ಸಿಎಂ ಸುದ್ದಿಗೋಷ್ಠಿ: ಲಾಕ್​ಡೌನ್​ ವಿಸ್ತರಣೆ ಅನಿವಾರ್ಯ, ವಿಭಿನ್ನವಾಗಿರಲಿದೆ ಎಂದ ಬಿಎಸ್‌ವೈ

ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯ್ಯೂರಪ್ಪನವರು ದಿಢೀರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಹಲವು ಮಾಹಿತಿಗಳು ತಿಳಿಸಿದರು.

lockdown will be continued In State till april 30 Says Yediyurappa

ಬೆಂಗಳೂರು, (ಏ.11): ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆ ಅನಿವಾರ್ಯ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯ್ಯೂರಪ್ಪನವರು ಘೋಷಿಸಿದ್ದಾರೆ.

"

ಇಂದು (ಶನಿವಾರ) ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ನಡೆದ ಸಂವಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್‌ವೈ. ಮುಂದಿನ 15 ದಿನಗಳ ಕಾಲ ಲಾಕ್‌ಡೌನ್‌ ವಿಸ್ತರಣೆ ಅನಿವಾರ್ಯವಾಗಿದ್ದು,  ಶೀಘ್ರದಲ್ಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಲಾಕ್ ಡೌನ್, ಸೀಲ್ ಡೌನ್ ಇತ್ಯಾದಿ : ಯಡಿಯೂರಪ್ಪ-ಮೋದಿ ನಡುವಿನ ಮಾತುಕತೆ

ಕರೋನಾ ವೈರಸ್​ ತಡೆಗಟ್ಟಲು ಲಾಕ್​​ಡೌನ್​ ಅನಿವಾರ್ಯ ಆಗಿರುವುದರಿಂದ ಮುಂದಿನ 15 ದಿನಗಳ ಕಾಲ ಮುಂದುವರಿಸಲಾಗುವುದು .ಯಾವುದೇ ಕಾರಣಕ್ಕೂ ಲಾಕ್​​ಡೌನ್ ಸಡಿಲ ಆಗಬಾರದು. ಇನ್ನು 15 ದಿನ ಲಾಕ್​ಡೌನ್ ಅನಿವಾರ್ಯ ಎಂದು ಪ್ರಧಾನಿ ಮೋದಿ ಇಂಗಿತ ವ್ಯಕ್ತಪಡಿಸಿದ್ದಾಗಿ ತಿಳಿಸಿದರು. 

ಮುಂದಿನ ದಿನಗಳ ಲಾಕ್​ಡೌನ್ ವಿಭಿನ್ನವಾಗಿರಲಿದೆ. ಇನ್ನು ಎರಡ್ಮೂರು ದಿನದಲ್ಲಿ ಲಾಕ್​ಡೌನ್ ಮಾರ್ಗ ಸೂಚಿ ಬಿಡುಗಡೆ ಮಾಡಲಾಗುವುದು ಎಂದರು.

ಬಿಎಸ್‌ವೈ ಸುದ್ದಿಗೋಷ್ಠಿಯ ಮುಖ್ಯಾಂಶಗಳು
*ಮೀನುಗಾರಿಕೆ ಮತ್ತು ಸಂಸ್ಕರಣಾ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ, ಕರಾವಳಿ ಜಿಲ್ಲೆಯಲ್ಲಿ ಮೀನುಗಾರಿಕೆಗೆ ಉಪಯೋಗ
* ಆರೋಗ್ಯ ಸೇತು ಮೊಬೈಲ್ ಆಪ್ ಜನಪ್ರಿಯಗೊಳಿಸಲು ಕರೆ, ಇದರಿಂದ ಮತ್ತಷ್ಟು ಜಾಗೃತಿ
*ಲಾಕ್‌ಡೌನ್‌ ಯಾವುದೇ ಕಾರಣಕ್ಕೂ ಸಡಿಲಗೊಳಿಸದಿರಲು ಸೂಚನೆ
* ರಾಜ್ಯದೊಂದಿಗೆ ಕೇಂದ್ರ ಸರ್ಕಾರ ಯಾವತ್ತೂ ಇರುತ್ತದೆ ಎಂದು ಅಭಯ
* ಲಾಕ್‌ಡೌನ್ ವಿಸ್ತರಣೆಯ ಮಾರ್ಗ ಸೂಚಿಗಳನ್ನು ಒಂದೆರಡು ದಿನಗಳಲ್ಲಿ ತಿಳಿಸಲಾಗುವುದು
* ವೈದ್ಯಕೀಯ ಸಿಬ್ಬಂದಿಗಳ ಜೊತೆ ಅನುಚಿತ ವರ್ತನೆ ತೋರಿದ್ರೆ ಕಾನೂನು ಕ್ರಮ
* ಮುಂದಿನ ಲಾಕ್ ಡೌನ್,,ಈಗ ಇರುವುದಕ್ಕಿಂತ ವಿಭಿನ್ನವಾಗಿ ಇರುತ್ತದೆ.
* 3ನೇ ಸ್ಥಾನದಲ್ಲಿ ಇದ್ದ ಕರ್ನಾಟಕ ಈಗ ಹನ್ನೊಂದನೇ ಸ್ಥಾನಕ್ಕೆ ಇಳಿಕೆಯಾಗಿದೆ ಏರಿದೆ.
* ಕೃಷಿಕರು ಬೆಳೆದ ಯಾವುದೇ ಉತ್ಪನ್ನ ಗಳನ್ನು ಟೋಲ್ ಗಳಲ್ಲಿ ತಡೆಯಬಾರದು.

Latest Videos
Follow Us:
Download App:
  • android
  • ios