ಅಮೆರಿಕ ಬಿಟ್ಟು ಹೋದ ಹೆಲಿಕಾಪ್ಟರ್‌ನಲ್ಲಿ ತಾಲಿಬಾನ್‌ಗಳ ಕ್ರೌರ್ಯ ಅತ್ಯಾಧುನಿಕ ಯುಎಸ್ ಬ್ಲಾಕ್ ಹಾವ್ಕ್ ಹೆಲಿಕಾಪ್ಟರ್‌ನಲ್ಲಿ ಕ್ರೌರ್ಯ ಅಮಾಯಕನ ಹೆಲಿಕಾಪ್ಟರ್‌ಗೆ ನೇಣು ಹಾಕಿ ಮೇಲಕ್ಕೆ ಹಾರಿಸಿ ಕೊಂಡ ತಾಲಿಬಾನ್

ಕಾಬೂಲ್(ಆ.31): ಆಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ಹಿಡಿತಕ್ಕೆ ಸಿಕ್ಕಿದೆ. ಅಮೆರಿಕ ಕಾಲ್ಕಿತ್ತ ಬೆನ್ನಲ್ಲೇ ತಾಲಿಬಾನ್‌ಗಳ ಕ್ರೌರ್ಯ ಹೆಚ್ಚಾಗಿದೆ. ಇದೀಗ ಅಮೆರಿಕ ನೆರವು ನೀಡಿದ ಕಾರಣಕ್ಕಾಗಿ ಅಮಾಯಕ ವ್ಯಕ್ತಿಯನ್ನು ಅಮೆರಿಕ ನೀಡಿದ ಹೆಲಿಕಾಪ್ಟರ್‌ಗೆ ಹಗ್ಗ ಕಟ್ಟಿ ನೇಣು ಬಿಗಿದು ಕೊಲ್ಲಲಾಗಿದೆ. ತಾಲಿಬಾನ್ ಕ್ರೌರ್ಯದ ವಿಡಿಯೋ ವೈರಲ್ ಆಗಿದೆ.

ನೀರಿನ ಬಾಟಲಿಗೆ 3,000 ರೂ, ಒಂದು ಪ್ಲೇಟ್ ಊಟಕ್ಕೆ 7,400 ರೂ; ಆಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ!

ಆಫ್ಘಾನಿಸ್ತಾನದ ಪತ್ರಕರ್ತರು ಈ ವಿಡಿಯೋ ಹಂಚಿಕೊಂಡಿದ್ದಾರೆ. ತಾಲಿಬಾನ್ ವ್ಯಕ್ತಿಯನ್ನು ಸಜೀವವಾಗಿ ಹೆಲಿಕಾಪ್ಟರ್ ಮೂಲಕ ನೇಣು ಬಿಗಿದು ಕೊಂದಿದ್ದಾರೆ ಅಥವಾ ವ್ಯಕ್ತಿಯನ್ನು ಕೊಂದು ಹೆಲಿಕಾಪ್ಟರ್‌ಗೆ ಕಟ್ಟಿ ಕಂದಹಾರ್ ಸುತ್ತಾಡಿದ್ದಾರೋ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Scroll to load tweet…

ಆಗಸ್ಟ್ 31ಕ್ಕೆ ಅಮೆರಿಕ ಸೇನೆ ಆಫ್ಘಾನಿಸ್ತಾನದಿಂದ ವಾಪಸ್ ಆಗಲು ತಾಲಿಬಾನ್ ಎಚ್ಚರಿಕೆ ನೀಡಿತ್ತು. ಇದರಂತೆ ಅಮೆರಿಕ ಸೇನೆ ಆಫ್ಘಾನಿಸ್ತಾನದಿಂದ ಕಾಲ್ಕಿತ್ತಿದೆ. ಆದರೆ ಅಮೆರಿಕ ನೀಡಿದ ಶಸ್ತ್ರಾಸ್ತ್ರಗಳೆಲ್ಲಾ ತಾಲಿಬಾನ್ ಕೈವಶವಾಗಿದೆ. ಇದೀಗ ಅಮೆರಿಕ ನೀಡಿರುವು ಯುಎಸ್ ಹವ್ಕ್ ಬ್ಲಾಕ್ ಹೆಲಿಕಾಪ್ಟರ್ ಮೂಲಕ ಈ ಕೃತ್ಯ ಎಸಗಿದ್ದಾರೆ.

