Asianet Suvarna News

ಕೊರೋನಾಗೂ ಸಿಕ್ತು ವೀಕ್ ಆಫ್, ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್; ಮೇ.18ರ ಟಾಪ್ 10 ಸುದ್ದಿ!

ಲಾಕ್‌ಡೌನ್ 4.0 ರೂಪುರೇಷೆಗಳ ಬಗ್ಗೆ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಂತಿಮವಾಗಿ ಗೈಡ್‌ಲೈನ್ಸ್ ಘೋಷಿಸಿದ್ದಾರೆ. ಕೊರೋನಾ ಕಂಟೈನ್ಮೆಂಟ್ ಝೋನ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆಗಳಲ್ಲಿ ಅಂತರ್‌ ಜಿಲ್ಲಾ  ಬಸ್ ಸಂಚಾರ ಆರಂಭವಾಗಲಿದೆ. ಸೇನಾ ಕಾರ್ಯಚರಣೆಯಲ್ಲಿ ಹಿಜ್ಬುಲ್ ಉಗ್ರ ಹತ್ಯೆಯಾಗಿದ್ದಾನೆ. ಮೋದಿ ವಿರುದ್ಧ ಹಾಗೂ ಕಾಶ್ಮೀರ ಕನವರಿಸಿದ ಪಾಕ್ ಕ್ರಿಕೆಟಿಗ ಶಾಹಿದ್ ಆಫ್ರಿದಿಗೆ ಟೀಂ ಇಂಡಿಯಾ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣ, ಮಾಜಿ ಪ್ರಧಾನಿ ದೇವೇಗೌಡರಿಗೆ ಹುಟ್ಟು ಹಬ್ಬದ ಸಂಭ್ರಮ ಸೇರಿದಂತೆ ಮೇ.18ರ ಟಾಪ್ 10 ಸುದ್ದಿ ಇಲ್ಲಿವೆ.
 

Karnataka lockdown 4 to cricket fans top 10 news of may 18
Author
Bengaluru, First Published May 18, 2020, 5:23 PM IST
  • Facebook
  • Twitter
  • Whatsapp

ಮಂಗಳವಾರದಿಂದ ಅಂತರ್‌ ಜಿಲ್ಲಾ KSRTC ಬಸ್ ಒಡಾಟ..!...

ಕೊರೋನಾ ಕಂಟೈನ್ಮೆಂಟ್ ಝೋನ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆಗಳಲ್ಲಿ ಅಂತರ್‌ ಜಿಲ್ಲಾ  ಬಸ್ ಸಂಚಾರ ಆರಂಭವಾಗಲಿದೆ. ಇನ್ನು ಜಿಲ್ಲೆಗಳ ಒಳಗೂ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಹಿಜ್ಬುಲ್ ಮುಜಾಹಿದ್ದೀನ್‌ ಸ್ಫೋಟಕ ತಜ್ಞ ಮಟಾಶ್, ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮ!...

ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪದನಾ ಸಂಘಟನೆಯ ಒಬ್ಬಬ್ಬ ಉಗ್ರರನ್ನು ಭಾರತೀಯ ಸೇನೆ ನರಕಕ್ಕೆ ಕಳುಹಿಸುತ್ತಿದೆ. ಇತ್ತೀಚೆಗೆ ಹಿಜ್ಬುಲ್  ಕಮಾಂಡರ್ ರಿಯಾಝ್ ನೈಕೂಗೆ ನರಕ ತೋರಿಸಿದ ಬೆನ್ನಲ್ಲೇ, ಇದೀಗ IED ತಜ್ಞನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಆದರೆ ಉಗ್ರರ ಕಾಳಗದಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿರುವುದು ತೀವ್ರ ನೋವು ತಂದಿದೆ.

ಲಾಕ್‌ಡೌನ್ 4.0 ಗೈಡ್‌ಲೈನ್ಸ್ ಪ್ರಕಟ; ನಿಯಮ- ನಿರ್ಬಂಧಗಳು ಹೀಗಿವೆ ನೋಡಿ...

ಲಾಕ್‌ಡೌನ್ 4.0 ರೂಪುರೇಷೆಗಳ ಬಗ್ಗೆ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಂತಿಮವಾಗಿ ಗೈಡ್‌ಲೈನ್ಸ್ ಘೋಷಿಸಿದ್ದಾರೆ.  ರೆಡ್‌ ಝೋನ್, ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ನಾಳೆಯಿಂದ ರಾಜ್ಯದ ಒಳಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಒಂದಷ್ಟು ನಿಯಮ, ನಿರ್ಬಂಧಗಳನ್ನು ಹೇರಲಾಗಿದೆ

ದೇವೇಗೌಡರಿಗೆ ಹುಟ್ಟುಹಬ್ಬದ ಸಂಭ್ರಮ: ಮೋದಿ ಸೇರಿ ಹಲವು ಗಣ್ಯರ ಶುಭಾಶಯ!...

ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್‌ ನಾಯಕ ಎಚ್. ಡಿ. ದೇವೇಗೌಡರಿಗೆ ಹುಟ್ಟುಹಬ್ಬದ ಸಂಭದ್ರಮ| ಮಾಜಿ ಪ್ರಧಾನಿಗೆ ಹಾಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ| ಅತ್ತ ತಂದೆಗೆ ವಿಶ್ ಮಾಡಿದ ಪುತ್ರ ಕುಮಾರಸ್ವಾಮಿ| ಯಡಿಯೂರಪ್ಪ, ಸಿದ್ದರಾಮುಯ್ಯ ಸೇರಿ ಹಲವು ರಾಜಕೀಯ ಗಣ್ಯರಿಂದ ಶುಭಾಶಯಗಳ ಮಹಾಪೂರ

ಲಾಕ್‌ಡೌನ್ 4.0: ರಾಜ್ಯದಲ್ಲಿ ಮದ್ಯ ಮಾರಾಟ ಬಂದ್....!...

