Asianet Suvarna News Asianet Suvarna News

ರಾಜಕಾರಣಿಗಳಿಗೆ ಸಾರ್ವಕಾಲಿಕ ಮಾದರಿ ಲಾಲ್‌ ಬಹದ್ದೂರ್‌ ಶಾಸ್ತ್ರಿ

ಹಲವಾರು ಜನರನ್ನು ಬಲಿ ತೆಗೆದುಕೊಂಡ ರೈಲ್ವೆ ಅಪಘಾತವೊಂದ್ಕಕೆ ತಾನು ಜವಾಬ್ದಾರಿಯೆಂದು ಅನಿಸಿದ್ದರಿಂದ ಶಾಸ್ತ್ರಿಜಿ ಅವರು ತಮ್ಮ ರೈಲೆ ಸಚಿವ ಸ್ಥಾನಕ್ಕೇ ರಾಜೀನಾಮೆ ನೀಡಿದರು. ಈ ನಿರ್ಧಾರ ಸಂಸತ್ತು ಮತ್ತು ಇಡೀ ರಾಷ್ಟ್ರದಲ್ಲೇ ಪ್ರಶಂಸೆಗೆ ಪಾತ್ರವಾಯಿತು.

Lal Bahadur Shastri Role model for politicians hls
Author
Bengaluru, First Published Oct 2, 2021, 1:14 PM IST
  • Facebook
  • Twitter
  • Whatsapp

ಲಾಲ್‌ ಬಹದ್ದೂರ್‌ ಶಾಸ್ತಿ್ರ ಈ ದೇಶ ಕಂಡ ಸೌಮ್ಯ, ಸರಳ, ಸಜ್ಜನಿಕೆಯ ಧೀಮಂತ ರಾಜಕೀಯ ನೇತಾರ. ಭಾರತ ದೇಶದ ಪ್ರಧಾನಿಯಾಗಿ ರಾಷ್ಟ್ರಕ್ಕೆ ನಿಜವಾಗಿ ಸಲ್ಲಬೇಕಾದ ಗೌರವವನ್ನು ಸಲ್ಲಿಸಿ ದೇಶದ ಕೀರ್ತಿಯನ್ನು ವಿಶ್ವದ ಮೂಲೆ ಮೂಲೆಗಳಿಗೂ ತಲುಪಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಜನಪರ ನಿಸ್ವಾರ್ಥ ಸೇವೆಯ ಜನನಾಯಕ, ಮೌಲ್ಯಬದ್ಧ ರಾಜಕಾರಣಿ, ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಶಾಸ್ತ್ರೀಜಿ. ಇವರ ಅಚಲ ನಿರ್ಧಾರ, ಅದಮ್ಯ ಅಭಿವೃದ್ಧಿ ಚೇತನ, ಸಮಯ ಪ್ರಜ್ಞೆ, ನುಡಿದಂತೆ-ನಡೆಯುವುದು, ಸತ್ಯ, ನ್ಯಾಯ, ಶ್ರದ್ಧೆ, ಸ್ವಾಭಿಮಾನದ ಹರಿಕಾರ, ಪ್ರೀತಿ- ಸ್ನೇಹದ ಮುಖಂಡ, ಜ್ಞಾನ-ಅರಿವು ಇವುಗಳಿಂದ ತುಂಬಿ, ಅಧಿಕಾರದುದ್ದಕ್ಕೂ ಎದುರಾದ ಎಲ್ಲಾ ರಾಷ್ಟ್ರೀಯ, ರಾಜಕೀಯ ಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸಿ, ಸರ್ವರಿಂದಲೂ ಭೇಷ್‌ ಎನಿಸಿಕೊಂಡವರು. ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಮುನ್ನಡೆಗಾಗಿ ಶ್ರಮಿಸಿದವರು.

ಭಯೋತ್ಪಾದಕರು ಸತ್ತಾಗ ಅತ್ತಿದ್ದ ಸೋನಿಯಾ ಗಾಂಧಿ: ಪ್ರಹ್ಲಾದ ಜೋಶಿ

ಉತ್ತರ ಪ್ರದೇಶದ ವಾರಾಣಸಿ ಸಮೀಪದ ಮುಗಲ್‌ಸರಾಯಿಯಲ್ಲಿ ಅಕ್ಟೋಬರ್‌ 2, 1904 ರಂದು ಲಾಲ್‌ ಬಹದ್ದೂರ್‌ ಶಾಸ್ತಿ್ರಯವರು ಜನಿಸಿದರು. ಶಾಸ್ತ್ರೀಜಿ ಅವರ ಪುಟ್ಟಹಳ್ಳಿಯ ಶಿಕ್ಷಣ ಯಾವ ರೀತಿಯಲ್ಲೂ ಗಮನಾರ್ಹವಾಗಿಲಿಲ್ಲ. ಕಿತ್ತು ತಿನ್ನುವ ಬಡತನವೊಂದನ್ನು ಬಿಟ್ಟರೆ ಅವರ ಬಾಲ್ಯ ಸಂತಸಮಯವಾಗಿತ್ತು. ಕೇವಲ 11ವರ್ಷ ವಯಸ್ಸಿನವರಾಗಿದ್ದಾಗಲೇ ವಿದೇಶಿಯರ ಹಿಡಿತದಲ್ಲಿರುವ ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಹೆಚ್ಚು ಆಸಕ್ತಿ ಹೊಂದಿದ್ದರು. ಶಾಲೆಯ ಮೆಟ್ಟಿಲು ಹತ್ತುವ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದ ಕಹಳೆ ಅವರಲ್ಲಿ ಮೊಳಗಿತ್ತು.

