ಜಿಲ್ಲೆಗಳಲ್ಲಿ ಕರ್ನಾಟಕ ಬಂದ್ ನೀರಸ, CMಗೆ ದಿಲ್ಲಿಯಿಂದ ಬಂತು ಸಂದೇಶ; ಡಿ.5ರ ಟಾಪ್ 10 ಸುದ್ದಿ!
ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಬಹುತೇಕ ಯಶಸ್ವಿಯಾದರೆ, ಇತರ ಜಿಲ್ಲೆಗಳಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಕೊರೋನಾ ಲಸಿಕೆಯಿಂದ ವೈರಸ್ ಸಾಯಲ್ಲ ಅನ್ನೋ ವಿಶ್ವ ಆರೋಗ್ಯ ಸಂಸ್ಥೆ ವರದಿ ಇದೀಗ ತಲ್ಲಣ ಮೂಡಿಸಿದೆ. ಟೀಂ ಇಂಡಿಯಾದಿಂದ ರವೀಂದ್ರ ಜಡೇಜಾ ಹೊರಬಿದಿದ್ದಾರೆ. ಬಿಗ್‌ಬಾಸ್ ಅಭ್ಯರ್ಥಿಗಳ ಪಟ್ಟಿ, ಸಂಪುಟ ವಿಸ್ತರಣೆಗೆ ದೆಹಲಿಯಿಂದ ಬಂದಿದೆ ಸಂದೇಶ ಸೇರಿದಂತೆ ಡಿಸೆಂಬರ್ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ,
ಕೊರೋನಾ ಲಸಿಕೆಗೆ ಕಾಯುತ್ತಿರುವವರಿಗೆ ಬಿಗ್ ಶಾಕ್ ನೀಡಿದ WHO!...
ಸಾಮಾಜಿಕ ಅಂತರ, ಮಾಸ್ಕ್, ಶುಚಿತ್ವ ಎಲ್ಲೂ ಮಾರ್ಗಸೂಚಿ ಅನುಸರಿಸಿದರೂ ಕೊರೋನಾ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಇಡೀ ವಿಶ್ವವೇ ಕೊರೋನಾ ಲಸಿಕೆಗಾಗಿ ಕಾಯುತ್ತಿದೆ. ಭಾರತ ಇದೀಗ ಲಸಿಕೆ ವಿತರಣೆಗೆ ಮೇಲಿಂದ ಮೇಲೆ ಸಭೆ ನಡೆಸುತ್ತಿದೆ. ಲಸಿಕೆಯೊಂದೆ ಪರಿಹಾರ ಎಂದು ಎಲ್ಲಾ ದೇಶಗಳು ನಂಬಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ವರದಿಗೆ ಜನ ಬೆಚ್ಚಿ ಬಿದ್ದಿದ್ದಾರೆ.
2024ರ ಚುನಾವಣೆಗೆ ಬಿಜೆಪಿ ಪ್ರಚಾರ ಶುರು!...
2024ರ ಲೋಕಸಭೆ ಚುನಾವಣೆ ತಯಾರಿಯನ್ನು ಈಗಿನಿಂದಲೇ ಬಿಜೆಪಿ ಆರಂಭಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು 120 ದಿನಗಳ ದೇಶಯಾತ್ರೆಯನ್ನು ಶುಕ್ರವಾರ ಉತ್ತರಾಖಂಡದಿಂದ ಆರಂಭಿಸಿದ್ದಾರೆ.
ಕರ್ನಾಟಕ ಬಂದ್; ಬೇರೆ ಬೇರೆ ಜಿಲ್ಲೆಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆ ಇದು...
ಮರಾಠ ಸಮುದಾಯ ನಿಗಮ ಸ್ಥಾಪನೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಸ್ವಲ್ಪ ಮಟ್ಟಿಗೆ ಬಂದ್ ಎಫೆಕ್ಟ್ ಕಂಡು ಬಂದಿದ್ದು ಬಿಟ್ಟರೆ ಬೇರೆ ಬೇರೆ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕರ್ನಾಟಕ ಬಂದ್‌ನಿಂದ ಆರ್ಥಿಕ ನಷ್ಟವಾದರೆ ಆಯೋಜಕರೇ ಹೊಣೆ: ಹೈಕೋರ್ಟ್...
ಬಂದ್ ವೇಳೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಮಾರ್ಗಸೂಚಿ ಉಲ್ಲಂಘಿಸಿದರೆ, ತಪ್ಪಿತಸ್ಥರಿಂದ ಪೊಲೀಸರು ದಂಡ ಸಂಗ್ರಹಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಟೀಂ ಇಂಡಿಯಾಗೆ ಶಾಕ್; ರವೀಂದ್ರ ಜಡೇಜಾ ಟಿ20 ಸರಣಿಯಿಂದ ಔಟ್..!...
