Live-in couple killed in Madikeri: ಕುಡಿದ ಮತ್ತಿನಲ್ಲಿ ಸೋದರಿ ಹಾಗೂ ಆಕೆಯ ಜೊತೆ ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಯನ್ನು 70 ವರ್ಷದ ವೃದ್ಧ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಕೊಡಗಿನಲ್ಲಿ ನಡೆದಿದೆ.

ಭಾಗಮಂಡಲದಲ್ಲಿ ಜೋಡಿ ಕೊಲೆ

ಕೊಡಗು: ಕುಡಿದ ಮತ್ತಿನಲ್ಲಿ ಸೋದರಿ ಹಾಗೂ ಆಕೆಯ ಜೊತೆ ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಯನ್ನು 70 ವರ್ಷದ ವೃದ್ಧ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಕೊಡಗಿನಲ್ಲಿ ನಡೆದಿದೆ. ಇಲ್ಲಿನ ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ಈ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಕೊಲೆಯಾದ ಜೋಡಿಯನ್ನು 55 ವರ್ಷದ ಕುಂಞರಾಮ ಹಾಗೂ 45 ವರ್ಷದ ಯಶೋಧ ಎಂದು ಗುರುತಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕುಡಿದ ಮತ್ತಿನಲ್ಲಿ ಯಶೋಧ ಅವರ ಸೋದರ 70 ವರ್ಷದ ಚಂದು ಎಂಬುವವರು ತನ್ನ ಸಹೋದರಿ ಆಕೆಯ ಸಂಗಾತಿಯನ್ನು ಕೊಲೆ ಮಾಡಿದ್ದಾನೆ. ಪರಸ್ಪರ ಒಪ್ಪಿಗೆ ಮೇರೆಗೆ ಕುಂಞರಾಮ ಮತ್ತು ಯಶೋಧ ಸಹಜೀವನ ನಡೆಸುತ್ತಿದ್ದರು. ಇದೇ ವಿಷಯಕ್ಕೆ ಯಶೋಧ ಸಹೋದರ ಆಗಾಗ ಗಲಾಟೆ ಮಾಡುತ್ತಿದ್ದ. ನಿನ್ನೆ ಸಂಜೆಯೂ ಅದೇ ರೀತಿ ಕುಡಿದು ಮೂವರು ಗಲಾಟೆ ಮಾಡಿದ್ದಾರೆ. ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಕುಡಿದು ಬಂದು ಗಲಾಟೆ ಮಾಡಿದ ಚಂದು ಬಳಿಕ ಇಬ್ಬರನ್ನು ಮಾರಕಾಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: Prison break:ಜೈಲಿನಿಂದ ತಪ್ಪಿಸಿಕೊಳ್ಳಲು ನಿರಂತರ 5 ವರ್ಷ ಸುರಂಗ ಕೊರೆದ ಕೈದಿ ತಲುಪಿದ್ದು ಎಲ್ಲಿಗೆ?

ಘಟನೆಗೆ ಸಂಬಂಧಿಸಿದಂತೆ ಭಾಗಮಂಡಲ ಪೊಲೀಸರು ಆರೋಪಿ ಚಂದುವನ್ನು ಬಂಧಿಸಿದ್ದಾರೆ. ಮೃತರ ಶವಗಳನ್ನು ಕೊಡಗು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಇದನ್ನೂ ಓದಿ: ದಯವಿಟ್ಟು ನನ್ನ ಬೆಳೆ ಖರೀದಿಸಿ... ನನ್ನ ಮಗಳ ಮದುವೆ ನಾಳೆ: ಮಾರುಕಟ್ಟೆಯಲ್ಲಿ ಅಳಲು ಶುರು ಮಾಡಿದ ರೈತ

ಕೊಲೆಯಾದ ಕುಂಞರಾಮಮ, ಯಶೋಧ ಹಾಗೂ ಕೊಲೆ ಮಾಡಿದ ಚಂದು