40,000 ಕೋಟಿ ರೂ. ಸರಕಿರುವ 4 ಲಕ್ಷ ಟ್ರಕ್‌ಗಳು ಅತಂತ್ರ!

40000 ಕೋಟಿ ಸರಕಿರುವ 4 ಲಕ್ಷ ಟ್ರಕ್‌ಗಳು ಅತಂತ್ರ!| ಲಾಕ್‌ಡೌನ್‌: ಮುಂದೆ ಸಾಗಲಾಗದೆ ಎಲ್ಲೆಂದರಲ್ಲಿ ಬಾಕಿ

Truckers Demand Relief Package from Govt as Lockdown Leaves Them in Limbo

ನವದೆಹಲಿ(ಏ.11); ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ದೇಶಾದ್ಯಂತ ಜಾರಿಗೆ ತರಲಾಗಿರುವ ಲಾಕ್‌ಡೌನ್‌ ಆರ್ಥಿಕತೆಯ ಮೇಲೆ ತೀವ್ರತರದ ಪರಿಣಾಮ ಬೀರುತ್ತಿದೆ. ಸುಮಾರು 40 ಸಾವಿರ ಕೋಟಿ ರು. ಮೌಲ್ಯದ ಸರಕು ಹೊತ್ತಿರುವ 4 ಲಕ್ಷ ಟ್ರಕ್‌ಗಳು ತಮ್ಮ ಗಮ್ಯ ಸ್ಥಳವನ್ನು ತಲುಪಲು ಆಗದೆ ಸಿಲುಕಿಕೊಂಡಿವೆ.

ಲಾಕ್‌ಡೌನ್‌ ಕಾರಣ ಮುಂದೆ ಸಾಗಲು ಆಗದ ಕಾರಣ ಚಾಲಕರು ಹಾಗೂ ಕ್ಲೀನರ್‌ಗಳು ಟ್ರಕ್ಕನ್ನು ಅಲ್ಲೇ ಬಿಟ್ಟು ತಮ್ಮ ಊರುಗಳಿಗೆ ತೆರಳಿದ್ದಾರೆ. ಇನ್ನು ಕೆಲವು ಟ್ರಕ್‌ಗಳು ಗಮ್ಯ ಸ್ಥಳ ತಲುಪಿದ್ದರೂ ಆ ಸರಕನ್ನು ಇಳಿಸಿಕೊಳ್ಳಲು ಕೂಲಿ ಕಾರ್ಮಿಕರು ಇಲ್ಲ. ಈ ಕಾರಣ ಆರ್ಥಿಕತೆ ಮುಂದೆ ಚಲಿಸಲು ನೆರವಾಗುತ್ತಿದ್ದ ಈ ಟ್ರಕ್‌ಗಳ ಗಾಲಿ ಮುಂದೆ ಸಾಗದೇ ಆರ್ಥಿಕತೆಯ ಚಕ್ರಕ್ಕೂ ಹೊಡೆತ ಕೊಟ್ಟಿವೆ. ಶೇ.90ರಷ್ಟುಟ್ರಕ್‌ಗಳು ಈ ರೀತಿ ಸಿಲುಕಿವೆ.

ಮುಸ್ಲಿಂ ಸಮುದಾಯ ನಿಂದನೆ: 15 ಮಂದಿ ಹಿಂದೂ ಯುವಕರಿಂದ ಮುಚ್ಚಳಿಕೆ

‘ನಮ್ಮ ಟ್ರಕ್‌ಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಲು 3-4 ದಿನ ತೆಗೆದುಕೊಳ್ಳುತ್ತವೆ. ಆದರೆ ಅವು ಸಾಗುವ ಹಂತದಲ್ಲೇ ಲಾಕ್‌ಡೌನ್‌ ಘೋಷಣೆ ಆಗಿ ರಸ್ತೆಗಳನ್ನು ಸೀಲ್‌ ಮಾಡಲಾಯಿತು. ಹೀಗಾಗಿ ನಿಗದಿತ ಸ್ಥಳ ತಲುಪಲು ಆಗದೇ ಲಕ್ಷಾಂತರ ಟ್ರಕ್‌ಗಳು ಸರಕು ಹೊತ್ತು ರಸ್ತೆ ಬದಿ, ಗೋದಾಮುಗಳು, ಕಾರ್ಖಾನೆಗಳು ಮತ್ತು ಸಾರಿಗೆ ಕಚೇರಿಗಳಲ್ಲಿ ನಿಲುಗಡೆಯಾಗಿವೆ’ ಎಂದು ಅಖಿಲ ಭಾರತ ಸಾರಿಗೆ ಕಾಂಗ್ರೆಸ್‌ ಅಧ್ಯಕ್ಷ ಕುಲ್ತರಣ ಸಿಂಗ್‌ ಅತ್ವಾಲ್‌ ಹೇಳಿದರು. ಇದರಲ್ಲಿ ಕಾರು, ದ್ವಿಚಕ್ರ ವಾಹನ, ಫ್ರಿಜ್‌, ಎ.ಸಿ., ವಾಷಿಂಗ್‌ ಮಷಿನ್‌ ಹಾಗೂ ಉದ್ಯಮದ ಕಚ್ಚಾ ವಸ್ತು ಸಾಗಿಸುವ ಲಾರಿಗಳು ಹೆಚ್ಚಿವೆ.

Latest Videos
Follow Us:
Download App:
  • android
  • ios