Asianet Suvarna News Asianet Suvarna News

ಉಡುಗೆ ಜಾರಿ ಕಾರಿನತ್ತ ಓಡಿದ ಬೆಡಗಿ, ಹೈ ಅಲರ್ಟ್‌ನಲ್ಲಿ ಭಾರತದ ಗಡಿ; ಆ.31ರ ಟಾಪ್ 10 ಸುದ್ದಿ!

ಕೆಜಿಎಫ್ ಬೆಡಗಿ ಮೌನಿ ರಾಯ್ ಉಡುಗೆ ಜಾರಿದ ಕಾರಣ ಕಾರಿನತ್ತ ಓಡಿ ಹೋದ ಘಟನೆ ನಡೆದಿದೆ. ಭಾರತದ ಗಡಿಯಲ್ಲಿ ಉಗ್ರರ ಶಿಬಿರ ಪ್ರತ್ಯಕ್ಷವಾಗಿದ್ದು, 60 ಕಾಶ್ಮೀರ ಯುವಕರು ನಾಪತ್ತೆಯಾಗಿದ್ದಾರೆ. ಮಥುರಾದಲ್ಲಿ ಮದ್ಯ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಪ್ಯಾರಾಒಲಿಂಪಿಕ್ಸ್ ಪದಕ ವಿಜೇತರಿಗೆ ಮೋದಿ ಅಭಿನಂದನೆ, ಅಮೆರಿಕ ಕಾಲ್ಕಿತ್ತ ಬೆನ್ನಲ್ಲೇ ತಾಲಿಬಾನ್ ಕ್ರೌರ್ಯ ಸೇರಿದಂತೆ ಆಗಸ್ಟ್ 31ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

KGF Mouni roy dress to Jammu Kashmir LOC top 10 News of August 31 ckm
Author
Bengaluru, First Published Aug 31, 2021, 4:55 PM IST
  • Facebook
  • Twitter
  • Whatsapp

ಜಮ್ಮು ಕಾಶ್ಮೀರದ 60 ಯುವಕರು ಏಕಾಏಕಿ ನಾಪತ್ತೆ: LoCಯಲ್ಲಿ ಉಗ್ರರ ಶಿಬಿರ ಪ್ರತ್ಯಕ್ಷ!

KGF Mouni roy dress to Jammu Kashmir LOC top 10 News of August 31 ckm

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುವ ಲಕ್ಷಣಗಳು ಕಂಡು ಬಂದಿವೆ. ಭದ್ರತಾ ಸಂಸ್ಥೆಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಆರಂಭವಾದ ಬಳಿಕ, ನೆರೆ ರಾಷ್ಟ್ರಗಳಲ್ಲಿ ಭಯೋತ್ಪಾದಕ ಸಂಘಟನೆಗಳ ಮನೋಬಲ ಹೆಚ್ಚಾಗಿದೆ.

ಅಮೆರಿಕ ಕಾಲ್ಕಿತ್ತ ಬೆನ್ನಲ್ಲೇ ಹೆಲಿಕಾಪ್ಟರ್‌ನಲ್ಲಿ ವ್ಯಕ್ತಿಗೆ ನೇಣು ಹಾಕಿ ಕಂದಹಾರ್ ಸುತ್ತಾಡಿದ ತಾಲಿಬಾನ್!

KGF Mouni roy dress to Jammu Kashmir LOC top 10 News of August 31 ckm

ಆಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ಹಿಡಿತಕ್ಕೆ ಸಿಕ್ಕಿದೆ. ಅಮೆರಿಕ ಕಾಲ್ಕಿತ್ತ ಬೆನ್ನಲ್ಲೇ ತಾಲಿಬಾನ್‌ಗಳ ಕ್ರೌರ್ಯ ಹೆಚ್ಚಾಗಿದೆ. ಇದೀಗ ಅಮೆರಿಕ ನೆರವು ನೀಡಿದ ಕಾರಣಕ್ಕಾಗಿ ಅಮಾಯಕ ವ್ಯಕ್ತಿಯನ್ನು ಅಮೆರಿಕ ನೀಡಿದ ಹೆಲಿಕಾಪ್ಟರ್‌ಗೆ ಹಗ್ಗ ಕಟ್ಟಿ ನೇಣು ಬಿಗಿದು ಕೊಲ್ಲಲಾಗಿದೆ. ತಾಲಿಬಾನ್ ಕ್ರೌರ್ಯದ ವಿಡಿಯೋ ವೈರಲ್ ಆಗಿದೆ.

