UN Report on Femicides: ಮಹಿಳೆಯರಿಗೆ ಮನೆಯೇ ಡೇಂಜರಸ್ ಪ್ಲೇಸ್, 10 ನಿಮಿಷಕ್ಕೆ ಒಬ್ಬರ ಕೊಲೆ!
ಸ್ತ್ರೀಹತ್ಯೆಗಳ ಬಗ್ಗೆ ಇತ್ತೀಚಿನ ವಿಶ್ವಸಂಸ್ಥೆಯ ವರದಿ ಪ್ರಕಾರ, ಎಲ್ಲಾ ಸ್ತ್ರೀಹತ್ಯೆಗಳ ಪೈಕಿ ಶೇ. 60ರಷ್ಟು ಹತ್ಯೆಗಳು ನಿಕಟ ಸಂಗಾತಿ ಅಥವಾ ಕುಟುಂಬದ ಸದಸ್ಯರಿಂದಲೇ ಆಗುತ್ತವೆ ಎಂದು ಹೇಳಿದೆ.
ನವದೆಹಲಿ (ನ.26): ಮಹಿಳೆಯರ ವಿರುದ್ಧ ಹಿಂಸಾಚಾರ ನಿರ್ಮೂಲನೆಯ ಅಂತಾರಾಷ್ಟ್ರೀಯ ದಿನವಾದ ನವೆಂಬರ್ 25 ರಂದು 'ಸ್ತ್ರೀಹತ್ಯೆಗಳು 2023' ವರದಿಯನ್ನು ವಿಶ್ವಸಂಸ್ಥೆ ಬಹಿರಂಗಪಡಿಸಿದೆ. ಮಹಿಳೆಯರು ಮತ್ತು ಹುಡುಗಿಯರ ಮೇಲೆ ಆಗುತ್ತಿರುವ ಅತ್ಯಂತ ತೀವ್ರ ಸ್ವರೂಪದ ದೌರ್ಜನ್ಯವನ್ನು ಬಹಿರಂಗಮಾಡಿದೆ. ಇಂದಿಗೂ ಕೂಡ ಸ್ತ್ರೀಹತ್ಯೆ ಜಗತ್ತಿನಲ್ಲಿ ವ್ಯಾಪಕವಾಗಿ ಉಳಿದಿದ್ದು, ಮಹಿಳೆಯರಿಗೆ ಮನೆಯೇ ಅತ್ಯಂತ ಡೇಂಜರ್ ಪ್ಲೇಸ್ ಆಗಿದೆ ಎಂದು ಹೇಳಿದೆ. ಪ್ರತಿ 10 ನಿಮಿಷಕ್ಕೆ ಒಬ್ಬ ಮಹಿಳೆ ಸಾವು ಕಾಣುತ್ತಿದ್ದಾಳೆ. ಈಕೆಯನ್ನು ಆಕೆಯ ನಿಕಟ ಸಂಗಾತಿ ಅಥವಾ ಕುಟುಂಬ ಸದಸ್ಯರೇ ಹತ್ಯೆ ಮಾಡುತ್ತಿದ್ದಾರೆ ಎಂದು ಹೇಳಿದೆ.
2023ರಲ್ಲಿ ಜಗತ್ತಿನಲ್ಲಿ ಒಟ್ಟು 85 ಸಾವಿರ ಮಹಿಳೆ/ಬಾಲಕಿಯರು ಕೊಲೆಯಾಗಿದ್ದಾರೆ.ಇದರಲ್ಲಿ ಶೇ. 60ರಷ್ಟು ಅಂದರೆ 51,100 ಸ್ತ್ರೀಹತ್ಯೆಗಳನ್ನು ಆಕೆಯ ನಿಕಟ ಸಂಗಾತಿ ಅಥವಾ ಕುಟುಂಬ ಸದಸ್ಯರೇ ಮಾಡಿದ್ದಾರೆ. ಪ್ರತಿದಿನ 140 ಮಹಿಳೆಯರು ಮತ್ತು ಹುಡುಗಿಯರು ತಮ್ಮ ಸಂಗಾತಿ ಅಥವಾ ಹತ್ತಿರದ ಸಂಬಂಧಿ ಕೈಯಲ್ಲಿ ಸಾಯುತ್ತಿದ್ದಾರೆ ಎಂದು ಡೇಟಾ ತೋರಿಸಿದೆ. ಅಂದರೆ ಪ್ರತಿ 10 ನಿಮಿಷಕ್ಕೆ ಒಬ್ಬ ಮಹಿಳೆ ಅಥವಾ ಹುಡುಗಿ ಕೊಲೆ ಆಗುತ್ತಿದ್ದಾರೆ.
