ಬೀದರ್: ಶಾಲಾ ಕಟ್ಟಡದಿಂದ ಜಿಗಿದು 10ನೇ ಕ್ಲಾಸ್ ಬಾಲಕಿ ಸಾವಿಗೆ ಶರಣು
Girl jumps from school building school building: ಬೀದರ್‌ನ ಭೆಮಳಖೇಡ ಗ್ರಾಮದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲಾ ಕಟ್ಟಡದಿಂದ ಜಿಗಿದು ಸಾವಿಗೆ ಶರಣಾಗಿದ್ದಾಳೆ. ಪ್ರಾರ್ಥನೆ ವೇಳೆ ತರಗತಿಯಲ್ಲೇ ಉಳಿದಿದ್ದ ಬಾಲಕಿಯ ಸಾವಿಗೆ ಶಾಲೆಯ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

ಶಾಲಾ ಕಟ್ಟಡದಿಂದ ಜಿಗಿದು 16 ವರ್ಷದ ಬಾಲಕಿ ಸಾವಿಗೆ ಶರಣು
ಬೀದರ್: ಶಾಲಾ ಕಟ್ಟಡದಿಂದ ಜಿಗಿದು 16 ವರ್ಷದ ಬಾಲಕಿ ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ನಡೆದಿದೆ. ಬಾಲಕಿ ಇಲ್ಲಿನ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು.
ಶಾಲೆಯ ಪ್ರಾರ್ಥನೆ ಮುಗಿದ ಬಳಿಕ ಶಾಲಾ ಕಟ್ಟಡದಿಂದ ಜಿಗಿದ ಬಾಲಕಿ
ಶಾಲೆಯ ಪ್ರಾರ್ಥನೆ ಮುಗಿದ ಬಳಿಕ ಬಾಲಕಿ ಶಾಲಾ ಕಟ್ಟಡದಿಂದ ಜಿಗಿದು ಸಾವಿಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ. ಪ್ರಾರ್ಥನೆ ವೇಳೆ ಆಕೆ ಹೊರಗೆ ಬರದೇ ತರಗತಿಯಲ್ಲೇ ಕುಳಿತಿದ್ದು ಎಂದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಶಾಲೆಯ ವಿರುದ್ಧ ಬಾಲಕಿಯ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ ಶಿಕ್ಷಕರ ವಿರುದ್ಧ ಕುಟುಂಬಸ್ಥರ ತೀವ್ರ ಆಕ್ರೋಶ
ಶಾಲೆಯ ಪ್ರಾರ್ಥನೆ ವೇಳೆ ಆಕೆ ಬರಲಿಲ್ಲ ಎಂದಾಗ ನೀವು ಏಕೆ ಆಕೆಯನ್ನು ಕರೆದು ಪ್ರಶ್ನಿಸಿಲ್ಲ ಎಂದು ಶಾಲೆಯ ಶಿಕ್ಷಕರಿಗೆ ಮೃತ ಬಾಲಕಿಯ ಕುಟುಂಬಸ್ಥರು ಪ್ರಶ್ನೆ ಮಾಡಿದ್ದು, ಶಾಲಾ ಶಿಕ್ಷಕರ ವಿರುದ್ಧ ಕುಟುಂಬಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ರಾಮನಗರ: ಅತ್ತೆ ಸೊಸೆ ಜಗಳ: 19 ವರ್ಷದ ಗರ್ಭಿಣಿ ಸೊಸೆ ಸಾವಿಗೆ ಶರಣು
ಸಾವಿಗೂ ಮೊದಲಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನನ್ನ ಮಗಳ ಸಾವಿಗೆ ಕಾರಣವೇನು ಎಂಬ ಬಗ್ಗೆ ತನಿಖೆ ಮಾಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಮೃತ ಬಾಲಕಿಯನ್ನು ಮದಿಯಾ ನಶೀರ್ ಪಾಷಾ ಎಂದು ಗುರುತಿಸಲಾಗಿದೆ. ಬಾಲಕಿ ಸಾವಿಗೆ ಶರಣಾಗುವ ಮುನ್ನ ತರಗತಿ ಕೋಣೆಯಲ್ಲಿ ಸ್ನೇಹಿತೆಯರ ಜೊತೆ ಕುಳಿತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇದನ್ನೂ ಓದಿ: ಮಡಿಕೇರಿಯ ಭಾಗಮಂಡಲದಲ್ಲಿ ಸಹಜೀವನ ನಡೆಸುತ್ತಿದ್ದ ಜೋಡಿಯ ಕೊಲೆ: ಮಹಿಳೆ ಸೋದರನಿಂದ ಕೃತ್ಯ
ಸಾವನ್ನಪ್ಪಿದ ಮದಿಯಾ ನಶೀರ್ ಪಾಷಾ
ಬಾಲಕಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಬೇಮಳಖೇಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಕೊಂಡಿದ್ದಾರೆ.
ಇದನ್ನೂ ಓದಿ: Prison break:ಜೈಲಿನಿಂದ ತಪ್ಪಿಸಿಕೊಳ್ಳಲು ನಿರಂತರ 5 ವರ್ಷ ಸುರಂಗ ಕೊರೆದ ಕೈದಿ ತಲುಪಿದ್ದು ಎಲ್ಲಿಗೆ?

