ಭಾಷಣದ ವೇಳೆಯಲ್ಲೇ ಕುಸಿದು ಬಿದ್ದ ನಿತಿನ್‌ ಗಡ್ಕರಿ, ಸುದೀರ್ಘ ಚುನಾವಣೆಯ ಬಗ್ಗೆ ಪ್ರಶ್ನೆ ಎತ್ತಿದ ಮಮತಾ ಬ್ಯಾನರ್ಜಿ!

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮಹಾರಾಷ್ಟ್ರದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡುವ ವೇಳೆಯಲ್ಲೇ ಕುಸಿದು ಬಿದ್ದಿದ್ದಾರೆ. ಬಿಸಿಲಿನ ಝಳಕ್ಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಗಿ ಸ್ವತಃ ನಿತಿನ್‌ ಗಡ್ಕರಿ ಅವರೇ ಹೇಳಿದ್ದಾರೆ.

Nitin Gadkari faints during speech at Maharashtra rally mamata banerjee questions Long Election Season san

ಮುಂಬೈ (ಏ.24): ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಇಸಿ ಮಾತನಾಡುತ್ತಿದ್ದಾಗ ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಗಡ್ಕರಿ ಅವರನ್ನು ಚಿಕಿತ್ಸೆಗಾಗಿ ಸಾಗಿಸಲಾಯಿತು. ಯವತ್ಮಾಲ್‌ನ ಚುನಾವಣಾ ಸಮಾವೇಶದಲ್ಲಿ ಜನಸಮೂಹವನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಗಡ್ಕರಿ ಅವರು ಇದ್ದಕ್ಕಿದ್ದಂತೆ ತಮ್ಮ ಭಾಷಣವನ್ನು ನಿಲ್ಲಿಸಿದರು. ಈ ವೇಳೆ ಪ್ರಜ್ಞಾಹೀನರಾಗಿ ವೇದಿಕೆಯ ಮೇಲೆ ಕುಸಿದು ಬಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಬಿಜೆಪಿ ನಾಯಕರು ನಿತಿನ್‌ ಗಡ್ಕರಿ ಅವರನ್ನು ಹಿಡಿದುಕೊಂಡಿದ್ದಾರೆ. ತಕ್ಣವೇ ಅವರನ್ನು ವೈದ್ಯಕೀಯ ನೆರವು ನೀಡಲು ಆಸ್ಪತ್ರೆಗೆ ಸಾಗಿಸಿದರು. ಈ ಹಂತದಲ್ಲಿ ನಿತಿನ್‌ ಗಡ್ಕರಿ ಅವರ  ಮುಖದ ಮೇಲೆ ನೀರು ಚಿಮುಕಿಸುವ ಮೂಲಕ ಅವರನ್ನು ಎಚ್ಚಿರುವ ಪ್ರಯತ್ನವನ್ನೂ ಮಾಡಿದರು. ಬಳಿಕ ವೇದಿಕೆಯಲ್ಲಿದ್ದ ಜನರನ್ನು ಬದಿಗೆ ಸರಿಸಿ ಎತ್ತಿಕೊಂಡೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.

ಬಳಿಕ ಟ್ವೀಟ್‌ ಮಾಡಿದ ನಿತಿನ್‌ ಗಡ್ಕರಿ, ಬಿಸಿಲಿನ ತಾಪದಿಂದ ತಮಗೆ ಸಮಸ್ಯೆ ಆಗಿತ್ತು ಎಂದಿದ್ದರು. ನಾನು ಆರೋಗ್ಯವಾಗಿದ್ದೇನೆ ಮತ್ತು ವರುದ್‌ನಲ್ಲಿ ನಡೆಯಲಿರುವ ಮುಂದಿನ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದೇನೆ ಎಂದು ಹೇಳಿದರು. "ಮಹಾರಾಷ್ಟ್ರದ ಫುಸಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಬಿಸಿಲಿನ ತಾಪದಿಂದ ನನಗೆ ಸಮಸ್ಯೆ ಅಗಿತ್ತು. ಆದರೆ ಈಗ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಮತ್ತು ಮುಂದಿನ ಸಭೆಯಲ್ಲಿ ಭಾಗವಹಿಸಲು ವರುದ್‌ಗೆ ತೆರಳುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು" ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.

