ಜಿನೆವಾ(ಡಿ.05): ಭಾರತ, ಅಮೆರಿಕ, ರಷ್ಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳು ಕೊರೋನಾ ಲಸಿಕೆ ಬಿಡುಗಡೆ ಮಾಡಲು ಅಂತಿಮ ಹಂತದ ಪ್ರಯ್ನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ 2ನೇ ಸರ್ವ ಪಕ್ಷ ಸಭೆ ನಡೆಸಿ ಲಸಿಕೆ ವಿತರಣೆ, ನೀಡುವಿಕೆ ಕುರಿತು ಅವಲೋಕನ ಮಾಡಿದ್ದಾರೆ. ಇದರ ನಡುವೆ ವಿಶ್ವ ಆರೋಗ್ಯ ಸಂಸ್ಥೆ(WHO) ಕೇವಲ ಲಸಿಕೆಯಿಂದ ಕೊರೋನಾ ಸಾಯಲ್ಲ ಎಂಬ ವರದಿ ಇದೀಗ ಲಸಿಕೆಗಾಗಿ ಕಾಯುತ್ತಿರುವ ಜನರನ್ನು ಬೆಚ್ಚಿ ಬೀಳಿಸಿದೆ.

ಅತೀ ಹೆಚ್ಚು ಕೊರೋನಾ ಲಸಿಕೆ ಖರೀದಿಸಿದ ದೇಶ ಭಾರತ, ಅಧ್ಯಯನ ವರದಿ ಬಹಿರಂಗ!..

ಕೊರೋನಾ ಲಸಿಕೆಯಿಂದ ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಬರುವುದಿಲ್ಲ. ದೇಹದಲ್ಲಿರುವ ಕೊರೋನ ವೈರಸ್ ಸಂಪೂರ್ಣ ತೊಲಗಿಸಲು ಕೇವಲ ಲಸಿಕೆಯಿಂದ ಮಾತ್ರ ಸಾಧ್ಯವಿಲ್ಲ ಎಂದು WHO ತುರ್ತು ಘಟಕದ ನಿರ್ದೇಶಕ ಮೈಕಲ್ ರ್ಯಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ: ಸರ್ವ ಪಕ್ಷ ಸಭೆಯಲ್ಲಿ ನಿರ್ಧಾರ!

ಲಸಿಕೆ ಸದ್ಯದ ಪರಿಸ್ಥಿತಿಗೆ ಅತ್ಯವಶ್ಯಕ. ಆದರೆ ಕೇವಲ ಲಸಿಕೆಯಿಂದ ಮಾತ್ರ ಕೊರೋನಾ ವೈರಸ್ ನಿಯಂತ್ರಿಸುವುದು ಅಸಾಧ್ಯ. ಲಸಿಕೆ ಸಿಕ್ಕದ ತಕ್ಷಣ ಎಚ್ಚರಿಕೆ, ಕೊರೋನಾ ಕುರಿತ ಮಾರ್ಗಸೂಚಿ ನಿರ್ಲಕ್ಷಿಸಿದರೆ ಕಷ್ಟ.  ಕಾರಣ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಶುಚಿತ್ವಕ್ಕೂ ಅಷ್ಟೇ ಆದ್ಯತೆ ನೀಡಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಲಸಿಕೆಯಿಂದ ಕೊರೋನಾ ವೈರಸ್ ಬಿಕ್ಕಟ್ಟು ಮುಗಿದೆ ಎಂದು ತಿಳಿಯುವುದ ತಪ್ಪು ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟೆಡ್ರೆಸ್ ಅಧಮನ್ ಗೆಬ್ರಿಸಿಸ್ ಹೇಳಿದ್ದಾರೆ.

ಕೊರೋನಾಗೆ 15 ಲಕ್ಷ ಮಂದಿ ಬಲಿ
ವಿಶ್ವದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ದಾಖಲೆ ಪ್ರಮಾಣದ ಹೊಸ ಪ್ರಕರಣಗಳು ವರದಿಯಾಗಿದೆ. ಈಗಾಗಲೇ ಕೊರೋನಾದಿಂದ 15 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು 65 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲಿದೆ.

ಅಮೆರಿಕದಲ್ಲಿ ಕೊರೋನಾ ವೈರಸ್ 3ನೇ ಅಲೆ ಎದ್ದಿದೆ. ಕಳೆದೊಂದು ವಾರದಲ್ಲಿ ವಿಶ್ವದಲ್ಲಿ ಪ್ರತಿ ದಿನ ಸರಾಸರಿ 10,000 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.