MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಇಡೀ ದೇಶದ ಗಮನ ಸೆಳೆದಿದ್ದ ಲಕ್ಕುಂಡಿಯ 47 ದಿನಗಳ ಉತ್ಖನನಕ್ಕೆ ತೆರೆ; ಇಷ್ಟು ದಿನ ಸಿಕ್ಕಿದ್ದೇನು?

ಇಡೀ ದೇಶದ ಗಮನ ಸೆಳೆದಿದ್ದ ಲಕ್ಕುಂಡಿಯ 47 ದಿನಗಳ ಉತ್ಖನನಕ್ಕೆ ತೆರೆ; ಇಷ್ಟು ದಿನ ಸಿಕ್ಕಿದ್ದೇನು?

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ, ರಿತ್ತಿ ಕುಟುಂಬಕ್ಕೆ ವಿಜಯನಗರ ಕಾಲದ ಚಿನ್ನದ ನಿಧಿ ಸಿಕ್ಕಿದ ನಂತರ ಆರಂಭವಾದ 47 ದಿನಗಳ ಉತ್ಖನನ ಕಾರ್ಯವು ಅಂತ್ಯಗೊಂಡಿದೆ.  ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬವನ್ನು ಗೌರವಿಸಲಾಗಿದೆ.

1 Min read
Author : Mahmad Rafik
Published : Mar 12 2026, 10:15 AM IST
Share this Photo Gallery
  • FB
  • TW
  • Linkdin
  • Whatsapp
15
ಗದಗ ಜಿಲ್ಲೆಯ ಲಕ್ಕುಂಡಿ
Image Credit : Asianet News

ಗದಗ ಜಿಲ್ಲೆಯ ಲಕ್ಕುಂಡಿ

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿದ್ದ 47 ದಿನಗಳ ಉತ್ಖನನ ಕಾರ್ಯಕ್ಕೆ ತೆರೆ ಎಳೆಯಲಾಗಿದೆ. ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಅಂಗಳದಲ್ಲಿ ಜನವರಿ 16ರಿಂದ ಉತ್ಖನನ ಕಾರ್ಯ ನಡೆಸಲಾಗುತ್ತಿತ್ತು. ಇದೀಗ ಉತ್ಖನನ ಕಾರ್ಯವನ್ನು ನಿಲ್ಲಿಸಲಾಗಿದೆ.

25
 ರಿತ್ತಿ ಕುಟುಂಬ
Image Credit : Asianet News

ರಿತ್ತಿ ಕುಟುಂಬ

ಜನವರಿ 10ರಂದು ಲಕ್ಕುಂಡಿ ಗ್ರಾಮದ ರಿತ್ತಿ ಕುಟುಂಬ ತಮ್ಮ ಹಳೆಮನೆಯನ್ನು ಕೆಡವಲಾಗಿತ್ತು. ಈ ವೇಳೆ 470 ಗ್ರಾಂದಷ್ಟು ತೂಕದ ಚಿನ್ನ ಸಿಕ್ಕಿತ್ತು. ಈ ಎಲ್ಲಾ ಚಿನ್ನ ವಿಜಯನಗರ ಕಾಲದ ಆಭರಣ. ಈ ಚಿನ್ನದ ನಿಧಿ ಸುಮಾರು 500ರಿಂದ 600 ವರ್ಷಗಳ ಹಿಂದಿನ ವಿಜಯನಗರ ಕಾಲದ ಅರಸರ ಅವಧಿಯ ಆಭರಣಗಳು ಇರಬಹುದು ಎಂದು ತಜ್ಞ ಡಾ. ಎಂ.ಎಸ್. ಕೃಷ್ಣಮೂರ್ತಿ ಅನುಮಾನ ವ್ಯಕ್ತಪಡಿಸಿದ್ದಾರೆ.

Related Articles

Related image1
101 ದೇವಸ್ಥಾನ, 101 ಬಾವಿಗಳ ಉತ್ಖನನ: ಲಕ್ಕುಂಡಿ ಜನರನ್ನು ಊರಿಂದಾಚೆ ಕಳಿಸೋದು ಅನಿವಾರ್ಯ; ಎಚ್.ಕೆ. ಪಾಟೀಲ
Related image2
ನಂಗೆ ಬಂಗಾರದ ವಾಸನೆ ಬರ್ತಿದೆ: ಲಕ್ಕುಂಡಿಯಲ್ಲಿ ಪ್ರತ್ಯಕ್ಷನಾದ ಪ್ರಖ್ಯಾತ ಕಳ್ಳ ಶಿಗ್ಲಿ ಬಸ್ಯಾ!
35
ಕೋಟೆ ವೀರಭದ್ರೇಶ್ವರ ದೇವಸ್ಥಾನ ಅಂಗಳ
Image Credit : Asianet News

ಕೋಟೆ ವೀರಭದ್ರೇಶ್ವರ ದೇವಸ್ಥಾನ ಅಂಗಳ

ಕೋಟೆ ವೀರಭದ್ರೇಶ್ವರ ದೇವಸ್ಥಾನ ಅಂಗಳದಲ್ಲಿ ಸುಮಾರು 13 ಅಡಿ ಆಳದವರೆಗೂ ಗುಂಡಿ ತೆಗೆದು ಉತ್ಖನನ ನಡೆಸಲಾಗಿತ್ತು. ಉತ್ಖನನ ಸಂದರ್ಭದಲ್ಲಿ ಶಿವಲಿಂಗ, ಪಾಣಿಪೀಠ, ನಾಗರ‌ ಶಿಲೆಗಳು, ಬಿಲ್ಲೆ, ಮೂಳೆ ತುಣುಕುಗಳು, ಪಚ್ಚೆ ಕಲ್ಲು, ಹವಳ, ಕವಡೆ, ಮಡಿಕೆ ಚೂರು ಸೇರಿದಂತೆ ವಿಧ ರೀತಿಯ ವಿಗ್ರಹಗಳು ಸೇರಿದಂತೆ 50ಕ್ಕೂ ಅಧಿಕ ಪ್ರಾಚ್ಯಾವಶೇಷ ಪತ್ತೆಯಾಗಿದ್ದವು.

