Asianet Suvarna News Asianet Suvarna News

ರಾಜ್ಯದಲ್ಲಿ ಉಪಚುನಾವಣೆ ಜಟಾಪಟಿ, ಟೂ ಪೀಸ್ ನಾಚಿಕೆ ಎಂದ ಕೃತಿ; ಅ.2ರ ಟಾಪ್ 10 ಸುದ್ದಿ!

ಉಪಚುನಾವಣೆಗೆ ದಿನಾಂಕ ಫಿಕ್ಸ್ ಆಗುತ್ತಿದ್ದಂತೆಯೇ ಪಕ್ಷಾಂತರ ಪರ್ವ ಜೋರಾಗಿದೆ. ಇತ್ತ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ 50,000 ಕೋಟಿ ರೂಪಾಯಿ ಅಕ್ರಮ ಆಸ್ತಿ ಆರೋಪ ಕೇಳಿಬಂದಿದೆ. ಹಲವು ರಾಜ್ಯಗಳಲ್ಲಿ ಡೀಸೆಲ್ ಬೆಲೆ 100 ರೂ ಗಡಿ ದಾಟಿದೆ. 8 ವರ್ಷವಾದರೂ ಟೂ ಪೀಸ್ ಧರಿಸಲು ನಾಚಿಕೆ ಎಂದ ಕೃತಿ, ಕೆಕೆಆರ್ ನಾಯಕನಿಗೆ ಗೇಟ್‌ಪಾಸ್ ಸೇರಿದಂತೆ ಅಕ್ಟೋಬರ್ 2ರಂದು ಟಾಪ್ 10 ಸುದ್ದಿ ವಿವರ ಇಲ್ಲಿವೆ.

Karnataka By election to bollywood Kriti Sanon top 10 news of october 2 ckm
Author
Bengaluru, First Published Oct 2, 2021, 4:50 PM IST
  • Facebook
  • Twitter
  • Whatsapp

ಮಲ್ಲಿಕಾರ್ಜುನ ಖರ್ಗೆ ವಿರುದ್ಧ 50 ಸಾವಿರ ಕೋಟಿ ರೂ ಅಕ್ರಮ ಆಸ್ತಿ ಆರೋಪ; ಲೋಕಾಯುಕ್ತಕ್ಕೆ ದೂರು!

Karnataka By election to bollywood Kriti Sanon top 10 news of october 2 ckm

ಆದರೆ ಮಲ್ಲಿಕಾರ್ಜುನ ಖರ್ಗೆ ಬರೋಬ್ಬರಿ 50,000 ಕೋಟಿ ರೂಪಾಯಿಗೆ ಹೆಚ್ಚು ಆಕ್ರಮ ಆಸ್ತಿ ಹೊಂದಿದ್ದಾರೆ ಅನ್ನೋ ಆರೋಪಗಳು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ(Social Media) ಸದ್ದು ಮಾಡುತ್ತಿದೆ. ಇದೀಗ ಈ ಆರೋಪ ಮತ್ತೊಂದು ಹಂತ ಪ್ರವೇಶಿಸಿದೆ. ಮಲ್ಲಿಕಾರ್ಜುನ ಖರ್ಗೆ ಅಕ್ರಮ ಆಸ್ತಿ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಈ ದೂರು ಹಾಗೂ ಖರ್ಗೆ ಮೇಲಿನ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಭಾಿ ವೈರಲ್ ಆಗಿದೆ. 

ಪತ್ನಿಗೆ ಸೀರೆ ಖರೀದಿಸಿದ ಸಿಎಂ ಬೊಮ್ಮಾಯಿ: ತಾವೂ ಕೊಂಡ ಎಂಟಿಬಿ, ವಿಜಯೇಂದ್ರ

Karnataka By election to bollywood Kriti Sanon top 10 news of october 2 ckm

ತಮ್ಮ‌ ಪತ್ನಿ ಚನ್ನಮ್ಮಗಾಗಿ   ಖಾದಿ ಎಂಪೋರಿಯಂನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೀರೆ‌ ಖರೀದಿಸಿದರು. ಇದೇ ವೇಳೆ ಕಾರಜೊಳ ಸಾಹೇಬ್ರೆ‌ ನೀವು ಸೀರೆ ಖರೀದಿಸಿ ಎಂದರು.  ಬೇಡ, ಸೀರೆ ಖರೀದಿ ಬಗ್ಗೆ ನನಗೆ ಗೊತ್ತಿಲ್ಲ ಎಂದು ಕಾರಜೋಳ  ಹೇಳಿದರು.ಇದಕ್ಕುತ್ತರಿಸಿದ ಸಿಎಂ ದುಡ್ಡು ಕೊಟ್ಟು ಬೈಸಿಕೊಳ್ಳೋದು ಇದು, ನಮಗೆ ಸೆಲೆಕ್ಷನ್ ಗೊತ್ತಾಗಲ್ಲ ಎಂದರು.

