ಚಾಲಕ ಶಿವಕುಮಾರನನ್ನು ಸ್ಥಳೀಯರು ಹಾಗೂ ಸಂಚಾರಿ ಪೊಲೀಸರು ಸತತ ಒಂದು ಗಂಟೆ ಕಾಲ ಕ್ರೇನ್ ಬಳಸಿ ಕಾರ್ಯಾಚರಣೆಯಯಿಂದ ಹೊರತೆಗೆದಿದ್ದಾರೆ.

ಹುಬ್ಬಳ್ಳಿ(ಸೆ.29): ನಗರದ ಲಾರಿಯಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಚಾಲಕನನ್ನು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಹೊರ ತೆಗೆದಿರುವ ಘಟನೆ ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೇಗವಾಗಿ ಬಂದ ಮಿನಿಲಾರಿ ಇನ್ನೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಮಿನಿಲಾರಿಯ ಚಾಲಕ ಹಾಗೂ ಕ್ಲಿನರ್ ಮಿನಿಲಾರಿಯಲ್ಲಿ ಸಿಲುಕಿದ್ದರು. ಹಾವೇರಿ ಮೂಲದ ಮಿನಿಲಾರಿ ಚಾಲಕ ಶಿವಕುಮಾರ ಹಾಗೂ ಕ್ಲೀನರ್ ಈರಣ್ಣ ಎನ್ನುವರು ಲಾರಿಯಲ್ಲಿ ಸಿಲುಕಿ ಪರದಾಡುತ್ತಿದ್ದರು.‌

ಚಾಲಕ ಶಿವಕುಮಾರನನ್ನು ಸ್ಥಳೀಯರು ಹಾಗೂ ಸಂಚಾರಿ ಪೊಲೀಸರು ಸತತ ಒಂದು ಗಂಟೆ ಕಾಲ ಕ್ರೇನ್ ಬಳಸಿ ಕಾರ್ಯಾಚರಣೆಯಯಿಂದ ಹೊರತೆಗೆದಿದ್ದಾರೆ. ಇಬ್ಬರು ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹುಬ್ಬಳಿಯ ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.