45
ಗುಂಡಿ ಮುಚ್ಚುವ ಕಾರ್ಯ
Image Credit : Asianet News

ಗುಂಡಿ ಮುಚ್ಚುವ ಕಾರ್ಯ

ಇಂದು ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP - Standard Operating Procedure) ಮೂಲಕ ಗುಂಡಿ ಮುಚ್ಚುವ ಕಾರ್ಯವನ್ನು ನಡೆಸಲಾಗುತ್ತಿದೆ. ಕೆಳಭಾಗದಲ್ಲಿ ತಾಡಪತ್ರೆ, ಮರಳು, ಇಟ್ಟಿಗೆ ಇಟ್ಟು ಅವುಗಳ ಮೇಲೆ ಮಣ್ಣು ಹಾಕಲಾಗುತ್ತದೆ. ನಂತರ ಜೆಸಿಬಿ ಮೂಲಕ ಗುಂಡಿಗಳನ್ನು ಮುಚ್ಚಲಾಗಿದೆ.

ಇದನ್ನೂ ಓದಿ: ಲಕ್ಕುಂಡಿ ಹಳೇ ಹಂಡೆಯಲ್ಲಿ ಗೋಲ್ಡನ್ ಕವರ್ ಚಾಕ್ಲೆಟ್ ಹಾಕಿ 22 ಲಕ್ಷ ದೋಚಿದ್ದ ಮೌಲ್ವಿ ಅರೆಸ್ಟ್

55
ರಿತ್ತಿ ಕುಟುಂಬಕ್ಕೆ ಸರ್ಕಾರದಿಂದ ಗೌರವ
Image Credit : Asianet News

ರಿತ್ತಿ ಕುಟುಂಬಕ್ಕೆ ಸರ್ಕಾರದಿಂದ ಗೌರವ

ತಮಗೆ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ರಿತ್ತಿ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಬಹುಮಾನದೊಂದಿಗೆ ನಿವೇಶನ ನೀಡಲಾಗಿತ್ತು. ಇತ್ತೀಚೆಗಷ್ಟೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿವೇಶನ ಪತ್ರ ಹಸ್ತಾಂತರಿಸಿದ್ದರು. ಗಣರಾಜ್ಯೋತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ರಿತ್ತಿ ಕುಟುಂಬದ ಸದಸ್ಯರನ್ನು ಗೌರವಿಸಿದ್ದರು.

ಇದನ್ನೂ ಓದಿ: ಲಕ್ಕುಂಡಿಗೂ ಮೊದಲು ನಡೆದಿತ್ತು ಅಚ್ಚರಿ, 17000 ವರ್ಷ ಹಿಂದಿನ ಅಮೂಲ್ಯ ಸಂಪತ್ತು ಪತ್ತೆ ಹಚ್ಚಿದ್ದ ನಾಯಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಲಕ್ಕುಂಡಿ
ಬಂಗಾರದ ನಿಧಿ
ಚಿನ್ನ
ಕರ್ನಾಟಕ ಸುದ್ದಿ
Latest Videos
Recommended Stories
Recommended image1
ಮಡಿಕೇರಿಯ ಭಾಗಮಂಡಲದಲ್ಲಿ ಲೀವಿಂಗ್ ಟುಗೆದರ್ ಜೋಡಿಯ ಕೊಲೆ: ಮಹಿಳೆ ಸೋದರನಿಂದಲೇ ಕೃತ್ಯ
Recommended image2
ಬೀದರ್: ಶಾಲಾ ಕಟ್ಟಡದಿಂದ ಜಿಗಿದು 10ನೇ ಕ್ಲಾಸ್ ಬಾಲಕಿ ಸಾವಿಗೆ ಶರಣು
Recommended image3
CM Siddaramaiah ಅಭಿವೃದ್ಧಿಗಾಗಿ ಸಾಲ ಮಾಡಿದ್ದಾರೆ, ಅಮೆರಿಕ, ಚೀನಾ ಕೂಡ ಸಾಲ ಮಾಡಿವೆ: ಶಿವಲಿಂಗೇಗೌಡ ತಿರುಗೇಟು
Related Stories
Recommended image1
101 ದೇವಸ್ಥಾನ, 101 ಬಾವಿಗಳ ಉತ್ಖನನ: ಲಕ್ಕುಂಡಿ ಜನರನ್ನು ಊರಿಂದಾಚೆ ಕಳಿಸೋದು ಅನಿವಾರ್ಯ; ಎಚ್.ಕೆ. ಪಾಟೀಲ
Recommended image2
ನಂಗೆ ಬಂಗಾರದ ವಾಸನೆ ಬರ್ತಿದೆ: ಲಕ್ಕುಂಡಿಯಲ್ಲಿ ಪ್ರತ್ಯಕ್ಷನಾದ ಪ್ರಖ್ಯಾತ ಕಳ್ಳ ಶಿಗ್ಲಿ ಬಸ್ಯಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved