ಜೈ ಹಿಂದ್: ದೇಶಕ್ಕೆ ನೇತಾಜಿ ಕೊಡುಗೆ ನೆನೆದ ಪ್ರಧಾನಿ ಮೋದಿ!
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮ ಜಯಂತಿ| ನೇತಾಜಿ ನೆನೆದು ಪ್ರಧಾನಿ ಮೋದಿ ಟ್ವೀಟ್| 'ನೇತಾಜಿ ಅವರ ಧೈರ್ಯ ಮತ್ತು ದೇಶಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲಾಗದು'| ನೇತಾಜಿ ಹುಟ್ಟುಹಬ್ಬದ ಅಂಗವಾಗಿ ವಿವಿಧ ಗಣ್ಯರಿಂದ ಟ್ವೀಟ್|
ನವದೆಹಲಿ(ಜ.23): ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮ ಜಯಂತಿ ಅಂಗವಾಗಿ, ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ವೇಳೆ ನೇತಾಜಿ ಜನ್ಮ ಜಯಂತಿ ಅಂಗವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನೇತಾಜಿ ಅವರ ಧೈರ್ಯ ಮತ್ತು ದೇಶಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲಾಗದು ಎಂದು ಹೇಳಿದ್ದಾರೆ.
ಭಾರತೀಯರ ಪ್ರಗತಿ ಮತ್ತು ಯೋಗಕ್ಷೇಮಕ್ಕಾಗಿ ಟೊಂಕಕಟ್ಟಿ ನಿಂತ ನೇತಾಜಿ ಅವರಿಗೆ ಭಾರತದ ಜನತೆ ಸದಾ ಕೃತಜ್ಞರಾಗಿರುತ್ತಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ನೇತಾಜಿ ಜನ್ಮದಿನ: ಜ.23ರನ್ನು ಸಾರ್ವತ್ರಿಕ ರಜೆ ಘೋಷಿಸಿದ ಸರ್ಕಾರ!
ಈ ವೇಳೆ ನೇತಾಜಿ ತಂದೆ ಜಾನಕಿನಾಥ್ ಬೋಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಪ್ರಧಾನಿ ಮೋದಿ, ನೇತಾಜಿ ಜನ್ಮ ಹಾಗೂ ಅವರ ಮುಂದಿನ ನಡೆಗಳ ಕುರಿತು ಅವರ ತಂದೆ ಜಾನಕಿನಾಥ್ ಬೋಸ್ ಹೇಳಿದ್ದು, ನಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದ್ದಾರೆ.
ಇನ್ನು ನೇತಾಜಿ ಜನ್ಮ ಜಯಂತಿ ಅಂಗವಾಗಿ ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ್, ಕಿರಣ್ ರಿಜುಜು, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಗಣ್ಯರು ಟ್ವೀಟ್ ಮಾಡಿದ್ದಾರೆ.