ಕೊರೋನಾ ಮತ್ತೊಂದು ಆತಂಕಕಾರಿ ಬೆಳವಣಿಗೆ, ಗುಣಮುಖರಾದವರಲ್ಲಿ ಮತ್ತೆ ಸೋಂಕು!

ಕೊರೋನಾ ವೈರಸ್ ಸಂಬಂಧಿತ ಮತ್ತೊಂದು ಶಾಕಿಂಗ್ ಮಾಹಿತಿ ಬಹಿರಂಗ| ಗುಣಮುಖರಾದವವರಲ್ಲಿ ಮತ್ತೆ ಸೋಂಕು| ಇದಕ್ಕೇನು ಕಾರಣ?

South Korea reports recovered coronavirus patients testing positive again

ಸಿಯೋಲ್(ಏ.11): ಚೀನಾದ ವುಹಾನ್‌ ನಗರದಲ್ಲಿ ಅಪಾರ ಸಾವು ನೋವುಂಟು ಮಾಡಿದ್ದ ಮಾರಕ ಕೊರೋನಾ ವೈರಸ್ ನೋಡ ನೋಡುತ್ತಿದ್ದಂತೆಯೇ ಇಡೀ ಜಗತ್ತಿಗೆ ವ್ಯಾಪಿಸಿದೆ. ಈ ವೈರಸ್‌ಗೆ ಬಲಿಯಾದವರ ಸಂಖ್ಯೆ ಲಕ್ಷಕ್ಕೂ ಅಧಿಕವಾಗಿದ್ದು, ಸೋಂಕಿತರ ಸಂಖ್ಯೆ 17 ಲಕ್ಷ ದಾಟಿದೆ. ಭಾರತದಲ್ಲೂ ಸೋಂಕಿತರ ಸಂಖ್ಯೆ ಒಂದು ಸಾವಿರದ ಐನೂರು ದಾಟಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಲಾಕ್‌ಡೌನ್ ಮತ್ತಷ್ಟು ದಿನ ವಿಸ್ತರಿಸುವ ಸಾಧ್ಯತೆ ಇದೆ. ಹೀಗಿರುವಾಗ ಈ ಡೆಡ್ಲಿ ಕೊರೋನಾಗೆ ಸಂಬಂಧಿಸಿದಂತೆ ಶಾಕಿಂಗ್ ಮಾಹಿತಿಯೊಂದು ಹೊರ ಬಿದ್ದಿದ್ದು, ಚಿಕಿತ್ಸೆ ಪಡೆದು ಗುಣಮುಖರಾದವರಲ್ಲೂ ಮತ್ತೆ ಈ ಸೋಂಕು ಪತ್ತೆಯಾಗಿದೆ.

ಹೌದು ದಕ್ಷಿಣ ಕೊರಿಯಾ ಅಧಿಕಾರಿಗಳು ಶುಕ್ರವಾರ ಇಂತುದ್ದೊಂದು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದು, ಚಿಕಿತ್ಸೆ  ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದ 91 ಮಂದಿಯಲ್ಲಿ ಮತ್ತೆ ಕೊರೋಆ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ. 

ಜ್ಯುಬಿಲಿಯಿಂಟ್‌ ಮೊದಲ ಸೋಂಕಿತ ವ್ಯಕ್ತಿ ಗುಣಮುಖ

ಕೊರಿಯಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಇಲಾಖೆಯ ಅಧಿಕಾರಿ ಜ್ಯೋಂಗ್ ಉನ್ ಕ್ಯೋಂಗ್ ಈ ಸಂಬಂಧ ವಿವರಿಸಿದ್ದು, ಗುಣಮುಖರಾಗಿ ಮನೆಗೆ ತೆರಳಿದ್ದವರಲ್ಲಿ ಮತ್ತೆ ಸೋಂಕು ಕಾಣಿಸಿಕೊಮಡಿದೆ. ಈ ಸೋಂಕು ಮತ್ತೆ ತಗುಲಿದ್ದಲ್ಲ ಬದಲಾಗಿ ವೈರಾಣುಗಳು ಮತ್ತೆ ರೀ ಆಕ್ಟಿವೇಟ್ ಆಗಿವೆ ಎಂದಿದ್ದಾರೆ. ಆದರೆ ನಿಜಕ್ಕೂ ಹೀಗೇ ಆಗಿದಾ? ಅಥವಾ ಬೇರೇನಾದರೂ ಕಾರಣವಿದೆಯಾ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ  ಎಂದೂ ತಿಳಿಸಿದ್ದಾರೆ.

ಇನ್ನು ಈ ಮಾಹಿತಿ ಹೊರ ಬಿದ್ದ ಬೆನ್ನಲ್ಲೇ ಸೋಂಕಿತರನ್ನು ಸರಿಯಾಗಿ ಪರೀಕ್ಷಿಸದಿರುವುದರಿಂದ ಇಂತ ಎಡವಟ್ಟು ಸಂಭವಿಸಿರಬಹುದು ಎಂಬುವುದು ತಜ್ಞರ ಅಭಿಪ್ರಾಯವಾಗಿದೆ. ಸದ್ಯ ದಕ್ಷಿಣ ಕೊರಯಾದಲ್ಲಿ ಒಟ್ಟು ಏಳು ಸಾವಿರಕ್ಕೂ ಅಧಿಕ ಕೊರೋನಾ ಸೋಂಕಿತರಿದ್ದಾರೆ.

ಇನ್ನು ಹೊಸ ಕೊರೋನಾ ಸೋಂಕಿತ ಪ್ರಕರಣಗಳಲ್ಲಿ ಯಾರಿಗೂ ಜ್ವರ, ಕೆಮ್ಮಿನ ಲಕ್ಷಣಗಳು ಗೋಚರಿಸುತ್ತಿಲ್ಲ ಎಂಬ ಅಂಶ ಬಹಿರಂಗಪಡಿಸಿತ್ತು. ಇದರ ಬೆನ್ನಲ್ಲೇ ದಕ್ಷಿಣ ಕೊರಿಯಾ ನೀಡಿರುವ ಮಾಹಿತಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. 

 

Latest Videos
Follow Us:
Download App:
  • android
  • ios