ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್‌-13 ದಿನೇ ದಿನೇ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ಒಬ್ಬರು ಅವಾಚ್ಯ ಶಬ್ದಗಳನ್ನು ಬಳಸಿದರೆ, ಮತ್ತೊಬ್ಬರು ಮುಖಕ್ಕೆ ಹೊಡೆಯುತ್ತಾರೆ. ಇವರು ಸ್ಪರ್ಧಿಗಳಾ ಅಥವಾ WWF ಫೈಟರ್ಸಾ ಅನ್ನೋದೇ ವೀಕ್ಷಕರಿಗೆ ದೊಡ್ಡ ಕನ್ಫ್ಯೂಷನ್. 

ಬಿಗ್‌ಬಾಸ್‌ನಿಂದ ಹೊರಬಿದ್ದ ಚಂದನ್; ವಿನ್ನರ್ ಬಗ್ಗೆ ಕೊಟ್ರು ಶಾಕ್..!

ಬಿಗ್ ಬಾಸ್‌ ಮನೆಯಲ್ಲಿ ಉಳಿದುಕೊಳ್ಳಲು ಸ್ಪರ್ಧಿಗಳು ಅತಿರೇಕವಾಗಿ ಬಿಹೇವ್ ಮಾಡುತ್ತಾರೆ. ಪ್ರೀತಿ ಪ್ರೇಮ ಎಂದೆಲ್ಲಾ ಮೊದ ಮೊದಲ ಶುರುವಿಟ್ಟುಕೊಳ್ಳುತ್ತಾರೆ. ಅದರಲ್ಲೂ ಪಾರಸ್‌ ಛಾಬ್ರಾ ಪದೇ ಪದೇ ಮಾಹಿರಾ ಶರ್ಮಾ ಹಿಂದೆ ಹೋಗುತ್ತಿದ್ದಾರೆ. ಪಾರಸ್‌ ಮಾತನಾಡುವ ರೀತಿ ಹಾಗೂ ವರ್ತಿಸುವ ಗುಣ ಮನೆಯಲ್ಲಿರುವ ಯಾವ ಸ್ಪರ್ಧಿಗೂ ಇಷ್ಟವಾಗುತ್ತಿಲ್ಲ. ಆದರೂ ಮಹಿರಾ ಹಿಂದೆ ಬಿದ್ದು ಕಾಟ ಕೊಡುತ್ತಿದ್ದಾರೆ. 

'ನಿನಗೆ ಮುತ್ತು ಕೊಡದೇ ಹೋದರೆ ನನಗೆ ಮಂಚದಿಂದ ಏಳಲು ಸಾಧ್ಯವೇ ಇಲ್ಲ' ಎಂದು ಪಾರಸ್‌ ಹೇಳಿದಾಗ ಕೋಪಗೊಂಡ ಮಹಿರಾ 'ಮುತ್ತು ಕೊಡಲು ಬಂದ್ರೆ ನಿನ್ನ ತುಟಿ ಸೀಳುತ್ತೇನೆ' ಎಂದು ಗದರಿದ್ದಾರೆ. ಹುಷಾರ್ ಎಂದು ಎಚ್ಚರಿಸಿದ್ದಾರೆ.

Bigg Boss ವೇದಿಕೆಯಲ್ಲಿ ಡಿಪ್ಪಿ ನಮಸ್ಕಾರ ಫುಲ್ ಟ್ರೋಲ್!

ಬಿಗ್ ಬಾಸ್‌ ಮನೆ ಹೊರಗೆ ಪಾರಸ್‌ಗೆ ಗರ್ಲ್‌ ಫ್ರೆಂಡ್‌ ಇದ್ದಾರೆ. ಆದರೂ ಹೀಗೆ ವರ್ತಿಸುತ್ತಿರುವುದು ಯಾರೊಬ್ಬರಿಗೂ ಇಷ್ಟವಾಗುತ್ತಿಲ್ಲ. ಏನು ಮಹಿಮೆಯೋ ಈ ಬಾಗ್‌ಬಾಸ್‌ನದ್ದು. ಈ ಸ್ಪರ್ಧಿಗಳೆಲ್ಲಾ ಯಾಕ್ಹಿಂಗ್ ಆಡ್ತಾರೋ ಗೊತ್ತಿಲ್ಲ...

ಜನವರಿ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