ಸಿಎಂ ಸುದ್ದಿಗೋಷ್ಠಿ: ಲಾಕ್​ಡೌನ್​ ವಿಸ್ತರಣೆ ಅನಿವಾರ್ಯ, ವಿಭಿನ್ನವಾಗಿರಲಿದೆ ಎಂದ ಬಿಎಸ್‌ವೈ...

ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯ್ಯೂರಪ್ಪನವರು ದಿಢೀರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಹಲವು ಮಾಹಿತಿಗಳು ತಿಳಿಸಿದರು.


ಮೊದಲ ಬಾರಿ ಹೋಂ ಮೇಡ್ ಮಾಸ್ಕ್ ಧರಿಸಿದ ಮೋದಿ, ಮಹತ್ವದ ಸಂದೇಶ ರವಾನೆ!

ಲಾಕ್‌ಡೌನ್ ಮುಂದುವರೆಸುವುದಾ ಅಥವಾ ತೆರವು ಮಾಡೋದಾ ಎಂಬ ಕುರಿತಾಗಿ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ನಡೆಸಿ ರಾಜ್ಯದ ಸ್ಥಿತಿಗತಿಗಳ ಕುರಿತು ಸಂವಾದ ಆರಂಭಿಸಿದ್ದಾರೆ. ಇದೇ ಮೊದಲ ಬಾರಿ ಪಿಎಂ ಮೋದಿ ಮಾಸ್ಕ್ ಧರಿಸಿದ್ದಾರೆ. ಇನ್ನು ಇದು ಹೋಂ ಮೇಡ್ ಮಾಸ್ಕ್ ಎನ್ನುವುದು ಮತ್ತೊಂದು ವಿಶೇಷ.


ಮೈಸೂರು: ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 40ಕ್ಕೆ ಏರಿಕೆ

8 ವರ್ಷದ ಬಾಲಕ ಸೇರಿದಂತೆ ಜಿಲ್ಲೆಯ ಐವರಲ್ಲಿ ಮತ್ತೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗದೆ. ಇವರೆಲ್ಲರೂ ನಂಜನಗೂಡಿನ ಜ್ಯುಬಿಲಿಯಂಟ್‌ ಕಾರ್ಖಾನೆಯ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರು.

ಕೊರೋನಾ ಫೈಟ್: ಪೊಲೀಸರ ನಿಸ್ವಾರ್ಥ ಸೇವೆಗೆ ಸಲಾಂ ಎಂದ ಕ್ಯಾಪ್ಟನ್ ವಿರಾಟ್ ಕೊಹ್ಲಿ...

ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 7,500ದ ಗಡಿ ದಾಟಿದೆ. ಇಂತಹ ಸಂದರ್ಭದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕೊರೋನಾ ವಾರಿಯರ್ಸ್‌ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಸರ್ಕಾರದ ಮುಂದೆ 10 ಜಿಲ್ಲೆಗಳ ಪಟ್ಟಿ; ಯಾವ ಕ್ಷಣದಲ್ಲಾದ್ರೂ ಸೀಲ್‌ಡೌನ್ ಘೋಷಣೆ ಸಾಧ್ಯತೆ.

ಕೊರೋನಾ ಮಾಹಾಮಾರಿ ವಿರುದ್ಧ ಸೀಲ್‌ಡೌನ್ ಸಮರ ಮುಂದುವರೆದಿದೆ. ರಾಜ್ಯ ಸರ್ಕಾರದ ಕೈಯಲ್ಲಿ ಕೊರೋನಾ ಡೇಂಜರ್ ಜಿಲ್ಲೆಗಳ ಪಟ್ಟಿಯಿದೆ. ಯಾವಾಗ ಬೇಕಿದ್ದರೂ ನಿಮ್ಮ ಜಿಲ್ಲೆಗೂ ಅಧಿಕೃತ ಸೀಲ್ ಬೀಳಬಹುದು.

ಲವ್‌ಸ್ಟೋರಿ' ಕೇಳಿ ಸಾಯಿ ಪಲ್ಲವಿ ಜಾತಿ ಹಿಂದೆ ಬಿದ್ದ ಸೋಷಿಯಲ್ ಮೀಡಿಯಾ

ಸಹಜ ಸುಂದರಿ ಸಾಯಿ ಪಲ್ಲವಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಈಕೆಯ ಮೊಡವೆ ಬಿದ್ದ ಮುಖದ ಅಂದ, ಯಾವುದೇ ಬಾಲಿವುಡ್ ಅತಿಲೋಕ ಸುಂದರಿಗಿಂತಲೂ ಹೆಚ್ಚು ಚಂದ ಎಂದು ದಕ್ಷಿಣ ಭಾರತೀಯ ಸಿನಿಮಾ ರಸಿಕರು ಗಾಢವಾಗಿ ನಂಬಿದ್ದಾರೆ.  


