Asianet Suvarna News Asianet Suvarna News

ಮಲ್ಲಿಕಾರ್ಜುನ ಖರ್ಗೆ ವಿರುದ್ಧ 50 ಸಾವಿರ ಕೋಟಿ ರೂ ಅಕ್ರಮ ಆಸ್ತಿ ಆರೋಪ; ಲೋಕಾಯುಕ್ತಕ್ಕೆ ದೂರು!

  • ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಕ್ರಮ ಆಸ್ತಿ ಆರೋಪ
  • ಅಧಿಕಾರದಲ್ಲಿದ್ದಾಗ ಅಕ್ರಮವಾಗಿ ಆಸ್ತಿ ಗಳಿಕೆ, ಭ್ರಷ್ಟಾಚಾರ ಆರೋಪ
  • ಸಾಕ್ಷಿ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿದ ಸಮಾಜ ಪರಿವರ್ತನ ಸಮಿತಿ ಕಾರ್ಯದರ್ಶಿ
  • ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ  ಈ ದೂರು
     
Complaint circulated Social media against Mallikarjun Kharge amassed illegal property worth Rs 50000 crore ckm
Author
Bengaluru, First Published Oct 2, 2021, 4:01 PM IST

ಬೆಂಗಳೂರು(ಅ.02):  ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ(mallikarjun kharge) ದಲಿತ ಸಮುದಾಯದ ಅತ್ಯುನ್ನತ ನಾಯಕ ಎಂದೇ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್(Congress) ಪಕ್ಷದ ಹಿರಿಯ ಹಾಗೂ ಗಾಂಧಿ ಕುಟುಂಬದ ನಂಬಿಕಸ್ಥ ನಾಯಕರಲ್ಲಿ ಖರ್ಗೆಗೆ ಮೊದಲ ಸ್ಥಾನ. ಆದರೆ ಮಲ್ಲಿಕಾರ್ಜುನ ಖರ್ಗೆ ಬರೋಬ್ಬರಿ 50,000 ಕೋಟಿ ರೂಪಾಯಿಗೆ ಹೆಚ್ಚು ಆಕ್ರಮ ಆಸ್ತಿ ಹೊಂದಿದ್ದಾರೆ ಅನ್ನೋ ಆರೋಪಗಳು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ(Social Media) ಸದ್ದು ಮಾಡುತ್ತಿದೆ. ಇದೀಗ ಈ ಆರೋಪ ಮತ್ತೊಂದು ಹಂತ ಪ್ರವೇಶಿಸಿದೆ. ಮಲ್ಲಿಕಾರ್ಜುನ ಖರ್ಗೆ ಅಕ್ರಮ ಆಸ್ತಿ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. 

ಖರ್ಗೆ ಬಳಿ ಕಾರಿಲ್ಲ, ಕೃಷಿ ಭೂಮಿಯೂ ಇಲ್ಲ: ಇಲ್ಲಿದೆ ನೋಡಿ ಆಸ್ತಿ, ಸಾಲದ ವಿವರ!

ಬೆಂಗಳೂರಿನ(Bengaluru) ಸಮಾಜ ಪರಿವರ್ತನ ಸಮಿತಿ ಮುಖ್ಯ ಕಾರ್ಯದರ್ಶಿ ಬಿ ರತ್ನಾಕರ್ ಸಾಕ್ಷಿ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರು ಲೋಕಾಯುಕ್ತ ಹಾಗೂ ರಾಯಚೂರು ಲೋಕಾಯುಕ್ತ(lokayukta) ವಿಭಾಗ ಮಲ್ಲಿಕಾರ್ಜುನ ಖರ್ಗೆ ಅಕ್ರಮ ಆಸ್ತಿ ತನಿಖೆ ನಡೆಸಲಿದೆ ಎಂದು ನಾಗ್ಪುರ ಟುಡೆ ಮಾಧ್ಯಮ ವರದಿ ಮಾಡಿದೆ. 

ಮಲ್ಲಿಕಾರ್ಜುನ ಖರ್ಗೆ ಆಸ್ತಿ ವಿವರಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದಲಿತರನ್ನು(Dalit Community) ಬಳಸಿಕೊಂಡು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂದು ರತ್ನಾಕರ್ ದೂರಿನಲ್ಲಿ ಹೇಳಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅಕ್ರಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ನೀಡಲಾಗಿದೆ.

ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆ: ಫೋನ್ ಎಲ್ಲಿಂದ ಬಂತು ಎನ್ನುವುದು ಪತ್ತೆ..

ಮಲ್ಲಿಕಾರ್ಜುನ ಖರ್ಗೆ ತಮ್ಮ ಅಧಿಕಾರ ಬಳಸಿಕೊಂಡು ಅಕ್ರಮವಾಗಿ ಬೆಂಗಳೂರು, ಮೈಸೂರು, ಗುಲ್ಬರ್ಗಾ, ಗೋವಾ, ದೆಹಲಿ, ಮುಂಬೈ, ಪುಣೆ, ಚೆನ್ನೈ, ನಾಗ್ಪುರ ಸೇರಿದಂತೆ ದೇಶದಲ ಹಲವು ರಾಜ್ಯ ಹಾಗೂ ನಗರಗಳಲ್ಲಿ ಖರ್ಗೆ ಆಸ್ತಿ ಹೊಂದಿದ್ದಾರೆ ಎಂಬುದನ್ನು ರತ್ನಾಕರ್ ದೂರಿನಲ್ಲಿ ದಾಖಲೆ ಸಮೇತ ನೀಡಿದ್ದಾರೆ. 

