Asianet Suvarna News Asianet Suvarna News

ಐಪಿಎಲ್ ಆಟಗಾರರ ರೀತಿಯಲ್ಲಿ ಶಾಸಕರ ಹರಾಜು

ಕರ್ನಾಟಕದ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರಿಂದ ಯಾವ ಪಕ್ಷಕ್ಕೂ ಬಹುಮತಕ್ಕೆ ಬೇಕಾದ ಶಾಸಕರನ್ನು ಕಲೆಹಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಕ್ರಮವಾಗಿ ಕುದುರೆ ವ್ಯಾಪಾರ ಆರಂಭವಾಗಿದೆ. ಇದು ಸಂವಿಧಾನವಿರೋಧಿ ಆಗಿರುವುದರಿಂದ ಐಪಿಎಲ್ ಕ್ರಿಕೆಟ್ ಆಟಗಾರರನ್ನು ಕಾನೂನುಬದ್ಧವಾಗಿ ಹರಾಜು ಹಾಕುವಂತೆ ಶಾಸಕರನ್ನೂ ಹರಾಜು ಹಾಕಲು ರಾಜ್ಯಪಾಲರು ನಿರ್ಧರಿಸಿದ್ದಾರೆ.

Faking News  :Politicians Auction In Karnataka

ಬೆಂಗಳೂರು : ಕರ್ನಾಟಕದ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರಿಂದ ಯಾವ ಪಕ್ಷಕ್ಕೂ ಬಹುಮತಕ್ಕೆ ಬೇಕಾದ ಶಾಸಕರನ್ನು ಕಲೆಹಾಕಲು ಸಾಧ್ಯವಾಗುತ್ತಿಲ್ಲ. 

ಹೀಗಾಗಿ ಅಕ್ರಮವಾಗಿ ಕುದುರೆ ವ್ಯಾಪಾರ ಆರಂಭವಾಗಿದೆ. ಇದು ಸಂವಿಧಾನವಿರೋಧಿ ಆಗಿರುವುದರಿಂದ ಐಪಿಎಲ್ ಕ್ರಿಕೆಟ್ ಆಟಗಾರರನ್ನು ಕಾನೂನುಬದ್ಧವಾಗಿ ಹರಾಜು ಹಾಕುವಂತೆ ಶಾಸಕರನ್ನೂ ಹರಾಜು ಹಾಕಲು ರಾಜ್ಯಪಾಲರು ನಿರ್ಧರಿಸಿದ್ದಾರೆ.

ರಾಜಕೀಯ ಪಕ್ಷಗಳು ತಮ್ಮ ದುಡ್ಡಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಎಷ್ಟು ಬೇಕಾದರೂ ಶಾಸಕರನ್ನು ಖರೀದಿಸಿ, ಹೆಚ್ಚು ಶಾಸಕರನ್ನು ಖರೀದಿಸಲು ಸಾಧ್ಯವಾದವರು ಸರ್ಕಾರ ರಚನೆ ಮಾಡಬಹುದು.

 ಶಾಸಕರ ಹರಾಜು ಪ್ರಕ್ರಿಯೆ ನಡೆಸಲು ಐಪಿಎಲ್ ಹರಾಜು ತಜ್ಞ ರಿಚರ್ಡ್ ಮ್ಯಾಡ್ಲಿಯನ್ನು ಬ್ರಿಟನ್ನಿನಿಂದ ಕರೆಸಲಾ ಗುತ್ತಿದೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ. [ಸುಳ್ಳು ಸುದ್ದಿ]

Follow Us:
Download App:
  • android
  • ios