ಮೈಸೂರಿನಲ್ಲಿ 'ಯಶ್‌ ಅಭಿಮಾನಿಗಳ ಬಳಗ' ತಂಡದಿಂದ ಆರಕ್ಷಕರಿಗೆ ಆಹಾರ ವಿತರಣೆ!...

ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಹಗಲು ರಾತ್ರಿ ಲೆಕ್ಕ ಮಾಡದೆ ದುಡಿಯುತ್ತಿರುವ  ಆರಕ್ಷಕರಿಗೆ ಯಶ್‌ ಮೈಸೂರು ಅಭಿಮಾನಿಗಳು ಆಹಾರ ಹಾಗೂ ನೀರಿನ ಬಾಟಲ್‌ ವಿತರಣೆ ಮಾಡಿದ್ದಾರೆ.

40,000 ಕೋಟಿ ರೂ. ಸರಕಿರುವ 4 ಲಕ್ಷ ಟ್ರಕ್‌ಗಳು ಅತಂತ್ರ!...

ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ದೇಶಾದ್ಯಂತ ಜಾರಿಗೆ ತರಲಾಗಿರುವ ಲಾಕ್‌ಡೌನ್‌ ಆರ್ಥಿಕತೆಯ ಮೇಲೆ ತೀವ್ರತರದ ಪರಿಣಾಮ ಬೀರುತ್ತಿದೆ. ಸುಮಾರು 40 ಸಾವಿರ ಕೋಟಿ ರು. ಮೌಲ್ಯದ ಸರಕು ಹೊತ್ತಿರುವ 4 ಲಕ್ಷ ಟ್ರಕ್‌ಗಳು ತಮ್ಮ ಗಮ್ಯ ಸ್ಥಳವನ್ನು ತಲುಪಲು ಆಗದೆ ಸಿಲುಕಿಕೊಂಡಿವೆ.

ಯೇ ದೋಸ್ತಿ ಹಮ್ ನಹೀ ತೋಡೆಂಗೆ; ಮತ್ತೆ ಬರುತ್ತಿದೆ ಹಳೇ ಜಮಾನದ ಸೈಡ್‌ಕಾರ್ ಮೋಟರ್‌ಸೈಕಲ್!

ಭಾರತದಲ್ಲಿ ಸುಮಾರು 70, 80 ಹಾಗೂ 90ರ ಶತಕದಲ್ಲಿ ಸೈಡ್‌ಕಾರ್ ಮೋಟರ್‌ಸೈಕಲ್ ಹೆಚ್ಚು ಜನಪ್ರಿಯವಾಗಿತ್ತು. ಬಾಲಿವುಡ್ ಚಿತ್ರವಾದ ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಹಾಗೂ ಧರ್ಮೆಂದ್ರ ಅವರ ಯೋ ದೋಸ್ತಿ ಹಮ್ ನಹೀ ತೋಡೆಂಗೆ ಹಾಡು ಎಷ್ಟು ಪಾಪ್ಯುಲರ್ ಆಗಿದೆಯೋ ಈ ಹಾಡಿನಲ್ಲಿ ಬಳಸಿರುವ ಸೈಡ್‌ಕಾರ್ ಮೋಟರ್‌ಸೈಕಲ್ ಕೂಡ ಅಷ್ಟೇ ಫೇಮಸ್. ಭಾರತದಲ್ಲಿ ಇದೀಗ ಸೈಡ್‌ಕಾರ್ ಮೋಟರ್‌ಸೈಕಲ್ ಮತ್ತೆ ಬಿಡುಗಡೆಯಾಗುತ್ತಿದೆ. 


ಕೊರೋನಾ ಮತ್ತೊಂದು ಆತಂಕಕಾರಿ ಬೆಳವಣಿಗೆ, ಗುಣಮುಖರಾದವರಲ್ಲಿ ಮತ್ತೆ ಸೋಂಕು!...

 ಈ ಡೆಡ್ಲಿ ಕೊರೋನಾಗೆ ಸಂಬಂಧಿಸಿದಂತೆ ಶಾಕಿಂಗ್ ಮಾಹಿತಿಯೊಂದು ಹೊರ ಬಿದ್ದಿದ್ದು, ಚಿಕಿತ್ಸೆ ಪಡೆದು ಗುಣಮುಖರಾದವರಲ್ಲೂ ಮತ್ತೆ ಈ ಸೋಂಕು ಪತ್ತೆಯಾಗಿದೆ.