ಸನಾತನ ಧರ್ಮ ಅಳಿಸಲಾಗದು ಎಂದ ಪವನ್ ಕಲ್ಯಾಣ್: ಕಾದು ನೋಡಿ ಎಂದ ಉದಯನಿಧಿ ಸ್ಟಾಲಿನ್
ಸನಾತನ ಧರ್ಮವನ್ನು ಅಳಿಸುವ ಬಗ್ಗೆ ಪವನ್ ಕಲ್ಯಾಣ್ ಹೇಳಿಕೆಗೆ ಉದಯನಿಧಿ ಸ್ಟಾಲಿನ್ 'ಕಾದು ನೋಡೋಣ' ಎಂದು ತಿರುಗೇಟು ನೀಡಿದ್ದಾರೆ.
ಚೆನ್ನೈ: ಸನಾತನ ಧರ್ಮವನ್ನು ಎಂದು ಅಳಿಸಲಾಗದು, ಅಳಿಸಿ ಬಿಡುತ್ತೇವೆ ಎನ್ನುವವರು ತಾವೇ ಅಳಿಸಿ ಹೋಗುವರು ಎಂದು ಹೇಳಿಕೆ ನೀಡಿದ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತಿರುಪತಿಯಲ್ಲಿ ನಿನ್ನೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಪ್ರತಿಕ್ರಿಯಿಸಿರು ತಮಿಳುನಾಡು ಸಚಿವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಕಾದು ನೋಡೋಣ ಎಂದು ಹೇಳಿಕೆ ನೀಡಿದ್ದಾರೆ.
ಆಂಧ್ರ ಪ್ರದೇಶದ ತಿರುಪತಿ ದೇಗುಲದ ಲಡ್ಡುವಿನಲ್ಲಿ ದನದ ಮಾಂಸದ ಕೊಬ್ಬಿನಾಂಶ ಇರುವ ವಿಚಾರ ಲ್ಯಾಬ್‌ನಲ್ಲಿ ಪರೀಕ್ಷೆಯಲ್ಲಿ ದೃಢವಾದ ನಂತರ ಈ ವಿಚಾರದ ದೇಶಾದ್ಯಂತ ಇರುವ ಹಿಂದೂ ಭಕ್ತರನ್ನು ಆತಂಕಕ್ಕೀಡು ಮಾಡಿತ್ತು. ಇದಾದ ನಂತರ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯೂ ಆಗಿರುವ ಪವನ್ ಕಲ್ಯಾಣ್ ಅವರು ತಿರುಪತಿಗೆ ಯಾತ್ರೆ ಕೈಗೊಂಡಿದ್ದರು. ಅಲ್ಲಿ ನಿನ್ನೆ ಮಾತನಾಡಿದ ಪವನ್ ಕಲ್ಯಾಣ್ ಅವರು ಸನಾತನ ಧರ್ಮವನ್ನು ರಕ್ಷಣೆ ಮಾಡಲು ಬಲವಾದ ರಾಷ್ಟ್ರೀಯ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಹೇಳಿದ್ದರು. ಇದೇ ವೇಳೆ ಹೆಸರು ಉದಯನಿಧಿ ಹೆಸರು ಹೇಳದೇ ಮಾತನಾಡಿದ ಪವನ್ ಕಲ್ಯಾಣ್ ಕೆಲವರು ಸನಾತನ ಧರ್ಮವನ್ನು ನಾಶ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಸನಾತನ ಧರ್ಮವನ್ನು ನಾಶ ಮಾಡಲಾಗದು. ಯಾರು ಸನಾತನ ಧರ್ಮ ನಾಶವಾಗುತ್ತದೆ ಎಂದು ಹೇಳುತ್ತಾರೋ ಅವರೇ ನಾಶವಾಗಿ ಹೋಗುವರು ಎಂದು ಹೇಳಿದ್ದರು. ಇದಕ್ಕೆ ಮಾಧ್ಯಮದವರು ಉದಯನಿಧಿ ಸ್ಟಾಲಿನ್ ಬಳಿ ಪ್ರತಿಕ್ರಿಯೆ ಕೇಳಿದ್ದು, ಆಗ ಉದಯನಿಧಿ ಕಾದು ನೋಡೋಣ ಎಂದು ಹೇಳಿದ್ದಾರೆ.
ಕಳೆದ ವರ್ಷ ತಮಿಳುನಾಡು ತಮಿಳುನಾಡು ಉಪ ಮುಖ್ಯಮಂತ್ರಿಯೂ ಆಗಿರುವ ಉದಯನಿಧಿ ಸ್ಟಾಲಿನ್ ಹಿಂದೂ ಧರ್ಮ ಮಲೇರಿಯಾ, ಡೆಂಗ್ಯೂ ಇದ್ದಂತೆ ಅದನ್ನು ಸರ್ವನಾಶ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಸುಪ್ರೀಂಕೋರ್ಟ್ ಕೂಡ ಛೀಮಾರಿ ಹಾಕಿತ್ತು.
ಕಾಲ್ನಡಿಗೆಯಲ್ಲಿ ತಿರುಪತಿ ಬೆಟ್ಟ ಹತ್ತುವಾಗ ಉಸಿರಾಟ ಸಮಸ್ಯೆಯಿಂದ ಅಸ್ವಸ್ಥಗೊಂಡ ಪವನ್ ಕಲ್ಯಾಣ್!
ಇತ್ತ ತಿರುಪತಿಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಹಿಂದೂ ಹಾಗೂ ಸನಾತನ ಧರ್ಮದ ನಂಬಿಕೆಗೆ ಹಾನಿಯುಂಟು ಮಾಡುವವರ ವಿರುದ್ಧ ಕ್ರಮಕ್ಕೆ ಬಲವಾದ ಕಾನೂನು ಜಾರಿಗೆ ತರಬೇಕು. ಸನಾತನ ಧರ್ಮ ರಕ್ಷಣೆ ಮಂಡಳಿ ಸ್ಥಾಪಿಸಬೇಕು. ಇದಕ್ಕೆ ವಾರ್ಷಿಕವಾಗಿ ಹಣಕಾಸಿನ ನೆರವು ನೀಡಬೇಕು ಎಂದು ಹೇಳಿದ್ದರು. ಅಲ್ಲದೇ ದೇಗುಲದಲ್ಲಿ ದೇವರಿಗೆ ಅರ್ಪಿಸುವ ಪ್ರಸಾದದ ಶುದ್ಧತೆಯನ್ನು ಕಾಪಾಡಲು 'ಸನಾತನ ಧರ್ಮ ಪ್ರಮಾಣಪತ್ರವನ್ನು ನೀಡುವುದನ್ನು ಜಾರಿಗೊಳಿಸಬೇಕು ಎಂದು ಹೇಳಿದ್ದರು.
ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷೆ ಅಂತ್ಯ; ಕ್ರೈಸ್ತ ಧರ್ಮದ ಅನುಯಾಯಿಯಾದ ಮಗಳಿಂದ ಮಹತ್ವದ ಘೋಷಣೆ