ಪತ್ನಿಗೆ ಸೀರೆ ಖರೀದಿಸಿದ ಸಿಎಂ ಬೊಮ್ಮಾಯಿ: ತಾವೂ ಕೊಂಡ ಎಂಟಿಬಿ, ವಿಜಯೇಂದ್ರ
ತಮ್ಮ ಪತ್ನಿ ಚನ್ನಮ್ಮಗಾಗಿ ಖಾದಿ ಎಂಪೋರಿಯಂನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೀರೆ ಖರೀದಿಸಿದರು. ಇದೇ ವೇಳೆ ಕಾರಜೊಳ ಸಾಹೇಬ್ರೆ ನೀವು ಸೀರೆ ಖರೀದಿಸಿ ಎಂದರು. ಬೇಡ, ಸೀರೆ ಖರೀದಿ ಬಗ್ಗೆ ನನಗೆ ಗೊತ್ತಿಲ್ಲ ಎಂದು ಕಾರಜೋಳ ಹೇಳಿದರು.ಇದಕ್ಕುತ್ತರಿಸಿದ ಸಿಎಂ ದುಡ್ಡು ಕೊಟ್ಟು ಬೈಸಿಕೊಳ್ಳೋದು ಇದು, ನಮಗೆ ಸೆಲೆಕ್ಷನ್ ಗೊತ್ತಾಗಲ್ಲ ಎಂದರು. ಇನ್ನು ಇದೆ ವೇಳೆ ಆಗಮಿಸಿದ ವಿಜಯೇಂದ್ರ ಏನ್ ಸೀರೆ ಖರೀದಿ ಜೋರಾ ಎಂದಿದ್ದು ಅವರಿಗೂ ನಮ್ಮದು ಮುಗಿತು ಈಗ ನೀವು ತಗೊಳ್ಳಿ ಎಂದರು. ಸಿಎಂ ಮಾತಿನಂತೆ ವಿಜಯೇಂದ್ರ ಸಹ ಸೀರೆ ಖರೀದಿಸಿದರು.

Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೂಡಿ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್.ನಾಗರಾಜು ಎಂಟಿಬಿ, ಸಚಿವರುಗಳಾದ ಗೋವಿಂದ ಕಾರಜೋಳ,ಸುನೀಲ್ ಕುಮಾರ್,ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ಬೆಂಗಳೂರಿನ ಗಾಂಧಿಭವನದ ಬಳಿ ಇರುವ ಖಾದಿ ಎಂಪೋರಿಯಂನಲ್ಲಿ ಖಾದಿ ಹಾಗೂ ಗ್ರಾಮೋದ್ಯಮಗಳ ಉತ್ಪನ್ನ ಗಳನ್ನು ಖರೀದಿಸಿದರು.
Basavaraj Bommai
ಸಂಕಷ್ಟದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಸಂಘ-ಸಂಸ್ಥೆಗಳಿಗೆ ಆರ್ಥಿಕ ಬಲ ನೀಡಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಖಾದಿ ಭಂಡಾರಗಳಿಗೆ ಭೇಟಿ ನೀಡಿದರು
Basavaraj Bommai
ಖಾದಿ ಭಂಡಾರಗಳಿಗೆ ಭೇಟಿ ನೀಡಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಖರೀದಿಸುವಂತೆ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು
Basavaraj Bommai
ಸಚಿವ ಎಂಟಿಬಿ ನಾಗರಾಜು ಅವರು ಸ್ವತಃ ತಾವೇ ಅದಕ್ಕೆ ಮೇಲ್ಪಂಕ್ತಿ ಹಾಕಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರ ಸಚಿವರುಗಳನ್ನು ಕರೆದೊಯ್ದು ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಖರೀದಿಸಿದರು
Basavaraj Bommai
ಈ ಮಳಿಗೆಯನ್ನು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ತಂದೆ ಎಸ್. ಆರ್. ಬೊಮ್ಮಾಯಿ, ಅವರು (ಅಂದಿನ ಹಣಕಾಸು ಸಚಿವರು) 15.11.1984ರಲ್ಲಿ ಉದ್ಘಾಟಿಸಿದ್ದರು. ಇಂದು ಸಿಎಂ ಬೊಮ್ಮಾಯಿ ಮುಖಂಡರೊಂದಿಗೆ ತೆರಳಿ ಖಾದಿ ಎಂಪೋರಿಯಂನಲ್ಲಿ ಖರೀದಿ ಮೂಲಕ ಪ್ರೋತ್ಸಾಹದ ಹೆಜ್ಜೆ ಇಟ್ಟರು.