ಮೊದಲ ಹಂತದಲ್ಲಿ ಚುನಾವಣೆಗೆ ಹೋಗಿರುವ ನಾಗ್ಪುರದ ಬಿಜೆಪಿ ಅಭ್ಯರ್ಥಿ ಗಡ್ಕರಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಾಯಕ ರಾಜಶ್ರೀ ಪಾಟೀಲ್ ಅವರ ಪರ ಪ್ರಚಾರ ನಡೆಸುತ್ತಿದ್ದರು, ಅವರು ಯವತ್ಮಾಲ್-ವಾಶಿಮ್ ಲೋಕಸಭಾ ಕ್ಷೇತ್ರದಿಂದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ.
 

ಮಹಾರಾಷ್ಟ್ರದ ಬುಲ್ಧಾನ, ಅಕೋಲಾ, ಅಮರಾವತಿ, ವಾರ್ಧಾ, ಹಿಂಗೋಲಿ, ನಾಂದೇಡ್ ಮತ್ತು ಪರ್ಭಾನಿ ಜೊತೆಗೆ ಯವತ್ಮಾಲ್‌ಗೆ ಏಪ್ರಿಲ್ 26ರ ಶುಕ್ರವಾರದಂದು ಎರಡನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಮತದಾನ ನಡೆಯಲಿದೆ. ಮಹಾರಾಷ್ಟ್ರದ ಪೂರ್ವ-ಮಧ್ಯ ಪ್ರದೇಶದಲ್ಲಿ ವಿದರ್ಭದಲ್ಲಿರುವ ಯವತ್ಮಾಲ್, ತೀವ್ರವಾದ ಶಾಖದ ಪರಿಸ್ಥಿತಿಗಳೊಂದಿಗೆ ಸೆಣಸುತ್ತಿದೆ. ಗಮನಾರ್ಹವೆಂದರೆ, ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ಹಲವು ಪ್ರದೇಶಗಳಿಗೆ ಬಿಸಿಗಾಳಿ ಎಚ್ಚರಿಕೆಯನ್ನು ನೀಡಿದೆ.

'ನಿಮ್ಮ ಮನೆ ಹೆಂಗಸ್ರನ್ನ ರಾಹುಲ್‌ ಗಾಂಧಿ ಜತೆ ಮಲಗಿಸಿ ನಪುಂಸಕ ಹೌದೋ ಅಲ್ವೋ ಗೊತ್ತಾಗುತ್ತೆ..' ಕಾಂಗ್ರೆಸ್‌ ನಾಯಕನ ವಿವಾದಿತ ಮಾತು

ಹಿರಿಯ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ನಿತಿನ್ ಗಡ್ಕರಿ ಶೀಘ್ರ ಮತ್ತು ಸಂಪೂರ್ಣ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಈ ಕ್ರೂರ ಬೇಸಿಗೆಯ ಬಿಸಿಲಿನ ತಾಪದಲ್ಲಿ ಚುನಾವಣಾ ಪ್ರಚಾರವು ಅಸಹನೀಯವಾಗಿದೆ. ಇಂದು ಏಪ್ರಿಲ್ 24, ಮತ್ತು, ನಮ್ಮ 7-ಹಂತದ ಚುನಾವಣೆಗಳು ಜೂನ್ 1 ರವರೆಗೆ ಮುಂದುವರಿಯುತ್ತದೆ ಎಂದು ನೀವು ಊಹಿಸಬಲ್ಲಿರಾ?? ಎಂದು ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿದ್ದಾರೆ. ಆ ಮೂಲಕ ಈ ಬಾರಿಯ ಚುನಾವಣೆ ಅತ್ಯಂತ ಸುದೀರ್ಘವಾಗಿದೆ ಎಂದು ಟೀಕಿಸಿದ್ದಾರೆ.

'ಮಧ್ಯಮ ವರ್ಗವದರು ಸ್ವಾರ್ಥಿಗಳು..' To 'ಪಿತ್ರಾರ್ಜಿತ ತೆರಿಗೆ' ಕಾಂಗ್ರೆಸ್‌ಗೆ Sam Pitroda ಸೆಲ್ಫ್‌ ಗೋಲ್‌!

Latest Videos
Follow Us:
Download App:
  • android
  • ios