ಬಿಜೆಪಿ ಆರೆಸ್ಸೆಸ್‌ನಿಂದ ಸಂವಿಧಾನದ ಮೇಲೆ ದಾಳಿ: ರಾಹುಲ್ ಗಾಂಧಿ

Karnataka Politics  BJP RSS Attacking Constitution Says Rahul Gandhi
Highlights

  • ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಬುಡಮೇಲುಗೊಳಿಸುತ್ತಿರುವ ಬಿಜೆಪಿ ಆರೆಸ್ಸೆಸ್
  • ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ಯುವ ಹುನ್ನಾರ

ನವದೆಹಲಿ [ಮೇ. 17]: ಕರ್ನಾಟಕ ರಾಜಕೀಯದಲ್ಲಾಗುತ್ತಿರುವ ನಾಟಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅದ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಬುಡಮೇಲುಗೊಳಿಸುತ್ತಿರುವ ಬಿಜೆಪಿ-ಆರೆಸ್ಸೆಸ್, ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ಯುವ ಹುನ್ನಾರ ಹೊಂದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 

ಒಂದರ ಬಳಿಕ ಒಂದು ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಆರೆಸ್ಸೆಸ್ ನಿಯಂತ್ರಿಸುತ್ತಿದೆ. ಸರ್ವಾಧಿಕಾರ ಇರುವ ದೇಶಗಳಲ್ಲಿ ಅಥವಾ ಪಾಕಿಸ್ತಾನದಲ್ಲಿ ಇಂತಹದ್ದೆಲ್ಲಾ ನಡೆಯುತ್ತದೆ, ಆದರೆ  ಭಾರತದಂತಹ ಪ್ರಜಾತಾಂತ್ರಿಕ ದೇಶದಲ್ಲಿ ಇದು ನಡೆಯಬಾರದು, ಎಂದು  ರಾಹುಲ್ ಗಾಂಧಿ ಹೇಳಿದ್ದಾರೆ.

ರಾಯಪುರದ ಜನ ಸ್ವರಾಜ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಬಿಜೆಪಿ ಆರೆಸ್ಸೆಸ್‌ನಿಂದ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಎಂದು  ಅವರು ಹೇಳಿದ್ದಾರೆ.

ದೇಶದ ನ್ಯಾಯಾಂಗ, ಮಾಧ್ಯಮಗಳು ಭಯಭೀತವಾಗಿವೆ. ಸಂಸದರೂ ಕೂಡಾ ಭಯದಲ್ಲಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿ ಮುಂದೆ ಒಂದೇ ಒಂದು ಶಬ್ಧ ಮಾತನಾಡುವಂತಿಲ್ಲ, ಎಂದು ರಾಹುಲ್ ಗಾಂಧಿ ಹರಿಹಯ್ದಿದ್ದಾರೆ.   

 

 

loader