Asianet Suvarna News Asianet Suvarna News

ಮನೆಯವ್ರನ್ನ ಮೀಟ್ ಮಾಡ್ತಿರಾ, ವಿಲ್ ಬರೀತಿರಾ?: ಎಲ್ಲ ಪ್ರಶ್ನೆಗೂ ಏಕೆ ಸೈಲೆಂಟ್ ಆಗಿದ್ದೀರಾ?

ಮೌನಕ್ಕೆ ಶರಣಾದ ನಿರ್ಭಯಾ ಹತ್ಯಾಚಾರಿಗಳು| ಅಧಿಕಾರಿಗಳ ಪ್ರಶ್ನೆಗೆ ಅಪರಾಧಿಗಳ ಮೌನವೇ ಉತ್ತರ| ಕುಟುಂಬಸ್ಥರನ್ನು ಭೇಟಿಯಾಗುವ ಕುರಿತು ಬಾಯಿ ಬಿಡದ ರಾಕ್ಷಸರು| ಆಸ್ತಿ ವರ್ಗಾವಣೆಗೆ ವಿಲ್ ಬರೆಯುತ್ತೀರಾ ಎಂಬ ಪ್ರಶ್ನೆಗೂ ಮೌನವೇ ಉತ್ತರ| ಸಾವಿನ ಭಯದಿಂದ ದಿನ ದೂಡುತ್ತಿರುವ ಕಿರಾತಕರು|

Nirbhaya Convicts Silent On Last Wishes Ahead Of Execution
Author
Bengaluru, First Published Jan 23, 2020, 3:15 PM IST

ನವದೆಹಲಿ(ಜ.23): ಮಾಡಿದ ಅಪರಾಧ ಎಂದೂ ಬದಲಾಗದು. ಆದರೆ ಅಪರಾಧಿ ಬದಲಾಗಬಲ್ಲ. ಇದು ಅಪರಾಧಿ ಮತ್ತು ಅಪರಾಧದ ನಡುವೆ ಇರುವ ಏಕೈಕ ವ್ಯತ್ಯಾಸ.

ಅಪರಾಧ ಮಾಡುವಾಗ ಆತ ತೋರಿಸುವ ರಾಕ್ಷಸೀ ಪ್ರವೃತ್ತಿ, ಶಿಕ್ಷೆಯ ದಿನಗಳಲ್ಲಿ ಅದನ್ನು ನಿತ್ಯವೂ ನೆನೆಯುತ್ತಾ ಸಾವಿಗೆ ಎದುರು ನೋಡುವ ಅಸಹಾಯಕತೆಗೆ ದೂಡುತ್ತದೆ.

ಇಂತದ್ದೇ ಅಸಹಾಯಕತೆಯನ್ನು ಅನುಭವಿಸುತ್ತಿರುವ ನಿರ್ಭಯಾ ಹತ್ಯಾಚಾರಿಗಳು, ತಮ್ಮ ಪಾಪ ಕೃತ್ಯಕ್ಕೆ ಸಾವು ಕಟ್ಟಿಟ್ಟ ಬುತ್ತಿ ಎಂಬುದನ್ನು ಅರಿತು ಅಕ್ಷರಶಃ ಉಡುಗಿ ಹೋಗಿದ್ದಾರೆ.

ಡೆತ್‌ ವಾರಂಟ್‌ ಜಾರಿ ಬಳಿಕ 7 ದಿನದಲ್ಲಿ ಶಿಕ್ಷೆ ಜಾರಿ ಆಗಲಿ: ಸುಪ್ರೀಂಗೆ ಸರ್ಕಾರದ ಮೊರೆ!

ಗಲ್ಲಿನಿಂದ ಪಾರಾಗುವ ಎಲ್ಲ ದಾರಿಗಳು ಬಂದ್ ಆಗಿವೆ ಎಂದು ಗೊತ್ತಾದ ಬಳಿಕ ಮೌನಕ್ಕೆ ಶರಣಾಗಿರುವ ನಾಲ್ವರೂ ಪಾಪಿಗಳು, ಅಧಿಕಾರಿಗಳ ಯಾವ ಪ್ರಶ್ನೆಗಳಿಗೂ ಉತ್ತರಿಸದೇ ಮುಖ ತಿರುಗಿಸುತ್ತಿದ್ದಾರೆ.

ಹೌದು, ಇದೇ ಫೆ.01 ರಂದು ನೇಣುಗಂಬಕ್ಕೆ ಏರಲಿರುವ ನಿರ್ಭಯಾ ಹತ್ಯಾಚಾರಿಗಳು, ಸಾವಿನ ಭಯದಿಂದ ನರಳುತ್ತಿದ್ದಾರೆ ಎಂದು ತಿಹಾರ್ ಜೈಲು ಮೂಲಗಳು ತಿಳಿಸಿವೆ.

ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲು ಅಪರಾಧಿಗಳಿಗೆ ಅವಕಾಶ ನೀಡಲಾಗಿದ್ದು, ಯಾವ ಸದಸ್ಯರನ್ನು ಭೇಟಿಯಾಗುತ್ತೀರಾ ಎಂಬ ಅಧಿಕಾರಿಗಳ ಪ್ರಶ್ನೆಗೆ ನಾಲ್ವರೂ ಇದುವರೆಗೂ ಉತ್ತರ ನೀಡಿಲ್ಲ.

ನಿರ್ಭಯಾ ಕೇಸ್: ರೇಪ್ ಮಾಡುವಾಗ ಅಪ್ರಾಪ್ತನಾಗಿದ್ದೆ ಎಂದ ಪವನ್ ಅರ್ಜಿ ವಜಾ!

ಅಲ್ಲದೇ ತಮ್ಮ ಆಸ್ತಿಯನ್ನು ಯಾರಿಗಾದರೂ ವರ್ಗಾಯಿಸಲು ವಿಲ್ ಬರೆಯುತ್ತೀರಾ ಎಂದು ಕೇಳಲಾಗಿದ್ದು, ಇದಕ್ಕೂ ಅಪರಾಧಿಗಳು ಮೌನಕ್ಕೆ ಶರಣಾಗಿದ್ದಾರೆ. ಅವರು ಕೇಳುತ್ತಿರುವ ಒಂದೇ ಒಂದು ಪ್ರಶ್ನೆ ಗಲ್ಲುಶಿಕ್ಷೆ ತಡೆಯಲು ಬೇರೆ ಯಾವ ಮಾರ್ಗವೂ ಇಲ್ಲವೇ ಎಂಬುದು.

ಒಟ್ಟಿನಲ್ಲಿ ಘೋರ ಕೃತ್ಯವೊಂದನ್ನು ಎಸಗಿ ಮಾನವೀಯತೆಗೆ ಅಪಚಾರ ಎಸಗಿದ ಈ ನಾಲ್ವರೂ ರಾಕ್ಷಸರು, ಸಾವಿಗೆ ಹೆದರಿರುವುದು ಅವರ ನಡುವಳಿಕೆಯಿಂದಲೇ ಸ್ಪಷ್ಟವಾಗುತ್ತದೆ.

ಜನವರಿ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios