Asianet Suvarna News Asianet Suvarna News

IPL 2021 ಕೆಕೆಆರ್‌ನಿಂದ ನಾಯಕ ಮಾರ್ಗನ್‌ಗೆ ಗೇಟ್‌ಪಾಸ್‌‌?

* ಮುಂದುವರೆದ ಕೆಕೆಆರ್ ನಾಯಕ ಮಾರ್ಗನ್‌ ಬ್ಯಾಟಿಂಗ್‌ ವೈಪಲ್ಯ

* ಕಳೆದ 4 ಇನಿಂಗ್ಸ್‌ಗಳಿಂದ ಮಾರ್ಗನ್ ಗಳಿಸಿದ್ದು ಕೇವಲ 17 ರನ್‌

* ಕೆಕೆಆರ್‌ ನಾಯಕ ಪಟ್ಟದ ಮೇಲೆ ಅನಿಶ್ಚಿತತೆಯ ತೂಗುಗತ್ತಿ

Kolkata Knight Riders Captain Eoin Morgan emerges as biggest flop of IPL 2021 kvn
Author
Dubai - United Arab Emirates, First Published Oct 2, 2021, 8:54 AM IST
  • Facebook
  • Twitter
  • Whatsapp

ದುಬೈ(ಅ.02): 2020ರ ಐಪಿಎಲ್‌ನಲ್ಲಿ (IPL 2021) ದಿನೇಶ್‌ ಕಾರ್ತಿಕ್‌ (Dinesh Karthik) ರನ್ನು ನಾಯಕತ್ವದಿಂದ ಕೆಳಗಿಳಿಸಿ ಇಂಗ್ಲೆಂಡ್‌ನ ಇಯಾನ್‌ ಮೊರ್ಗನ್‌ಗೆ (Eoin Morgan) ನಾಯಕತ್ವ ನೀಡಿದ್ದ ಕೋಲ್ಕತಾ ನೈಟ್‌ರೈಡ​ರ್ಸ್‌ (Kolkata Knight Riders), ಈಗ ಮತ್ತೊಮ್ಮೆ ಹೊಸ ನಾಯಕನನ್ನು ಹುಡುಕುವ ಒತ್ತಡಕ್ಕೆ ಸಿಲುಕಿದೆ. ಕಳೆದ 4 ಇನಿಂಗ್ಸ್‌ಗಳಲ್ಲಿ ಮಾರ್ಗನ್‌ ಕೇವಲ 17 ರನ್ ಮಾತ್ರ ಗಳಿಸಿದ್ದಾರೆ.

ಇಯಾನ್ ಮಾರ್ಗನ್‌ ಕೆಕೆಆರ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ವಿಫಲರಾಗುತ್ತಿರುವ ಜೊತೆಗೆ ಬ್ಯಾಟಿಂಗ್‌ ಲಯವನ್ನೂ ಕಳೆದುಕೊಂಡಿದ್ದಾರೆ. ನಾಯಕನಾಗಿರುವ ಕಾರಣಕ್ಕೆ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುತ್ತಿರುವ ಮಾರ್ಗನ್‌‌, ಈ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ ಕೇವಲ 109 ರನ್‌ ಕಲೆಹಾಕಿದ್ದಾರೆ. ಅವರ ವೈಯಕ್ತಿಕ ಗರಿಷ್ಠ ಮೊತ್ತ 47 ರನ್‌. ಮೂರು ಬಾರಿ ಸೊನ್ನೆಗೆ ಔಟಾಗಿರುವ ಮಾರ್ಗನ್‌‌, 12 ಪಂದ್ಯಗಳಲ್ಲಿ ಕೇವಲ 7 ಬೌಂಡರಿ, 5 ಸಿಕ್ಸರ್‌ ಬಾರಿಸಿದ್ದಾರೆ. ಈ ಆವೃತ್ತಿ ಬಳಿಕ ಮೊರ್ಗನ್‌ರನ್ನು ಕೆಕೆಆರ್‌ ತಂಡದಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ.

IPL 2021: ರಾಹುಲ್ ಹಾಫ್ ಸೆಂಚುರಿ, ಶಾರುಖ್ ಭರ್ಜರಿ ಸಿಕ್ಸರ್‌ನಿಂದ ಪಂಜಾಬ್‌ಗೆ 5 ವಿಕೆಟ್ ಗೆಲುವು

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 45ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ (Punjab Kings) ಎದುರು ಕೋಲ್ಕತ ನೈಟ್‌ ರೈಡರ್ಸ್‌ (KKR) ತಂಡವು ಆಘಾತಕಾರಿ ಸೋಲು ಕಾಣುವ ಮೂಲಕ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿಕೊಂಡಿದೆ. ಈ ಪಂದ್ಯದಲ್ಲಿ ಅಂದರೆ ಯುಎಇ ಚರಣದ ನಾಲ್ಕನೇ ಪಂದ್ಯದಲ್ಲೂ ಇಯಾನ್‌ ಮಾರ್ಗನ್‌ ಸತತವಾಗಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಪಂದ್ಯದ 15ನೇ ಓವರ್‌ನಲ್ಲಿ ಕ್ರೀಸ್‌ಗಿಳಿದ ಮಾರ್ಗನ್‌ ಮಹತ್ವದ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಮತ್ತೊಮ್ಮೆ 2 ಎಸೆತಗಳಲ್ಲಿ 2 ರನ್‌ ಬಾರಿಸಿ ಪಂಜಾಬ್‌ ವೇಗಿ ಶಮಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದಾರೆ.

ಇದೀಗ ಕೆಕೆಆರ್ ನಾಯಕತ್ವದ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿವೆ. ಯುಎಇ ಚರಣದಲ್ಲಿ ಮುಂಬೈ ಇಂಡಿಯನ್ಸ್‌ ಎದುರು 7 ರನ್‌ ಬಾರಿಸಿದ್ದ ಮಾರ್ಗನ್‌, ಚೆನ್ನೈ ಸೂಪರ್ ಕಿಂಗ್ಸ್‌ ಎದುರು 8 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಶೂನ್ಯ ಸಂಪಾದನೆ ಮಾಡಿದ್ದ ಕೆಕೆಆರ್ ನಾಯಕ, ಪಂಜಾಬ್ ಎದುರು 2 ರನ್‌ ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದ್ದರು.

Follow Us:
Download App:
  • android
  • ios