ಆಸ್ಟ್ರೇಲಿಯಾ ವಿರುದ್ದದ ಮೊದಲ ಟಿ20 ಪಂದ್ಯದ ಗೆಲುವಿನ ರೂವಾರಿ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.
ಕ್ಲಾಸ್ ರೂಂನಲ್ಲೇ ವಿದ್ಯಾರ್ಥಿಗಳ ಮದ್ವೆ; ಆಮೇಲೆ ಆಗಿದ್ದೇನು? ಬೇಕಿತ್ತಾ ಇವೆಲ್ಲಾ?...
ಇಲ್ಲೊಂದು ಕಡೆ ಕ್ಲಾಸ್‌ರೂಮ್‌ನಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು ಮದವೆಯಾಗಿ ಸುದ್ದಿಯಾಗಿದ್ದಾರೆ. ಮದುವೆಯಾದವರನ್ನು ಕಿಕ್‌ಔಟ್ ಮಾಡಿದ್ದಾರೆ ಪ್ರಿನ್ಸಿಪಲ್. ಓದೋ ವಯಸ್ಸಲ್ಲಿ ಬೇಕಾ ಇವೆಲ್ಲಾ..?
ರಾಧಕ್ಕ, ಸೋನು ಗೌಡ, ಡ್ರೋನ್ ಪ್ರತಾಪ್; ಬಿಗ್ ಬಾಸ್ ಮನೆಗೆ ಹೋಗೋರು ಯಾರು?...
2021ಕ್ಕೆ ಬಿಗ್ ಬಾಸ್ ಸೀಸನ್ 8 ಪ್ರಾರಂಭವಾಗಲಿದ್ದು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಅಫೀಶಿಯಲ್ ಮಾಹಿತಿ ಇಲ್ಲವಾದರೂ ಕೆಲವೊಂದು ಟ್ರೋಲ್ ಪೇಜ್‌ಗಳು ಯಾರಿರಬಹುದು ಎಂದು ಗೆಸ್ ಮಾಡಿದೆ.
ಮತ್ತೆ ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ದರ; ಕಳೆದೆರಡು ವರ್ಷದಲ್ಲೇ ಗರಿಷ್ಠ!...
ಕೊರೋನಾ ವೈರಸ್ ನಡುವೆ ಭಾರತ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದರ ನಡುವೆ ಮತ್ತೊಂದು ಆತಂಕ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದೀಗ 13ನೇ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮ ಇದೀಗ ಎಲ್ಲಾ ಉತ್ಪನ್ನಗಳ ಮೇಲೆ ಬೀಳಲಿದೆ.
500 KM ಮೈಲೇಜ್, ಸರಿಸಾಟಿ ಇಲ್ಲದ ಬೆಂಗಳೂರಿನ ಪ್ರವೈಗ್ ಎಲೆಕ್ಟ್ರಿಕ್ ಕಾರು ಅನಾವರಣ!...
ಪ್ರವೈಗ್ ಎಲೆಕ್ಟ್ರಿಕ್ ಕಾರು ಇದು ಭಾರತದ ಟೆಸ್ಲಾ ಎಂದೇ ಜನಪ್ರಿಯವಾಗುತ್ತಿದೆ. ಅತ್ಯಂತ ಆಕರ್ಷಕ, ದಕ್ಷ ಹಾಗೂ ಒಂದು ಬಾರಿ ಚಾರ್ಜ್ ಮಾಡಿದರೆ 5000 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಪ್ರವೈಗ್ ಡೈನಾಮಿಕ್ಸ್ ಸ್ಟಾರ್ಟ್ ಅಪ್ ಕಂಪನಿಯ Extinction MK1 ಪ್ರಿಮಿಯಂ ಎಲೆಕ್ಟ್ರಿಕ್ ಕಾರು ಅನಾವರಣಗೊಂಡಿದೆ.
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ದಿಲ್ಲಿಯಿಂದ ಸಂದೇಶ ಹೊತ್ತು ತಂದು ಸಿಎಂಗೆ ತಿಳಿಸಿದ ಉಸ್ತುವಾರಿ..!...
ಭಾರೀ ಕುತೂಹಲ ಕೆರಳಿಸಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ದೆಹಲಿಯಿಂದ ಹೈಕಮಾಂಡ್ ಸಂದೇಶವನ್ನ ಹೊತ್ತು ತಂದಿದ್ದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಸಿಎಂಗೆ ತಿಳಿಸಿದ್ದಾರೆ.