ಮಥುರಾದಲ್ಲಿ ಮದ್ಯ, ಮಾಂಸ ಮಾರಾಟ ಸಂಪೂರ್ಣ ನಿಷೇಧ

KGF Mouni roy dress to Jammu Kashmir LOC top 10 News of August 31 ckm

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣ ನಿಷೇಧಿಸಿದ್ದಾರೆ. ನಿಷೇಧಕ್ಕೆ ಯೋಜನೆಗಳನ್ನು ರೂಪಿಸಲು ಹಾಗೂ ಇತರ ವ್ಯಾಪಾರಗಳಲ್ಲಿ ತೊಡಗಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೋರಮಂಗಲದಲ್ಲಿ ಭೀಕರ ಅಪಘಾತ: ಹೊಸೂರು ಶಾಸಕರ ಮಗ, ಸೊಸೆ ಸೇರಿ 7 ಸಾವು!

KGF Mouni roy dress to Jammu Kashmir LOC top 10 News of August 31 ckm

 ಕೋರಮಂಗಲದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ತಮಿಳುನಾಡಿನ ಹೊಸೂರು ಕ್ಷೇತ್ರದ ಶಾಸಕರ ಮಗ, ಸೊಸೆ ಸೇರಿ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ಮೃತರಾದ ಕರುಣಾಸಾಗರ್ ಹಹಾಗೂ ಬಿಂದು(28) ಇಬ್ಬರೂ ವೃತ್ತಿಯಲ್ಲಿ ವೈದ್ಯರು. 

ಮತ್ತಿಬ್ಬರು ರೇಪಿಸ್ಟ್‌ಗಳ ಶೋಧಕ್ಕೆ ತ.ನಾಡಿಗೆ ಪೊಲೀಸರು

KGF Mouni roy dress to Jammu Kashmir LOC top 10 News of August 31 ckm

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಈ ಮಧ್ಯೆ ಅವರನ್ನು ಪೊಲೀಸರು ಸೋಮವಾರ ಸಂಜೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ನಡೆಸಿದರು.

Paralympics ಕಂಚು ಗೆದ್ದ ಸಿಂಗ್‌ರಾಜ್‌ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

KGF Mouni roy dress to Jammu Kashmir LOC top 10 News of August 31 ckm

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ ಪ್ಯಾರಾಥ್ಲೀಟ್‌ ಸಿಂಗ್‌ರಾಜ್‌ ಅಧಾನ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಬಿಚ್ಚಿ ಬೀಳಲಿತ್ತು ಸ್ಟೈಲಿಷ್ ಡ್ರೆಸ್: ಕಾರಿನತ್ತ ಓಡಿದ KGF ಬೆಡಗಿ

KGF Mouni roy dress to Jammu Kashmir LOC top 10 News of August 31 ckm

ಸೂಪರ್ ಹಾಟ್ ನಟಿ ಮೌನಿ ರಾಯ್ ಇತ್ತೀಚೆಗೆ ಹಸಿರು ಹೂವಿನ ಬ್ಯಾಕ್‌ಲೆಸ್, ಸ್ಲಿಟ್ ಇರೋ ಮ್ಯಾಕ್ಸಿ ಉಡುಪಿನಲ್ಲಿ ಕಾಣಿಸಿಕೊಂಡರು. ನಗರದಲ್ಲಿ ಹಾಟ್‌ ಲುಕ್‌ನಲ್ಲಿ ಹೊರಬಂದಿದ್ದಾರೆ ನಟಿ. ಆದರೆ, ದುರದೃಷ್ಟವಶಾತ್ ನಟಿಯ ಅಯ್ಯೋ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಲವರು ಅವಳು ರಿಸ್ಕಿ ಉಡುಪನ್ನು ಧರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ

ಅಕ್ರಮ ಹಣ; 5 ಗಂಟೆಗಳ ಕಾಲ 'ವಿಕ್ರಾಂತ್ ರೋಣ' ನಟಿ ವಿಚಾರಣೆ!

KGF Mouni roy dress to Jammu Kashmir LOC top 10 News of August 31 ckm

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಹೆಸರು ಕೇಳಿ ಬಂದಿದ್ದು, ಜಾರಿ ನಿರ್ದೇಶನಾಲಯ 5 ಗಂಟೆಗಳ ಕಾಲ ನಟಿಯನ್ನು ವಿಚಾರಣೆ ನಡೆಸಿದೆ. 

ರಗಡ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಇಬೈಕ್‌ಗೋ, ಬೆಲೆ ಎಷ್ಟು?

KGF Mouni roy dress to Jammu Kashmir LOC top 10 News of August 31 ckm

ಇಬೈಕ್‌ಗೋ ಎಂಬ ಕಂಪನಿಯು ಭಾರತೀಯ ಮಾರುಕಟ್ಟೆಗೆ ರಗಡ್ ಎಂಬ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಎರಡು ವೆರಿಯೆಂಟ್‌ಗಳಲ್ಲಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಭಾರತೀಯ ರಸ್ತೆಗಳಿಗೆ ಹೊಂದಾಣಿಕೆಯಾಗುವಂತೆ ಸ್ಕೂಟರ್ ವಿನ್ಯಾಸ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ

Follow Us:
Download App:
  • android
  • ios