ದಾರೆ.
 
Follow Us:
Download App:
  • android
  • ios