ಇಂದಿನಿಂದ 4ನೇ ಹಂತದ ಲಾಕ್‌ಡೌನ್ ಶುರುವಾಗಿದ್ದು, ಕರ್ನಾಟಕದಲ್ಲಿ ನಯಾ ದುನಿಯಾ ಶುರುವಾಗಲಿದೆ. ಆದ್ರೆ, ಮದ್ಯ ಮಾರಾಟ ಬಂದ್‌ ಆಗಲಿದೆ.

ಒಂದೇ ದಿನ  ಕರ್ನಾಟಕದಲ್ಲಿ 84 ಕೇಸು, ಗ್ರೀನ್ ಝೋನ್ ಜಿಲ್ಲೆಗೂ ವಕ್ಕರಿಸಿದ ಕೊರೋನಾ...

ರ್ನಾಟಕದಲ್ಲಿ  ಸೋಮವಾರರ ಬೆಳಗ್ಗಿನ ಬುಲೆಟಿನ್ ದೊಡ್ಡ ಆತಂಕ ತಂದಿದೆ. ಬರೋಬ್ಬರಿ 84 ಕೇಸುಗಳು ದಾಖಲೆಯಾಗಿವೆ. ಇದರಲ್ಲಿ ಬಹುತೇಕ ಕೇಸುಗಳು ಹೊರರಾಜ್ಯದಿಂದ ಬಂದವರು. ಕೊರೋನಾ ಮುಕ್ತ ಮೈಸೂರಿನಲ್ಲಿಯೂ ಪ್ರಕರಣ ಕಂಡುಬಂದಿದೆ. ಕರ್ನಾಟಕದ ಸೋಂಕಿತರ ಒಟ್ಟು ಸಂಖ್ಯೆ 1231 ಆಗಿದೆ. 

ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್: ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್‌?

ಕೊರೋನಾ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಹೀಗಿರುವಾಗಲೇ ಕ್ರೀಡಾಂಗಣ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿರುವುದರಿಂದ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್‌ ನಡೆಸಲು ಬಿಸಿಸಿಐಗೆ ಅವಕಾಶ ಸಿಕ್ಕಿದೆ. 

ಮೊದಲು ಫೇಲ್ ಆದ ನಿನ್ನ ದೇಶ ನೋಡ್ಕೋ: ಕಾಶ್ಮೀರ ಎಂದ ಅಫ್ರಿದಿಗೆ ಬಡಿದ ರೈನಾ!

ಕಾಶ್ಮೀರದ ಬಗ್ಗೆ ಮಾತನಾಡಿದ ಪಾಕ್ ಕ್ರಿಕೆಟಿಗ ಅಫ್ರಿದಿಗೆ ಮಾತಿನಲ್ಲೇ ಬಡಿದ ಸುರೇಶ್ ರೈನಾ| ನಾನೊಬ್ಬ ಹೆಮ್ಮೆಯ ಕಾಶ್ಮೀರಿಗ, ಕಾಶ್ಮೀರ ಯಾವತ್ತಿದ್ದರೂ ಭಾರತದ ಭಾಗ| ಕಾಶ್ಮೀರದ ಬಗ್ಗೆ ಬಾಯ್ಬಿಟ್ಟ ಅಫ್ರಿದಿಗೆ ನೆಟ್ಟಿಗರಿಂದ ಕ್ಲಾಸ್

'ಲಿಫ್ಟ್‌ ಕೊಡ್ಲಾ' ಅಂತ ಕೇಳಿ ದೊಡ್ಡ 'ಸರ್ಕಸ್‌'ನಲ್ಲಿ ಸಿಲುಕಿಕೊಂಡ ಕನ್ನಡದ ನಟಿ ಮಿಸ್ಸಿಂಗ್?...

ಮಾಡಲ್‌ ಕಮ್‌ ನಟಿ ಅರ್ಚನಾ ಗುಪ್ತಾ ಮೂರು ಕನ್ನಡ ಸಿನಿಮಾಗಳಲ್ಲಿ ಮಿಂಚಿದ ನಂತರ ಪರ ಭಾಷೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಬ್ಬಾ !!  ಅರ್ಚನಾ ಅವರ ಇಷ್ಟೊಂದು ಬೋಲ್ಡ್‌ ಫೋಟೋಸ್‌ ನೋಡಿದ್ದೀರಾ?

ಜಿಯೋ ಜತೆ ಜನರಲ್‌ ಅಟ್ಲಾಂಟಿಕ್‌ 6,600 ಕೋಟಿ ರು. ಹೂಡಿಕೆ!

ಮೊಬೈಲ್‌ ನೆಟ್‌ವರ್ಕ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಯೋ ಪ್ಲಾಟ್‌ಫಾಮ್‌ರ್‍ ಲಿ. ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಸಹಯೋಗದಲ್ಲಿ ಜನರಲ್‌ ಅಟ್ಲಾಂಟಿಕ್‌ ಸಂಸ್ಥೆಯು 6,598 ಕೋಟಿ ರು.ಗಳ ಹೂಡಿಕೆ ಮಾಡುವುದಾಗಿ ಘೋಷಿಸಿವೆ.
 

Follow Us:
Download App:
  • android
  • ios