ರಾಜಕಾರಣಿಗಳಿಗೆ ಸಾರ್ವಕಾಲಿಕ ಮಾದರಿ ಲಾಲ್‌ ಬಹದ್ದೂರ್‌ ಶಾಸ್ತ್ರಿ

Karnataka By election to bollywood Kriti Sanon top 10 news of october 2 ckm

ಹಲವಾರು ಜನರನ್ನು ಬಲಿ ತೆಗೆದುಕೊಂಡ ರೈಲ್ವೆ ಅಪಘಾತವೊಂದ್ಕಕೆ ತಾನು ಜವಾಬ್ದಾರಿಯೆಂದು ಅನಿಸಿದ್ದರಿಂದ ಶಾಸ್ತ್ರಿಜಿ ಅವರು ತಮ್ಮ ರೈಲೆ ಸಚಿವ ಸ್ಥಾನಕ್ಕೇ ರಾಜೀನಾಮೆ ನೀಡಿದರು. ಈ ನಿರ್ಧಾರ ಸಂಸತ್ತು ಮತ್ತು ಇಡೀ ರಾಷ್ಟ್ರದಲ್ಲೇ ಪ್ರಶಂಸೆಗೆ ಪಾತ್ರವಾಯಿತು.

ಪಂಜಾಬ್‌ ವಿಕಾಸ್‌ ಪಕ್ಷ: ಸಿಧುಗೆ ಸೋಲಿನ ರುಚಿ ತೋರಿಸಲು ಕ್ಯಾಪ್ಟನ್ ತಂತ್ರ!

Karnataka By election to bollywood Kriti Sanon top 10 news of october 2 ckm

ಕಾಂಗ್ರೆಸ್‌ಗೆ ವಿದಾಯ ಹೇಳುವುದಾಗಿ ಈಗಾಗಲೇ ಘೋಷಿಸಿರುವ ಪಂಜಾಬ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಕ್ಯಾ.ಅಮರೀಂದರ್‌ಸಿಂಗ್‌(Amarinder Singh), ಶೀಘ್ರವೇ ಹೊಸ ಪಕ್ಷವೊಂದನ್ನು ರಚಿಸಲಿದ್ದರೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಪಕ್ಷದ ಹೆಸರು ಪಂಜಾಬ್‌ ವಿಕಾಸ್‌ ಪಕ್ಷ(Punjab Vikas Party) ಎಂದಾಗಿರಲಿದೆ ಎನ್ನಲಾಗಿದೆ.

IPL 2021 ಕೆಕೆಆರ್‌ನಿಂದ ನಾಯಕ ಮಾರ್ಗನ್‌ಗೆ ಗೇಟ್‌ಪಾಸ್‌‌?

Karnataka By election to bollywood Kriti Sanon top 10 news of october 2 ckm

2020ರ ಐಪಿಎಲ್‌ನಲ್ಲಿ (IPL 2021) ದಿನೇಶ್‌ ಕಾರ್ತಿಕ್‌ (Dinesh Karthik) ರನ್ನು ನಾಯಕತ್ವದಿಂದ ಕೆಳಗಿಳಿಸಿ ಇಂಗ್ಲೆಂಡ್‌ನ ಇಯಾನ್‌ ಮೊರ್ಗನ್‌ಗೆ (Eoin Morgan) ನಾಯಕತ್ವ ನೀಡಿದ್ದ ಕೋಲ್ಕತಾ ನೈಟ್‌ರೈಡ​ರ್ಸ್‌ (Kolkata Knight Riders), ಈಗ ಮತ್ತೊಮ್ಮೆ ಹೊಸ ನಾಯಕನನ್ನು ಹುಡುಕುವ ಒತ್ತಡಕ್ಕೆ ಸಿಲುಕಿದೆ. ಕಳೆದ 4 ಇನಿಂಗ್ಸ್‌ಗಳಲ್ಲಿ ಮಾರ್ಗನ್‌ ಕೇವಲ 17 ರನ್ ಮಾತ್ರ ಗಳಿಸಿದ್ದಾರೆ.

