ದೋಡಾ(ಮೇ.18): ಜಮ್ಮ ಮತ್ತು ಕಾಶ್ಮೀರದ ಗುಂಡಾನ ಜಿಲ್ಲೆಯ ದೋಡಾ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ವಾದನೆ ಸಂಘಟನೆಯ ಸುಧಾರಿತ ಸ್ಫೋಟಕ ತಜ್ಞ(IED)ತಾಹೀರ್ ಅಹಮ್ಮದ್ ಭಟ್‌ನನ್ನು ಹತ್ಯೆ ಮಾಡಲಾಗಿದೆ. ಭಾರತೀಯ ಸೇನೆ ನಡೆಸಿದ ಕಾರ್ಯಚರಣೆಯಲ್ಲಿ ತಾಹಿರ್ ಅಹಮ್ಮದ್ ಜೊತೆ ಇನ್ನೋರ್ವ ಉಗ್ರ ಹತನಾಗಿರುವ ಶಂಕೆ ವ್ಯಕ್ತವಾಗಿದೆ.

ಭಾರತೀಯ ಸೇನಾ ಗುಂಡಿಗೆ ಹಿಜ್ಬುಲ್ ಕಮಾಂಡರ್ ಬಲಿ; ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ!

ಉಗ್ರರೊಂದಿಗನ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ(10RR) ಯೋಧ ಹುತಾತ್ಮರಾಗಿದ್ದಾರೆ. ಸದ್ಯ ಕಾರ್ಯಚರಣೆ ನಡೆಸಿದ ಸ್ಥಳದಿಂದ ಛಿದ್ರವಾಗಿರುವ ವಸ್ತುಗಳನ್ನು ಹೊರತೆಗೆಯಲಾಗುತ್ತಿದೆ. ಉಗ್ರರ ಅಡಗುತಾಣ ಗುರುತಿಸಿ ಕಾರ್ಯಚರಣೆ ನಡೆಸಲಾಗಿದೆ.  ಉಗ್ರ ತಾಹಿರ್ ಅಹಮ್ಮದ್ ಜೊತೆ ಮತ್ತೊರ್ವ ಉಗ್ರ ಹತನಾಗಿರುವ ಕುರಿತು ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ ಎಂದು ದೋಡಾ ಜಿಲ್ಲಾ ಪೊಲೀಸ್ ಮುಮ್ತಾಝ್ ಅಹಮ್ಮದ್ ಹೇಳಿದ್ದಾರೆ.

ಕೂಡಿಟ್ಟ ಹಣ, ಪಿಎಂ ಕೇರ್ಸ್ ಫಂಡ್‌ಗೆ ದಾನ ಮಾಡಿದ ಹುತಾತ್ಮ ಯೋಧನ ಪತ್ನಿ!

ತಾಹಿರ್ ಅಹಮ್ಮದ್ ಬಳಸುತ್ತಿದ್ದ AK47 ಗನ್, ಸುಧಾರಿತ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವರ್ಷ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಲ್ಲಿ ತಾಹೀರ್ ಅಹಮ್ಮದ್ ಸುಧಾರಿತ ಸ್ಫೋಟಕ ತಜ್ಞನಾಗಿ ಗುರುತಿಸಿಕೊಂಡಿದ್ದ. 2019ರ ಮಾರ್ಚ್ ತಿಂಗಳಲ್ಲಿ ಬನಿಹಾಲ್ ವಲಯದಲ್ಲಿ CRPF ಬೆಂಗಾವಲು ವಾಹನದ ಮೇಲೆ IED ಸ್ಫೋಟಿಸಿದ್ದ. 2019ರ ಏಪ್ರಿಲ್ ತಿಂಗಳಲ್ಲಿ RSS ಕಾರ್ಯಕರ್ತ ಚಂದ್ರಕಾಂತ್ ಶರ್ಮಾ ಹಾಗೂ ಮತ್ತೊರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ.

ಚೆನಾಬ್ ಕಣಿವೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ IED ತಜ್ಞ ತಾಹೀರ್ ಅಹ್ಮಮ್ಮದ್ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ನೇಮಿಸಿಕೊಳ್ಳುತ್ತಿದ್ದ. ಯುವರಿಗೆ ಹಾಗೂ ಅವರ ಕುಟುಂಬಕ್ಕೆ ಹಣದ ಆಮಿಷ ನೀಡಿ ಭಯೋತ್ವಾದನೆ ಸಂಘಟನೆಗೆ ನೇಮಿಸಿಕೊಳ್ಳುತ್ತಿದ್ದ. ಇದೀಗ ಚೆನಾಬ್ ಕಣಿವೆಯಲ್ಲಿ ಸೇನೆಯ ಕಾರ್ಯಚರಣೆ ಆರಂಭಗೊಂಡಿದೆ.