ಮನೆ ಮನೆಗೆ ತೆರಳಿ ಹೆಣ್ಣು ಮಕ್ಕಳ ಹೊತ್ತೊಯ್ದು ಮದುವೆ; ತಾಲಿಬಾನ್ ಕ್ರೌರ್ಯ ಬಿಚ್ಚಿಟ್ಟ ಪತ್ರಕರ್ತ!

ವಿಡಿಯೋದಲ್ಲಿ ವ್ಯಕ್ತಿ ಶವ ನೇತಾಡುತ್ತಿರುವ ದೃಶ್ಯ ಕಾಣುತ್ತಿದೆ. ಇದನ್ನು ತಾಲಿಬಾನ್‌ಗಳು ನಮ್ಮ ಏರ್‌ಫೋರ್ಸ್, ಇಸ್ಲಾಮಿಕ್ ಎಮಿರೈಟ್ಸ್ ಏರ್‌ಫೋರ್ಸ್ ಕಂದಹಾರ್ ನಗರವನ್ನು ಗಸ್ತು ತಿರುಗುತ್ತಿರುವ ದೃಶ್ಯ ಎಂದು ತಾಲಿಬಾನ್‌ಗಳು ಹೇಳಿದ್ದಾರೆ. ತಾಲಿಬಾನ್ ವಿರುದ್ಧ ನಿಂತವರಿಗೆ ಇದೇ ಗತಿ ಎಂದು ತಾಲಿಬಾನ್ ಉಗ್ರರು ಘೋಷಣೆ ಕೂಗಿದ್ದಾರೆ ಎಂದು ಆಫ್ಘಾನಿಸ್ತಾನ ಪತ್ರಕರ್ತರು ಹೇಳಿದ್ದಾರೆ.

Scroll to load tweet…

ತಾಲಿಬಾನ್ ಉಗ್ರರಲ್ಲಿ ಹೆಚ್ಚಿನವರಿಗೆ ಹೆಲಿಕಾಪ್ಟರ್, ಫೈಟರ್ ಜೆಟ್ ಹಾರಿಸಲು ಬರುವುದಿಲ್ಲ. ಆದರೆ ಇದೀಗ ಅಮರಿಕ ಬಿಟ್ಟು ಹೋದ ಬಹುತೇಕ ಹೆಲಿಕಾಪ್ಟರ್ ಹಾಗೂ ಫೈಟರ್ ಜೆಟ್ ಹಾರಾಟ ನಡೆಸುತ್ತಿದ್ದಾರೆ. ಇದರ ಹಿಂದೆ ಪಾಕಿಸ್ತಾನ ಸೇನೆಯ ಕೈವಾಡವಿದೆ. ಗನ್, ಮಶಿನ್ ಗನ್, ಬಾಂಬರ್, ಮಿಸೈಲ್‌ಗಳನ್ನು ತಾಲಿಬಾನ್ ಕೈವಶ ಮಾಡಿದ್ದರೆ, ಹೆಲಿಕಾಪ್ಟರ್, ಫೈಟರ್ ಜೆಟ್ ಪಾಕಿಸ್ತಾನ ಸೇನೆಯ ರಹಸ್ಯ ಪಡೆಗೆ ನೀಡಲಾಗಿದೆ. ಪಾಕ್ ಸೇನೆಯ ಸಹಯೋಗದಲ್ಲಿ ಇದೀಗ ತಾಲಿಬಾನ್‌ಗಗಳು ತಮ್ಮ ಕ್ರೌರ್ಯ ಮುಂದುವರಿಸಿದ್ದಾರೆ ಎಂದು ಹೇಳಲಾಗುತ್ತಿದೆ.