ಬಾಲಿವುಡ್‌ನಲ್ಲಿ 8 ವರ್ಷ: ಆದ್ರೂ ಟೂ ಪೀಸ್ ಧರಿಸೋಕೆ ನಾಚಿಕೆ ಎಂದ ಕೃತಿ

Karnataka By election to bollywood Kriti Sanon top 10 news of october 2 ckm

ನಟಿ ಕೃತಿ ಸನೋನ್(Kriti Sanon)8 ವರ್ಷದ ತಮ್ಮ ಸಿನಿಮಾ ಜರ್ನಿಯಲ್ಲಿ 10 ಸಿನಿಮಾಗಳನ್ನು ಮಾಡಿದ್ದಾರೆ. ಮಿಮಿ ಸಿನಿಮಾದಲ್ಲಿ ಸರೋಗೇಟ್ ಮದರ್ ಪಾತ್ರವನ್ನು ಮಾಡೋ ಮೂಲಕ ಹೊಸ ಬ್ರೇಕ್ ಪಡೆದರು ನಟಿ.

ಮತ್ತಷ್ಟು ರಾಜ್ಯಗಳಲ್ಲಿ ಡೀಸೆಲ್ 100 ರೂಪಾಯಿ!

Karnataka By election to bollywood Kriti Sanon top 10 news of october 2 ckm

ತೈಲ ಕಂಪನಿಗಳು ಸತತ 2ನೇ ದಿನವಾದ ಶುಕ್ರವಾರ ಕೂಡಾ ಪೆಟ್ರೋಲ್‌ ಮತ್ತು ಡೀಸೆಲ್‌(Diesel) ಬೆಲೆಯನ್ನು ಲೀ.ಗೆ ಕ್ರಮವಾಗಿ 25 ಮತ್ತು 30 ಪೈಸೆಯಷ್ಟು ಹೆಚ್ಚಳ ಮಾಡಿವೆ. ಇದರೊಂದಿಗೆ ಪೆಟ್ರೋಲ್‌ ದರ ಮತ್ತೊಮ್ಮೆ ದೇಶಾದ್ಯಂತ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ. ಇನ್ನು ಡೀಸೆಲ್‌ ದರ ಹಲವು ರಾಜ್ಯಗಳಲ್ಲಿ 100 ರು.ನ ಗಡಿ ದಾಟಿದೆ.

ಸಿಂದಗಿ ಬೈ ಎಲೆಕ್ಷನ್: ಘಟಾನುಘಟಿ ನಾಯಕರಿಗೆ ಗಾಳ ಹಾಕಿದ ಬಿಜೆಪಿ

Karnataka By election to bollywood Kriti Sanon top 10 news of october 2 ckm

ಸಿಂದಗಿ ಕ್ಷೇತ್ರಕ್ಕೆ ಉಪಚುನಾವಣೆಗೆ ದಿನಾಂಕ ಫಿಕ್ಸ್ ಆಗುತ್ತಿದ್ದಂತೆಯೇ ಪಕ್ಷಾಂತರ ಪರ್ವ ಜೋರಾಗಿದೆ. ಸಿಂದಗಿ ಕ್ಷೇತ್ರ ಗೆಲ್ಲಲು ಬಿಜೆಪಿ ಘಟಾನುಘಟಿ ನಾಯಕರಿಗೆ ಗಾಳ ಹಾಕಿದೆ.

ದಿನಕ್ಕೊಬ್ರು ನಮ್ಮ ಮನೆಗೆ ಬರುತ್ತಿದ್ದಾರೆ : ಕೈ ದೊಣ್ಣೆ ನಾಯಕರ ಕೇಳ್ಬೇಕಾ ನಾವು..?

Karnataka By election to bollywood Kriti Sanon top 10 news of october 2 ckm

ಈಗ ಜೆಡಿಎಸ್ (JDS) ಬಿಟ್ಟು ಹೋಗುತ್ತಿರುವ ಯಾರೂ ಪಕ್ಷದ ಬಲವರ್ಧನೆಗೆ ಶಕ್ತಿ ತುಂಬಿದವರಲ್ಲ ಎಂದು ಮಾಜಿ ಸಿಎಂ ಹೆಚ್ ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು. 

Follow Us:
Download App:
  • android
  • ios