Shivamogga: ಇಂದಿರಾ ಕ್ಯಾಂಟಿನ್‌ನಲ್ಲಿ ಹೋಟೆಲ್ ಊಟ ಕೊಟ್ಟು ಸಚಿವರಿಗೆ ಯಾಮಾರಿಸಿದ ಅಧಿಕಾರಿಗಳು?
ಸಚಿವ ರಹೀಂ ಖಾನ್ ಇಂದಿರಾ ಕ್ಯಾಂಟಿನ್ನಲ್ಲಿ ಊಟ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಅವರಿಗೆ ಹೋಟೆಲ್‌ನ ಊಟ ನೀಡಲಾಗಿತ್ತು ಎಂಬ ವರದಿ ಹೊರಬಿದ್ದಿದೆ. ಕ್ಯಾಂಟಿನ್ ಸಿಬ್ಬಂದಿ ಹೋಟೆಲ್‌ನಿಂದ ಊಟ ತರಿಸಿ ಸಚಿವರಿಗೆ ನೀಡಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗ (ನ.26): ವಿಮಾನ ನಿಲ್ದಾಣದಿಂದ ನೇರ ಇಂದಿರಾ ಕ್ಯಾಂಟಿನ್‌ಗೆ ಹೋಗಿ ಊಟ ಮಾಡಿದ್ದ ಸಚಿವ ರಹೀಂ ಖಾನ್ ನಡೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ನಡುವೆ ಸ್ಥಳೀಯ ಅಧಿಕಾರಿಗಳು ಇಂದಿರಾ ಕ್ಯಾಂಟಿನ್‌ನಲ್ಲಿ ಸಚಿವರಿಗೆ ಹೋಟೆಲ್‌ನ ಊಟ ನೀಡಿದ್ದರು ಎಂದು ವರದಿಯಾಗಿದೆ. ಸಚಿವರು ಇಂದಿರಾ ಕ್ಯಾಂಟಿನ್ ಭೇಟಿ ನೀಡಿದಕ್ಕೆ ಹೋಟೆಲ್ ಊಟ ತರಿಸಲಾಗಿತ್ತು. ಹೋಟೆಲ್ ನಿಂದ ಊಟ ತರಿಸಿ ಸಚಿವರಿಗೆ ಇಂದಿರಾ ಕ್ಯಾಂಟಿನ್ ಊಟ ಎಂದು ನೀಡಲಾಗಿದೆ ಎಂದು ವರದಿಯಾಗಿದೆ. ಶಿವಮೊಗ್ಗದ ಪ್ರವಾಸದ ವೇಳೆ ಪೌರಾಡಳಿತ ಹಾಗೂ ಹಜ್ ಸಚಿವ ರಹಿಂ ಖಾನ್ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿದ್ದರು. ಬಿ.ಹೆಚ್. ರಸ್ತೆಯಲ್ಲಿರುವ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿ ಊಟ ಮಾಡಿದ್ದರು.
ಸೋಮವಾರ ಮಧ್ಯಾಹ್ನ ಇಂದಿರಾ ಕ್ಯಾಂಟಿನ್‌ಗೆ ಸಚಿವರು ಭೇಟಿ ನೀಡಿದ್ದರು. ಆದರೆ, ಸಚಿವರಿಗೆ ಹೋಟೆಲ್ ಊಟ ನೀಡಿ ಅಧಿಕಾರಿಗಳು ಯಾಮಾರಿಸಿದ್ದಾರೆ. ಇಂದಿರಾ ಕ್ಯಾಂಟಿನ್ ಊಟ ಎಂದು ಹೋಟೆಲ್ ಊಟವನ್ನು ಕ್ಯಾಂಟಿನ್ ಸಿಬ್ಬಂದಿ ನೀಡಿದ್ದರು. ಊಟದ ವೇಳೆ ಸಚಿವರಿಗೆ ಪಲ್ಯ, ರೊಟ್ಟಿ, ಚಪಾತಿ ಊಟ ಹಾಕಲಾಗಿತ್ತು.
Bengaluru: ವೈಟ್‌ಫೀಲ್ಡ್-ಕೆಂಗೇರಿ ನಡುವಿನ 'ಪಾರಿಜಾತ' ಸಬರ್ಬನ್ ರೈಲು ಪ್ರಾಜೆಕ್ಟ್ ಬಹುತೇಕ ರದ್ದು!
ಮಹಾನಗರ ಪಾಲಿಕೆ ಆಯುಕ್ತ ಕವಿತಾ ಯೋಗಪ್ಪನವರ್ ಊಟದ ಜೊತೆ ಕೇವಲ ಚಪಾತಿ ಅಥವಾ ಮುದ್ದೆ ಇರುವ ಮೆನು ಹೇಳಿದ್ದರು. ಆದರೆ ಸಚಿವರಿಗೆ ಚಪಾತಿಯ ಜೊತೆಗೆ ರೊಟ್ಟಿ ಕೂಡ ಬಂದಿತ್ತು . ಗಣ್ಯರು ಬಂದಾಗ ಹೊರಗಿನಿಂದ ಊಟ ತಿನ್ನುತ್ತಾರೆ ಎಂಬ ಆರೋಪವಿದೆ ಇದರಲ್ಲಿ ಅಧಿಕಾರಿಗಳ ಪಾತ್ರವಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು. ಕ್ಯಾಂಟೀನ್ ನವರೇ ತರಿಸಿದ್ದರೆ ಅವರ ವಿರುದ್ಧವು ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದ್ದಾರೆ. ಆ ಬಳಿಕ ಅಧಿಕಾರಿಗಳೊಂದಿಗೆ ನಡೆದ ಮೀಟಿಂಗ್ ಅಲ್ಲಿ ವಿಷಯ ಪ್ರಸ್ತಾಪ ಆಗದೆ ಸಚಿವರ ಹೇಳಿಕೆಗೆ ಮಾತ್ರ ಸೀಮಿತವಾಗಿದೆ.
Bengaluru: ರಾಜಧಾನಿಯಲ್ಲಿ ಸಿಗ್ತಿಲ್ಲ ಜಾಗ, 250 ಮೀಟರ್ ಎತ್ತರದ ಸ್ಕೈಡೆಕ್ ಸ್ಥಳ ಮತ್ತೆ ಬದಲು?