ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿಯಾಯಿತು. ಆದರೆ, ಬಹುಮತ ಸಾಬೀತು ಮಾಡುವ ಮುನ್ನ ಹಲವಾರು ಪ್ರಕ್ರಿಯೆಗಳನ್ನು ಮುಗಿಸಬೇಕು. ಇದರಲ್ಲಿ ರಾಜ್ಯಪಾಲರು ಹಾಗೂ ಹೊಸ ಮುಖ್ಯಮಂತ್ರಿಯ ಜವಾಬ್ದಾರಿಗಳೇನು?

ಬಿಜೆಪಿಯಿಂದ ಸಂವಿಧಾನದ ಮೇಲೆ ದಾಳಿ

- ರಾಜ್ಯಪಾಲರು ಸದನದ ಹಿರಿಯ ಸದಸ್ಯರೊಬ್ಬರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವರು.
- ಹಂಗಾಮಿ ಸ್ಪೀಕರ್​​​ ಎಲ್ಲ ಹೊಸ ಚುನಾಯಿತ ಅಭ್ಯರ್ಥಿಗಳಿಗೆ ಪ್ರಮಾಣ ವಚನ ಬೋಧಿಸುವರು.
- ಹೊಸ ಸ್ಪೀಕರ್ ಆಯ್ಕೆ ಪ್ರಕ್ರಿಯೆಯನ್ನು ಹಂಗಾಮಿ ಸ್ಪೀಕರ್​​​ ನಿರ್ವಹಿಸುವರು.
- ಹಂಗಾಮಿ ಸ್ಪೀಕರ್​​​ಗೆ ವಿಶ್ವಾಸ ಮತ ಯಾಚನೆ ಕಲಾಪ ನಡೆಸುವ ಅಧಿಕಾರ ಇರುವುದಿಲ್ಲ. 
- ಪ್ರಮಾಣ ವಚನ ಸ್ವೀಕಾರಕ್ಕೆ ಮೊದಲು ಅವರಿಗೆ ವಿಪ್​ ನೀಡುವ ಅಧಿಕಾರ ಪಕ್ಷಕ್ಕೆ ಇರುವುದೇ? ಎಂಬುವುಜು ಈಗ ಚರ್ಚೆಯ ವಿಷಯವಾಗುತ್ತಿದೆ.
- ಚುನಾಯಿತ ಅಭ್ಯರ್ಥಿಯು ಪ್ರಮಾಣ ವಚನ ಸ್ವೀಕರಿಸಿದ ನಂತರವಷ್ಟೇ ಅಧಿಕೃತ ಶಾಸಕರಾಗುತ್ತಾರೆ.
-  ಆಯ್ಕೆಯಾಗುವ ಹೊಸ ಸ್ಪೀಕರ್​ ಅವರಿಂದಲೇ ವಿಶ್ವಾಸ ಮತ ಯಾಚನೆಯ ಪ್ರಕ್ರಿಯೆ ನಡೆಯಬೇಕು.
- ಒಂದು ವೇಳೆ ಹೊಸ ಸ್ಪೀಕರ್​​ ಆಯ್ಕೆಯಲ್ಲೇ ಬಿಜೆಪಿಗೆ ಹಿನ್ನಡೆಯಾದರೆ, ವಿಶ್ವಾಸ ಮತದಲ್ಲೂ ಹಿನ್ನಡೆಯಾದಂತೆ.
- ಸದನದಲ್ಲಿ ಹಾಜರಿರುವ ಒಟ್ಟು ಶಾಸಕರ ಸಂಖ್ಯೆಯಲ್ಲಿ ಅರ್ಧಕ್ಕಿಂತ ಒಂದು ಜಾಸ್ತಿ ಮತ ಬಿಎಸ್​ವೈಗೆ ಸಿಕ್ಕರೂ, ಬಿಎಸ್​ವೈ ಸರ್ಕಾರಕ್ಕೆ ಬಹುಮತ ಸಿಕ್ಕಂತೆ
- ಒಮ್ಮೆ ಬಹುಮತ ಸಿಕ್ಕರೆ 6 ತಿಂಗಳವರೆಗೆ ಬಹುಮತ ಸಾಬೀತು ಮಾಡಬೇಕಾಗಿಲ್ಲ.

ಬಿಜೆಪಿ ಪ್ಲ್ಯಾನ್ ಏನಿರಬಹುದು?

ಐಪಿಎಲ್ ಆಟಗಾರರ ರೀತಿ ಶಾಸಕರ ಹರಾಜು

ಬಿಎಸ್‌ವೈ ಅಧಿಕಾರ ಸ್ವೀಕರಿಸಿದ ನಾಲ್ಕು ಗಂಟೆಯಲ್ಲೇ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಹೊಸ ಅಭಿಯಾನಕ್ಕೆ ಪ್ರಕಾಶ್ ರೈ ಚಾಲನೆ