2020ರಲ್ಲಿ ಮಧ್ಯದಲ್ಲಿ ಬಿಗ್ ಬಾಸ್‌ ಸೀಸನ್‌ 8 ಆರಂಭವಾಗಬೇಕಿತ್ತು. ಕೊರೋನಾ  ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದ ಕಾರಣ ಮುಂದಿನ ವರ್ಷವೇ  ಕಾರ್ಯಕ್ರಮ ಶುರು ಮಾಡುವುದಾಗಿ ತಂಡ ನಿರ್ಧರಿಸಿತು. ಆದರೆ ಹಿಂದಿ, ತೆಲುಗು ಹಾಗೂ ತಮಿಳು ಬಿಗ್‌ ಬಾಸ್‌ ಕಾರ್ಯಕ್ರಮಗಳು ಭರ್ಜರಿ ರೆಸ್ಪಾನ್ಸ್‌ ಪಡೆಯುತ್ತಿರುವ ಕಾರಣ 2021ರ ಪ್ರಾರಂಭದಲ್ಲಿ ಕನ್ನಡದ ಮತ್ತೊಂದು ಸೀಸನ್ ಶುರು ಮಾಡಬೇಕೆಂದು ಸುದೀಪ್ ಹಾಗೂ ಕಲರ್ಸ್‌ ಕನ್ನಡ ಹೆಡ್‌ ಪರಮೇಶ್ವರ್ ಗುಂಡ್ಕಲ್ ಈಗಾಗಲೇ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ.

ಬಿಗ್‌ ಬಾಸ್‌ ಅಕ್ಷತಾ ಪಾಂಡವಪುರ ಸೀಮಂತ; ಡಿಫರೆಂಟ್ ಫೋಟೋ ಶೂಟ್‌! 

ಮುಂದಿನ ತಿಂಗಳು ಶುರುವಾಗುತ್ತದೆ ಅಂದ್ಮೇಲೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಗೆ ಈಗಾಗಲೇ ಚಾಲನೆ ಸಿಕ್ಕಿರಬಹುದು. ಕಡೇ ಕ್ಷಣದವರೆಗೂ ಸ್ಪರ್ಧಿಗಳು ಯಾರೆಂದು ಗೌಪ್ಯವಾಗಿಡಲಾಗುತ್ತದೆ. ಸ್ಪರ್ಧಿಗಳಿಗೂ ಮತ್ತೊಬ್ಬ ಸ್ಪರ್ಧಿ ಬಗ್ಗೆ ಯಾವುದೇ ಮಾಹಿತಿ ಇರದಷ್ಟು ಎಲ್ಲವನ್ನೂ ಸಸ್ಪೆನ್ಸ್‌ ಆಗಿಯೇ ಇಡಲಾಗುತ್ತದೆ. ಆದರೂ ಟ್ರೋಲ್ ಪೇಜ್‌ಗಳು, ಕೆಲವು ನೆಟ್ಟಿಗರು ಸ್ಪರ್ಧಿಗಳನ್ನು ಗೆಸ್ ಮಾಡಲು ಶುರು ಮಾಡಿದ್ದಾರೆ. ಲಿಸ್ಟ್‌ನಲ್ಲಿ ಯಾರಿದ್ದಾರೆಂಬುದನ್ನು ನೋಡಿದರೆ ನಿಮಗೆ ಕುತೂಹಲ, ಖುಷಿ, ಆಕ್ರೋಶ...ಎಲ್ಲಾ ಭಾವನೆಗಳೂ ಒಟ್ಟಿಗೆ ಮೂಡುವುದರಲ್ಲಿ ಅನುಮಾನವೇ ಇಲ್ಲ. 

ಬಿಗ್ ಬಾಸ್‌ ಸೀಸನ್‌ 8ರಲ್ಲಿ ಸೆಲೆಬ್ರಿಟಿಗಳು ಮಾತ್ರ ಇರ್ತಾರಾ ಅಥವಾ ಕಾಮನ್‌ ವ್ಯಕ್ತಿಗಳೂ ಇರ್ತಾರಾ, ಗೊತ್ತಿಲ್ಲ. ಆದರೆ, ಟ್ರೋಲ್ ಪಟ್ಟಿಯಲ್ಲಿ ಕೆಲವೊಂದು ಪರಿಚಿತ ಮುಖಗಳನ್ನೂ ನೋಡಬಹುದು. ಜೊತೆ ಜೊತೆಯಲಿ ನಟ ಆರ್ಯವರ್ಧನ್, ನ್ಯೂಸ್‌ ರೀಡರ್‌ ರಾಧಾ ಹಿರೇಗೌಡರ್, ದಿವ್ಯಾ, ಡ್ರೋನ್ ಪ್ರತಾಪ್, ನಿತ್ಯಾನಂದ, ಟಿಕ್ ಟಾಕ್‌ ಚೆಲುವೆ ಸೋನು ಗೌಡ, ಬಿಂದು ಗೌಡ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಮಾಡಿದವರ ಅನೇಕ ಹೆಸರುಗಳಿವೆ. 

ತೆಲುಗು ಬಿಗ್ ಬಾಸ್‌ನಲ್ಲಿ ಕಿಚ್ಚ ಸುದೀಪ್‌; ಕನ್ನಡದಲ್ಲಿ ಮಾತನಾಡಿದ ವಿಡಿಯೋ ವೈರಲ್!

ಎಲ್ಲರಿಗೂ ಒಂದು ಚಿಂತೆ, ಆದರೆ ಮಿಸ್ ಮಾಡದೇ ಧಾರಾವಾಹಿ ನೋಡುವ ಆಂಟಿಯರಿಗೆ  ಮತ್ತೊಂದು ಚಿಂತೆ ಶುರುವಾಗಿದೆ. ಬಿಗ್ ಬಾಸ್‌ ಸ್ಪರ್ಧೆಗೆ ಆರ್ಯ ಸರ್ ಹೋದರೆ ಅನು ಸಿರಿಮನೆ ಏನು ಮಾಡುತ್ತಾಳೆ? ಪ್ಲೀಸ್ ಆರ್ಯವರ್ಧನ್‌ ಹೋಗಬೇಡಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರೂ ಡ್ರೋನ್ ಪ್ರತಾಪ್ ಅಲ್ಲೂ ಏನಾದರೂ ಸಾಧನೆ ಮಾಡಬಹುದೆಂದು ಕಾಲು ಎಳೆದಿದ್ದಾರೆ. ಒಟ್ಟಿನಲ್ಲಿ ಸೀಸನ್‌ 8ರ ಬಿಗ್ ಬಾಸ್ ರಿಯಾಲಿಟಿ ಶೋ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕುವುದು ಗ್ಯಾರಂಟಿ.