ಬೆನ್ನೇರುಘಟ್ಟದಲ್ಲಿ 500 ಕೋಟಿ ರೂಪಾಯಿ ಕಾಂಪ್ಲೆಕ್ಸ್,  ಚಿಕ್ಕಮಗಳೂರಿನಲ್ಲಿ 1,000 ಕೋಟಿ ಬೆಲೆಯ 300 ಎಕರೆ ಕಾಫಿ ತೋಟ, 50 ಕೋಟಿ ರೂಪಾಯಿ ಮನೆ, ಕೆಂಗೆರಿಯಲ್ಲಿ 40 ಎಕರೆಯಲ್ಲಿ ಭವ್ಯವಾದ ಫಾರ್ಮ್ ಹೌಸ್, ರಾಮಯ್ಯ ಕಾಲೇಜು ಹತ್ತಿರ 25 ಕೋಟಿ ರೂಪಾಯಿ ಬಿಲ್ಡಿಂಗ್, ಆರ್ ಟಿ ನಗರದಲ್ಲಿ ಬಹುಮಡಿ ಮನೆ, ಬಳ್ಳಾರಿ ರಸ್ತೆಯಲ್ಲಿ ಕೋಟಿ ಕೋಟಿ ಬೆಲೆಬಾಳುವ 17 ಎಕರೆ ಭೂಮಿ, ಇಂದಿರಾ ನಗರದಲ್ಲಿ 3 ಅಂತಸ್ತಿನ ಬಿಲ್ಡಿಂಗ್, ಬೆಂಗಳೂರಿನ ಅತ್ಯಂತ ದುಬಾರಿ ಏರಿಯಾ ಸದಾಶಿವ ನಗರದಲ್ಲಿ 2 ಮನೆ ಹೊಂದಿದ್ದಾರೆ. ಇವೆಲ್ಲವೂ ಅಕ್ರಮವಾಗಿ ಗಳಿಸಿರುವ ಆಸ್ತಿಯಿಂದ ಖರೀದಿಸಿದ ಮನೆ, ಕಾಂಪ್ಲೆಕ್, ಬಿಲ್ಡಿಂಗ್ ಹಾಗೂ ಭೂಮಿಗಳ ವಿವರ ಎಂದು ದೂರಿನಲ್ಲಿ ಹೇಳಲಾಗಿದೆ

ಡಿಕೆಶಿ ಕೆಡವಲು ಸಿದ್ದು- ಖರ್ಗೆ ರಣತಂತ್ರ

ಇದರ ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಮೇಲೆ ಭ್ರಷ್ಟಾಚಾರ ಆರೋಪ ಮಾಡಲಾಗಿದೆ. SC ಗಳಿಗೆ ಮೀಸಲಿದ್ದ 1,427 ಸಹಾಯಕ ಎಂಜಿನಿಯರ್ಸ್ ಹಾಗೂ ಜೂನಿಯರ್ ಎಂಜಿನಿಯರ್ಸ್ ಅನಧಿಕೃತ ನೇಮಕದಲ್ಲಿ ಭಾರಿ ಗೋಲ್ ಮಾಲ್ ಆಗಿದೆ ಎಂದು ಆರೋಪಿಸಲಾಗಿದೆ. ರಾಜ್ಯ ಕಂದಾಯ ಮಂತ್ರಿ ಆಗಿದ್ದಾಗ ಭಾರಿ ಗೋಲ್‌ಮಾಲ್ ಮಾಡಲಾಗಿದೆ. 50 ವರ್ಷಗಳ ರಾಜಕೀಯ ಜೀವನದಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಲವು ಸಂಘ ಸಂಸ್ಥೆಗಳ ಮುಖ್ಯಸ್ಥರಾಗಿರುವ ಮಲ್ಲಿಕಾರ್ಜುನ ಖರ್ಗೆ ತಮ್ಮ ಅಧಿಕಾರವಧಿಯಲ್ಲಿ ಸರ್ಕಾರದಿಂದ ಅನುದಾನ ಪಡೆದು ಅಕ್ರಮವಾಗಿ ಬಳಸಿಕೊಂಡಿದ್ದಾರೆ. ಸಾಂವಿಧಾನಿಕವಾಗಿ ಪ್ರಮಾಣವಚನ ಸ್ವೀಕಾರಿಸುವಾಗ ಆಸ್ತಿ ಕುರಿತು ಸುಳ್ಳು ಅಫಿಡವಿಟ್ ಸಲ್ಲಿಕೆ ಮಾಡಿ ನಿಯಮ ಉಲ್ಲಂಘಿಸಿದ್ದಾರೆ. ಖರ್ಗೆ, ಪುತ್ರ ಪ್ರಿಯಾಂಕ ಖರ್ಗೆ, ಪತ್ನಿ, ಸೊಸೆ ಸೇರಿದಂತೆ ಕುಟುಂಬದವರ ಹೆಸರಿನಲ್ಲಿ ಆಕ್ರಮ ಆಸ್ತಿ ಮಾಡಿದ್ದಾರೆ ಎಂದು ರತ್ನಾಕರ್ ದೂರು ನೀಡಿದ್ದಾರೆ.
 

Latest Videos
Follow Us:
Download App:
  • android
  • ios