ಮತ್ತೆ ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ದರ; ಕಳೆದೆರಡು ವರ್ಷದಲ್ಲೇ ಗರಿಷ್ಠ!

ಕೊರೋನಾ ವೈರಸ್ ನಡುವೆ ಭಾರತ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದರ ನಡುವೆ ಮತ್ತೊಂದು ಆತಂಕ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದೀಗ 13ನೇ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮ ಇದೀಗ ಎಲ್ಲಾ ಉತ್ಪನ್ನಗಳ ಮೇಲೆ ಬೀಳಲಿದೆ.

Brent crude  Price hike highest rate for petrol and diesel since September 2018 india ckm

ನವದೆಹಲಿ(ಡಿ.05):  ಕರ್ನಾಟಕ ಬಂದ್, ಭಾರತ್ ಬಂದ್ ವಾರ್ನಿಂಗ್ ನಡುವೆ ಹೈರಾಣಾಗಿರುವ ಗ್ರಾಹಕರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಶನಿವಾರ(ಡಿ.05) ಪೆಟ್ರೋಲ್ ಬೆಲೆ 25 ಪೈಸೆ ಹಾಗೂ ಡೀಸೆಲ್ ಬೆಲೆ 27 ಪೈಸೆ ಹೆಚ್ಚಳವಾಗಿದೆ.

ಪೆಟ್ರೋಲ್, ಡೀಸೆಲ್ ಮತ್ತಷ್ಟು ದುಬಾರಿ; ಸಂಕಷ್ಟದಲ್ಲಿ ಬದುಕು!.

ಶನಿವಾರದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮೂಲಕ ಕಳೆದರಡು ವಾರದಲ್ಲಿ 13 ಬಾರಿ ತೈಲ ಬೆಲ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 83.13 ರೂಪಾಯಿ ಇದ್ದ ಬೆಲೆ ಇದೀಗ  82.86 ರೂಪಾಯಿ ಆಗಿದೆ. ಇನ್ನು  73.07 ರೂಪಾಯಿ ಇದ್ದ ಡೀಸೆಲ್ ಬೆಲೆ ಬೆಲೆ ಏರಿಕೆ ಬಳಿಕ 73.32 ರೂಪಾಯಿ ಆಗಿದೆ.

2 ತಿಂಗಳ ಬಳಿಕ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!...

2018ರ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಗರಿಷ್ಠ ಬೆಲೆ ತಲುಪಿದೆ. ಕಳೆದ 16 ದಿನಗಳಲ್ಲಿ ಪೆಟ್ರೋಲ್ ಬೆಲೆ 2.07 ರೂಪಾಯಿ ಹೆಚ್ಚಾಗಿದ್ದು, ಡೀಸೆಲ್ ಬೆಲೆ 2.86 ರೂಪಾಯಿ ಹೆಚ್ಚಾಗಿದೆ. ಅಕ್ಟೋಬರ್ ಅಂತ್ಯದ ವೇಳೆ ಕೊರೋನಾ ಲಸಿಕೆ ಆಗಮನದ ಕುರಿತು ಎಲ್ಲೆಡೆ ಚರ್ಚೆ ಬಲವಾಗಿ ಆರಂಭವಾಗಿತ್ತು. ಇತ್ತ ಇಂಧನ ಬೆಲೆಯಲ್ಲೂ ಹೆಚ್ಚಳ ಆರಂಭವಾಗತೊಡಗಿತು.

ಬ್ರೆಂಟ್ ಕ್ರೂಡ್ ಆಯಿಲ್ ಬೆಲೆ ಅಕ್ಟೋಬರ್ ತಿಂಗಳಿಂದ ಶೇಕಡಾ 34ರಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಡೀಸೆಲ್ ಬೆಲೆ 77.22 ರೂಪಾಯಿ ಆಗಿದೆ. ಇನ್ನು ಪೆಟ್ರೋಲ್ ಬೆಲೆ 85.42 ರೂಪಾಯಿ ಆಗಿದೆ.

Latest Videos
Follow Us:
Download App:
  • android
  • ios