ಬಹುಮತ ಸಾಬೀತುಪಡಿಸಲು ಬಿಜೆಪಿ ಸೂಪರ್ ಪ್ಲ್ಯಾನ್ ಏನಾಗಬಹುದು?

What might be the master plan of B S Yeddyurappa to win the floor test
Highlights

ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ರಾಜ್ಯದಲ್ಲಿ ನಡೆದ ವಿವಿಧ ನಾಟಕೀಯ ಬೆಳವಣಿಗೆಗಳ ನಡುವೆಯೂ ಬಿ.ಎಸ್.ಯಡಿಯೂರಪ್ಪ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಆದರೆ, ನೀಡಿದ ದಿನಾಂಕದೊಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದರೆ ಮಾತ್ರ ಮುಖ್ಯಮಂತ್ರಿಯಾಗಿಯೇ ಮುಂದುವರಿಯುತ್ತಾರೆ. ಅಷ್ಟಕ್ಕೂ ಬಹುಮತ ಸಾಬೀತು ಪಡಿಸಲು ಬಿಜೆಪಿ ಮುಂದಿರುವ ಸಾಧ್ಯತೆಗಳೇನು?

ಬೆಂಗಳೂರು: ಸರಕಾರ ರಚನೆಯ ಒಂದು ಹಂತದ ಹೈಡ್ರಾಮಾ ಮುಗಿದಿದ್ದು, ಬಹುಮತ ಸಾಬೀತುಪಡಿಸುವವರೆಗೂ ಬಿಜೆಪಿ ಸರಕಾರ ಮುಂದುವರಿಯುತ್ತದೋ, ಇಲ್ಲವೋ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. 

ರೆಸಾರ್ಟ್ ರಾಜಕಾರಣ ನಡೆಯುತ್ತಿದ್ದು, ಕುದುರೆ ವ್ಯಾಪಾರವೂ ನಡೆಯುವ ಸಾಧ್ಯತೆಗಳಿವೆ. ಆದರೆ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತುಪಡಿಸುವ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದಾರೆ. ಅಷ್ಟಕ್ಕೂ ಮುಂದಿನ ನಡೆ ಏನಾಗಬಹುದು? ಸರಕಾರ ಉಳಿಸಿಕೊಳ್ಳುವ ಸಾಧ್ಯತೆಗಳೇನು?

- ಪ್ರಮಾಣ ವಚನ ಸ್ವೀಕರಿಸಿದ ನಂತರ ಕಾಂಗ್ರೆಸ್​ - ಜೆಡಿಎಸ್ ಪಾಳೆಯದ ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸಿ ಸದನದ ಸಂಖ್ಯಾ ಬಲ ಕುಗ್ಗಿಸುವ ಮೂಲಕ ಬಹುಮತ ಗಳಿಸುವುದು.

- ಒಂದು ಪಕ್ಷದ ಶಾಸಕರ ಒಟ್ಟು ಸಂಖ್ಯೆಯ ಮೂರನೇ ಎರಡರಷ್ಟು ಶಾಸಕರು ಒಟ್ಟಾಗಿ ಬಿಜೆಪಿಗೆ ಬರುವಂತೆ ಮಾಡುವುದು. ಜೆಡಿಎಸ್​​ನಲ್ಲಿ ಮೂರನೇ ಎರಡರಷ್ಟು ಅಂದರೆ 26 ಶಾಸಕರು ವಲಸೆ ಹೋದರಷ್ಟೇ ಪಕ್ಷಾಂತರ ನಿಷೇಧದಿಂದ ಪಾರಾಗಬಹುದು. ಕಾಂಗ್ರೆಸ್​​ನಲ್ಲಿರುವ 78 ಶಾಸಕರ ಪೈಕಿ 52 ಶಾಸಕರು ವಲಸೆ ಹೋದರಷ್ಟೇ ಪಕ್ಷಾಂತರ ನಿಷೇಧ ಕಾಯ್ದೆ ಕಾನೂನಿನಿಂದ ಪಾರಾಗಬಹುದು. ಆದ್ದರಿಂದ ಇದು ಅಸಾಧ್ಯ.

- ಮನಸಾಕ್ಷಿಯ ಮತ ಗಳಿಸುವಲ್ಲಿ ಬಿಎಸ್​ವೈ ಯಶಸ್ವಿಯಾಗಿ, ಕ್ರಾಸ್​​ ವೋಟಿಂಗ್​ ನಡೆದರೂ ಬಹುಮತ ಪಡೆಯಬಹುದು. ಪಕ್ಷಾಂತರ ನಿಷೇಧ ಕಾಯ್ದೆಯ ವಿರುದ್ಧ ಕಾನೂನು ಹೋರಾಟದ ರಿಸ್ಕ್​ ತೆಗೆದುಕೊಂಡು ಮನಸಾಕ್ಷಿಯ ಕ್ರಾಸ್ ವೋಟಿಂಗ್ ಮಾಡಿಸಬಹುದು.

- ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರವಷ್ಟೇ ಶಾಸಕರಾಗುವರು. ಆ ನಂತರವಷ್ಟೇ ಪಕ್ಷದ ವಿಪ್​ ಜಾರಿ ಮಾಡಬಹುದು. ಚುನಾಯಿತ ಸದಸ್ಯರನ್ನೇ ಪ್ರಮಾಣ ವಚನದಿಂದ ದೂರ ಉಳಿಯುವಂತೆ ಮಾಡಿಯೂ ಸದನದ ಬಲ ಕುಗ್ಗಿಸಿ ಬಹುಮತ ಸಾಬೀತು ಮಾಡುವುದು. ಬಹುಮತದ ನಂತರವಷ್ಟೇ 16 ಚುನಾಯಿತ ಸದಸ್ಯರು ಪ್ರಮಾಣವಚನ ಸ್ವೀಕರಿಸುವಂತೆ ನೋಡಿಕೊಳ್ಳುವುದು. ಇದು ಈಗ ಕಾನೂನು ಚರ್ಚೆಗೆ ಒಳಗಾಗಿದೆ.

- ಮತ್ತೊಂದು ಸುತ್ತು ಜೆಡಿಎಸ್​​ ಜೊತೆ ಬೆಂಬಲ ಪಡೆಯುವ ಮಾತುಕತೆ ನಡೆಸಲು ಮುಂದಾಗಬಹುದು. ಕಾಂಗ್ರೆಸ್ ರೀತಿಯಲ್ಲಿಯೇ ಬೇಷರತ್​ ಬೆಂಬಲ ನೀಡಲು ಬಿಜೆಪಿ ಮುಂದಾದರೂ ಆಶ್ಚರ್ಯವಿಲ್ಲ.

ಗಾಂಧಿ ಪ್ರತಿಮೆ ಮುಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ

 

loader