2023ರಲ್ಲಿ ಕುಟುಂಬ ಸದಸ್ಯರಿಂದಲೇ ಕೊಲೆಯಾದ ಸ್ತ್ರೀಹತ್ಯೆಗಳ ಪ್ರಮಾಣದಲ್ಲಿ ಆಫ್ರಿಕಾ ಖಂಡದಲ್ಲಿ ಹೆಚ್ಚು ಪ್ರಕರಣದ ರಾಖಲಾಗಿದೆ. ನಂತರ ಸ್ಥಾನದಲ್ಲಿ ಅಮೆರಿಕಾ ಇದ್ದರೆ, ಆನಂತರದ ಸ್ಥಾನದಲ್ಲಿ ಒಷಿಯಾನಿಯಾ ರಾಷ್ಟ್ರಗಳಿವೆ. ಅಮೆರಿಕ ಹಾಗೂ ಯುರೋಪ್‌ನಲ್ಲಿ ಹೆಚ್ಚಿನ ಮಹಿಳೆಯರು ಗೃಹಕಲಹ (ಶೇ. 64 ಮತ್ತು ಶೇ. 58) ಹೆಚ್ಚಿನ ಸ್ತ್ರೀ ಹತ್ಯೆಗಳಾಗಿವೆ. ಇಲ್ಲಿ ಅವರ ನಿಕಟ ಸಂಗಾತಿಗಳಿಂದಲೇ ಹತ್ಯೆಗಳಾಗಿದೆ. ಉಳಿದ ಪ್ರದೇಶಗಳಲ್ಲಿ ಕುಟುಂಬ ಸದಸ್ಯರು ಹೆಚ್ಚಾಗಿ ಈ ಹತ್ಯೆಗಳಲ್ಲಿ ಭಾಗಿಯಾಗಿದ್ದಾರೆ.
ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯವನ್ನು ತಡೆಯಬಹುದು. ಅದಕ್ಕಾಗಿ ದೃಢವಾದ ಕಾನೂನು ಸುಧಾರಿತ ಡೇಟಾ, ಸರ್ಕಾರದ ಬಾಧ್ಯತೆ, ಶೂನ್ಯ ಸಹಿಷ್ಣುತೆ ನೀತಿ, ಮಹಿಳಾ ಹಕ್ಕುಗಳ ಸಂಸ್ಥೆಗಳು ಮತ್ತು ಸಾಂಸ್ಥಿಕ ಸಂಸ್ಥೆಗಳಿಗೆ ಹೆಚ್ಚಿನ ನಿಧಿಯ ಅಗತ್ಯವಿದೆ. ನಾವು 2025 ರಲ್ಲಿ ಬೀಜಿಂಗ್ ಘೋಷಣೆ ಮತ್ತು ಆಕ್ಷನ್ ವೇದಿಕೆಯ 30 ನೇ ವಾರ್ಷಿಕೋತ್ಸವವನ್ನು ಸಮೀಪಿಸುತ್ತಿರುವಾಗ, ವಿಶ್ವ ನಾಯಕರು UNiTE ಮತ್ತು ತುರ್ತಾಗಿ ಕಾರ್ಯನಿರ್ವಹಿಸಲು ಸಮಯವಾಗಿದೆ' ಎಂದು ಯುಎನ್ ಮಹಿಳಾ ಕಾರ್ಯಕಾರಿಣಿ ನಿರ್ದೇಶಕಿ ಸಿಮಾ ಬಹೌಸ್ ಹೇಳಿದ್ದಾರೆ.
ಬಾಹ್ಯಾಕಾಶದಲ್ಲಿ ಸ್ಪೇಸ್ ಜಾನಿಟರ್ ಆದ ಸುನೀತಾ ವಿಲಿಯಮ್ಸ್, ISS ಬಾತ್‌ರೂಮ್ ಕ್ಲೀನ್ ಮಾಡಿದ ಗಗನಯಾತ್ರಿ!
ಆಫ್ರಿಕಾದಲ್ಲಿ 2023ರಲ್ಲಿ 21,700 ಸ್ತ್ರೀಹತ್ಯೆಗಳು ನಿಕಟ ಸಂಗಾತಿ ಹಾಗೂ ಕುಟುಂಬ ಸದಸ್ಯರಿಂದಲೇ ಆಗಿವೆ ಎಂದು ತಿಳಿಸಿದೆ. 2022ರಲ್ಲಿ ಒಟ್ಟಾರೆಯಾಗಿ ಆದ ಸ್ತ್ರೀ ಹತ್ಯೆಗಳ ಪ್ರಮಾಣ 89 ಸಾವಿರದಷ್ಟಿತ್ತು. 2023ರ ವೇಳೆಗೆ ಇದು 4 ಸಾವಿರದಷ್ಟು ಕಡಿಮೆ ಆಗಿದ್ದರೂ, ಸಂಗಾತಿಗಳಿಂದ ಕೊಲೆಯಾಗುವ ಮಹಿಳೆಯರ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ.
ಬೆವರು, ಮೂತ್ರ ಸಂಸ್ಕರಿಸಿದ ನೀರಿನಿಂದ ಮಾಡಿದ ಸೂಪ್ ಕುಡಿದು ದಿನ ಕಳೆಯುತ್ತಿರುವ ಸುನೀತಾ ವಿಲಿಯಮ್ಸ್!