Basavaraj Bommai
ಮುಖ್ಯಮಂತ್ರಿಗಳು ಮತ್ತು ಸಚಿವರುಗಳ ಭರ್ಜರಿ ಖರೀದಿಯಿಂದ ಪ್ರೇರಣೆಗೊಂಡಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ,ಖಾದಿ ಮತ್ತು ಗ್ರಾಮೋದ್ಯಮದ ಉತ್ಪನ್ನಗಳ ಖರೀದಿಗೆ ಮುಗಿಬಿದ್ದರು.ಖರೀದಿಯ ಭರಾಟೆ ಭರ್ಜರಿಯಾಗಿ ನಡೆಯಿತು.
Basavaraj Bommai
ನೋಂದಣಿಯಾದ ಖಾದಿ ಭಂಡಾರಗಳಲ್ಲಿ ಅರಳೆ ಖಾದಿ, ಉಣ್ಣೆ ಖಾದಿ, ಪಾಲಿ ವಸ್ತ್ರಗಳ ಮೇಲೆ ಗರಿಷ್ಠ ಶೇಕಡ 35 ರಷ್ಟು ಮತ್ತು ರೇಷ್ಮೆ ಖಾದಿಯ ಮೇಲೆ ಶೇಕಡ 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಪ್ರೋತ್ಸಾದ ಉದ್ದೇಶದಿಂದ ಗ್ರಾಹಕರಿಗೆ ರಿಯಾಯಿತಿ ಸಿಗುತ್ತಿದೆ
Basavaraj Bommai
ತಮ್ಮ ಪತ್ನಿಗೆ ಸೀರೆ ಖರೀದಿಸಿದ ಸಿಎಂ ಬೊಮ್ಮಾಯಿ ಕಾರಜೊಳ ಸಾಹೇಬ್ರೆ ನೀವು ಸೀರೆ ಖರೀದಿಸಿ ಎಂದರು. ಬೇಡ, ಸೀರೆ ಖರೀದಿ ಬಗ್ಗೆ ನನಗೆ ಗೊತ್ತಿಲ್ಲ ಎಂದ ಕಾರಜೋಳ ಮಾತಿಗೆ ದುಡ್ಡು ಕೊಟ್ಟು ಬೈಸಿಕೊಳ್ಳೋದು ಇದು, ನಮಗೆ ಸೆಲೆಕ್ಷನ್ ಗೊತ್ತಾಗಲ್ಲ ಎಂದರು ಸಿಎಂ. ಸಿಎಂ ಸೀರೆ ಖರೀದಿ ವೇಳೆ ಆಗಮಿಸಿದ ವಿಜಯೇಂದ್ರ ಏನ್ ಸೀರೆ ಖರೀದಿ ಜೋರಾ ಎಂದರು. ನಮ್ಮದು ಮುಗಿತು ಈಗ ನೀವು ತಗೊಳ್ಳಿ ಎಂದ ಸಿಎಂ ಮಾತಿನಂತೆ ಸೀರೆ ಖರೀದಿಸಿದರು ವಿಜಯೇಂದ್ರ.
ಸಿಎಂ ಬಸವರಾಜ ಬೊಮ್ಮಾಯಿ ಅವರ ಬಿಲ್ - 16031/- ರು.
ಎಂಟಿಬಿ ನಾಗರಾಜ್ ಬಿಲ್ - 3000 ರು.
ಬಿ.ವೈ.ವಿಜಯೇಂದ್ರ ಬಿಲ್ - 4300 ರು.