ಬಾಲಿವುಡ್‌ನಲ್ಲಿ 8 ವರ್ಷ: ಆದ್ರೂ ಟೂ ಪೀಸ್ ಧರಿಸೋಕೆ ನಾಚಿಕೆ ಎಂದ ಕೃತಿ
ಮಿಮಿ ನಟಿ ಕೃತಿ ಸನೋನ್ ಬಾಲಿವುಡ್‌ನಲ್ಲಿ 8 ವರ್ಷ ಟೂ ಪೀಸ್ ಧರಿಸೋಕೆ ಮುಜುಗರವಾಗುತ್ತೆ ಎಂದ ನಟಿ

ನಟಿ ಕೃತಿ ಸನೋನ್(Kriti Sanon)8 ವರ್ಷದ ತಮ್ಮ ಸಿನಿಮಾ ಜರ್ನಿಯಲ್ಲಿ 10 ಸಿನಿಮಾಗಳನ್ನು ಮಾಡಿದ್ದಾರೆ. ಮಿಮಿ ಸಿನಿಮಾದಲ್ಲಿ ಸರೋಗೇಟ್ ಮದರ್ ಪಾತ್ರವನ್ನು ಮಾಡೋ ಮೂಲಕ ಹೊಸ ಬ್ರೇಕ್ ಪಡೆದರು ನಟಿ.
ಸಿನಿಮಾಗೆ ಎಂಟ್ರಿ ಕೊಡುವ ಮೊದಲೂ ನಟಿ ತನ್ನ ಮನಸಿನಲ್ಲಿರುವ ಮಾತನ್ನು ಧೈರ್ಯವಾಗಿ ಹೇಳುತ್ತಿದ್ದರು. ಸಿನಿಮಾಗೆ ಎಂಟ್ರಿ ಕೊಡೋ ಮೊದಲು ಅಡಿಷನ್ ಒಂದರಲ್ಲಿ ಭಾಗವಹಿಸಿದ್ದ ನಟಿ ನೇರವಾಗಿಯೇ ವಿಶ್ವಾಸದಿಂದ ತನಗೆ ಟೂಪೀಸ್ ಧರಿಸಲು ಕಂಫರ್ಟಬಲ್ ಆಗುವುದಿಲ್ಲ ಎಂದು ಹೇಳಿದ್ದರು.
ಹಳೆಯ ಆಡಿಷನ್ ವೀಡಿಯೋದಲ್ಲಿ ಕೃತಿ ಉಡುಪಿನಲ್ಲಿ ಮತ್ತು ಕೂದಲನ್ನು ಅಲೆ ಅಲೆಯಾಗಿ ವಿನ್ಯಾಸಗೊಳಿಸಗೊಳಿಸಲಾಗಿತ್ತು. ನಟಿ ತನ್ನನ್ನು ಪರಿಚಯಿಸಿಕೊಂರು ಅವಳು ಐದು ಅಡಿ ಮತ್ತು ಒಂಬತ್ತು ಇಂಚು ಎತ್ತರ ಎಂದು ತಿಳಿಸುತ್ತಾರೆ.
ನಂತರ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ತನ್ನ ಮುಂಭಾಗದ ಪ್ರೊಫೈಲ್‌ಗಳನ್ನು ತೋರಿಸುತ್ತಾರೆ. ಸಂದರ್ಶಕರು ಕೃತಿಯವರನ್ನು ಈಜಲು ಸಾಧ್ಯವೇ ಎಂದು ಕೇಳಿದಾಗ, ಅವರು ಆತ್ಮವಿಶ್ವಾಸದಿಂದ ಹೌದು ಗೊತ್ತಿದೆ ಎಂದು ಹೇಳುತ್ತಾರೆ. ಆದರೆ ನಾನು ಟೂಪೀಸ್‌ನಲ್ಲಿ ಕಂಫರ್ಟ್ ಅಲ್ಲ ಎಂದಿದ್ದಾರೆ
ಕೃತಿ 2014 ರಲ್ಲಿ ಟೈಗರ್ ಶ್ರಾಫ್ ಎದುರು ಹೀರೋಪಂತಿ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 2017 ರ ಬರೇಲಿ ಕಿ ಬರ್ಫಿ ಚಿತ್ರದ ಮೂಲಕ ಆಕೆ ತಾನು ನಟಿಯಾಗಿ ಹೆಚ್ಚು ಸುದ್ದಿಯಾದರು.
ನಟಿ ಪ್ರಸ್ತುತ ನಾಲ್ಕು ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಪ್ರಭಾಸ್ ಎದುರು ಆದಿಪುರುಷ ಸಹ ಸೇರಿದ್ದಾರೆ. ಅವಳು ವರುಣ್ ಧವನ್ ಜೊತೆ ಭೆಡಿಯಾ, ಅಕ್ಷಯ್ ಕುಮಾರ್ ಜೊತೆ ಬಚ್ಚನ್ ಪಾಂಡೆ, ಕಾರ್ತಿಕ್ ಆರ್ಯನ್ ಜೊತೆ ಶೆಹಜಾದಾ ಮತ್ತು ರಾಜ್ ಕುಮಾರ್ ರಾವ್ ಜೊತೆ ಹಮ್ ದೋ ಹಮಾರೆ ಡು ಮಾಡುತ್ತಿದ್ದಾರೆ
ಕೃತಿ ನಾನು ಸಿಟ್ಟಿಗೆದ್ದ ದಿನಗಳು ಇದ್ದವು. ಕೆಲವು ದಿನಗಳಲ್ಲಿ, ನಾನು ಅಳುತ್ತಿದ್ದೆ, ಏಕೆಂದರೆ ನನ್ನನ್ನು ಬ್ಯುಸಿ ಮಾಡಲು ಏನೂ ಇರಲಿಲ್ಲ. ನನ್ನ ಬಗ್ಗೆ ನೀನು ಸರಿ ಇಲ್ಲ ಎಂದು ಹೇಳಿದ ಕೆಲವರನ್ನು ನಾನು ಭೇಟಿಯಾದ ಸಂದರ್ಭಗಳೂ ಇದ್ದವು ಎಂದಿದ್ದರು.
ಯಾರೋ ನನಗೆ ನೀನು ತುಂಬಾ ಒಳ್ಳೆಯವಳು. ಪರದೆಯಲ್ಲಿ ನೈಜವಾಗಿ ಕಾಣಲು ನಿಮ್ಮಲ್ಲಿ ಒಂದು ರೀತಿಯ ಅಪೂರ್ಣತೆ ಇರಬೇಕು ಎಂದಿದ್ದರು. ನನ್ನನ್ನು ತುಂಬಾ ನಂಬುವ ಜನರೂ ಇದ್ದರು. ಅದು ನನಗೆ ಸ್ವಲ್ಪ ಹೆಚ್ಚು ಆತ್ಮವಿಶ್ವಾಸವನ್ನು ನೀಡಿತು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.