ಸ್ವಾತಂತ್ರ್ಯ ಹೋರಾಟ ಹಾದಿ

ಭಾರತದಲ್ಲಿ ಬ್ರಿಟಿಷ್‌ ಆಡಳಿತವನ್ನು ಬೆಂಬಲಿಸಿದ ದೇಶದ ರಾಜರುಗಳ ವಿರುದ್ಧ ಮಹಾತ್ಮಾ ಗಾಂಧಿ​ ಅವರ ತತ್ವ ಮತ್ತು ಸಿದ್ಧಾಂತದಿಂದ ಮನಸೋತು ಹೋದರು. ಮುಂದೆ ಗಾಂಧಿ​ೕಜಿ ತನ್ನ ದೇಶದ ನಾಗರಿಕರನ್ನು ಅಸಹಕಾರ ಚಳುವಳಿಗೆ ಧುಮುಕಿದರು. ಆಗ ಅವರಿಗಿನ್ನು 13 ವರ್ಷ ವಯಸ್ಸು.

ಲಾಲ್‌ ಬಹದ್ದೂರ್‌ ಶಾಸ್ತಿ್ರ ತಮ್ಮ ಅಗಾಧ ಜ್ಞಾನ, ಶಕ್ತಿಯೊಂದಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಪ್ರಯುಕ್ತ ಬ್ರಿಟಿಷರ ವಿರುದ್ಧ ಅನೇಕ ಹೋರಾಟಗಳು, ಆಂದೋಲನಗಳಲ್ಲಿ ಭಾಗಿಯಾಗುವ ಮೂಲಕ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಏಳು ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸಿದರು. ಹೋರಾಟದ ಕಿಚ್ಚಿನ ಉರಿಯಲ್ಲಿ ಬೆಂದರು. ಹೀಗೆ ಇವರ ಹತ್ತು ಹಲವು ಹೋರಾಟದ ಪ್ರತಿಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು.

ಗಾಂಧೀಜಿಯ ಸರಳ ಅರ್ಥಶಾಸ್ತ್ರ ಇಂದಿನ ಕಾಲಕ್ಕೂ ಏಕೆ ಮುಖ್ಯ?

ಸರ್ಕಾರದಲ್ಲಿ ಸೇವೆ

ತದನಂತರ ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ಪಕ್ಷ ಅಧಿ​ಕಾರಕ್ಕೆ ಬಂದಾಗ, ಶಾಸ್ತಿ್ರ ಅವರನ್ನು ಅವರ ಉತ್ತರ ಪ್ರದೇಶದ ಸಂಸದೀಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಇವರ ನಿಸ್ವಾರ್ಥ ಸೇವೆ ಪರಿಗಣಿಸಿ ಗೃಹ ಸಚಿವ ಸ್ಥಾನವನ್ನು ಹಿರಿಯ ನಾಯಕರು ಕರುಣಿಸಿದರು. ಹೀಗೆ ಕೇಂದ್ರ ಮಂತ್ರಿಮಂಡಲದ ವಿವಿಧ ಖಾತೆಗಳಲ್ಲಿ ಅ​ಧಿಕಾರ ವಹಿಸಿಕೊಂಡರು.

ಶಾಸ್ತಿ್ರ ಅವರು ನಿರಂತರವಾಗಿ ಜನಪ್ರಿಯರಾಗುತ್ತಿದ್ದರು. ಹಲವಾರು ಜನರನ್ನು ಬಲಿ ತೆಗೆದುಕೊಂಡ ರೈಲ್ವೆ ಅಪಘಾತವೊಂದ್ಕಕೆ ತಾನು ಜವಾಬ್ದಾರಿಯೆಂದು ಅನಿಸಿದ್ದರಿಂದ ಅವರು ತಮ್ಮ ರೈಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ನಿರ್ಧಾರ ಸಂಸತ್ತು ಮತ್ತು ಇಡೀ ರಾಷ್ಟ್ರದಲ್ಲೇ ಪ್ರಶಂಸೆಗೆ ಪಾತ್ರವಾಯಿತು. ರೈಲು ದುರಂತದ ಕುರಿತು ನಡೆದ ದೀರ್ಘ ಚರ್ಚೆಗೆ ಪ್ರತಿಕ್ರಿಯಿಸಿದ ಶಾಸ್ತಿ್ರ ಅವರು, ‘ನಾನು ಗಾತ್ರದಲ್ಲಿ ಸಣ್ಣ ಮತ್ತು ಮೃದು ನಾಲಿಗೆ ಉಳ್ಳವನಾದುದರಿಂದ ಜನರು ನನಗೆ ಸ್ಥಿರವಾಗಿರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ದೈಹಿಕವಾಗಿ ನಾನು ಸದೃಢನಲ್ಲದಿದ್ದರೂ, ಆಂತರಿಕವಾಗಿ ಅಷ್ಟೊಂದು ನಿಶಕ್ತನಲ್ಲ ಅಂದೊಕೊಂಡಿದ್ದೇನೆ’ ಎಂದರು. 1964ರಲ್ಲಿ ಅಂದಿನ ನೆಹರು ಹಠಾತ್‌ ನಿಧನಗೊಂಡಾಗ ಶಾಸ್ತ್ರೀಜಿಯನ್ನು ಭಾರತದ ಪ್ರಧಾನಿಯಾನ್ನಾಗಿ ಮಾಡಿದರು.

ವಿಶ್ವಕ್ಕೇ ಪ್ರೇರಣೆ

ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು. ಇನ್ನು 1965ರಲ್ಲಿ ಪಾಕಿಸ್ತಾನ ವಿರುದ್ಧ ಯುದ್ಧ ನಡೆದಾಗ ಶಾಸ್ತಿ್ರ ಎದೆಗುಂದದೆ ದೇಶವನ್ನು ಮುನ್ನಡೆಸಿದರು. ಸೇನಾ ಪಡೆಗಳು ಎದುರಾಳಿಗಳನ್ನು ಮಟ್ಟಹಾಕಿದರು. ಆಗಲೇ ಶಾಸ್ತಿ್ರ ಹೇಳಿದ್ದು, ಜೈ ಜವಾನ್‌ ಜೈ ಕಿಸಾನ್‌ ಎಂಬ ಘೋಷ ವಾಕ್ಯವನ್ನು ಮತ್ತು ರೈತರು, ಸೈನಿಕರು ಈ ದೇಶದ ಆಸ್ತಿ ಅಲ್ಲದೆ, ನನ್ನ ಎರಡು ಕಣ್ಣುಗಳಂತೆ ಎಂದು ಘಂಟಾಘೋಷವಾಗಿ ಘೋಷಣೆ ಮಾಡಿದರು.

ಈ ದೇಶಕ್ಕೆ ಮೂವತ್ತು ವರ್ಷಗಳ ಕಾಲ ಸಮರ್ಪಣಾ ಸೇವೆಯನ್ನು ಸಲ್ಲಿಸುವ ಮೂಲಕ ದೇಶ ಸೇರಿ ವಿಶ್ವಕ್ಕೇ ಮಾದರಿ ಜೊತೆಗೆ ಪ್ರೇರಣೆಯಾದರು. ಶಾಸ್ತಿ್ರಯವರ ಪ್ರಾಮಾಣಿಕ ಸೇವೆ ಮತ್ತು ಅತ್ಯಂತ ಸಾಮರ್ಥ್ಯವಿರುವ ವ್ಯಕ್ತಿಯಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಶಾಸ್ತಿ್ರ ಅವರು ವಿನಮ್ರತೆ, ಸಹಿಷ್ಣುತೆ, ಮಹಾನ್‌ ಆಂತರಿಕ ಶಕ್ತಿಯುಳ್ಳ ಮತ್ತು ದೃಢನಿಶ್ಚಯವುಳ್ಳ, ಜನರ ಭಾಷೆಯನ್ನು ಅರ್ಥೈಸಿಕೊಂಡ ಜನಸಾಮಾನ್ಯರ ವ್ಯಕ್ತಿಯಾಗಿದ್ದರು. ಪ್ರಗತಿಯೆಡೆಗೆ ರಾಷ್ಟ್ರವನ್ನು ಮುನ್ನಡೆಸಿದ ಕೀರ್ತಿ ಇವರದು. ಅಲ್ಲದೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ದೂರದೃಷ್ಟಿಯುಳ್ಳ ವ್ಯಕ್ತಿ ಲಾಲ್‌ ಬಹದ್ದೂರ್‌ ಶಾಸ್ತಿ್ರಯವರಾಗಿ ನಮ್ಮೆಲ್ಲರ ಪ್ರೇರಣೆಯಾದ್ದಾರೆ. ಮೂಢನಂಬಿಕೆಗಳಿಗೆ ಕಡಿವಾಣ ಹಾಕಿ, ಭವ್ಯ ಭಾರತದ ನಿರ್ಮಾಣಕ್ಕೆ ಸಹಕಾರಿಯಾಗೋಣ, ಕಾಯಕಜೀವಿಗಳಾಗಿ ಬಾಳೋಣ.

- ಸಂಗಮೇಶ ಎನ್‌ ಜವಾದಿ, ಬೀದರ್‌

Follow Us:
Download App:
  • android
  • ios