ಕಾಂಗ್ರೆಸ್ ನಾಯಕನ ಮೊಮ್ಮಗಳ ಜೊತೆ ನಿಖಿಲ್ ಕುಮಾರಸ್ವಾಮಿ ಮದುವೆ ನಿಶ್ಚಯ?

ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರದ ಬಗ್ಗೆ ಎಕ್ಸ್‌ಕ್ಲೂಸಿವ್ ವಿಚಾರವೊಂದು ಹೊರ ಬಿದ್ದಿದೆ.  ವಿಜಯನಗರ ಶಾಸಕ ಎಂ ಕೃಷ್ಣಪ್ಪ ಸಂಬಂಧಿ ಮನೆಗೆ ದೇವೇಗೌಡ್ರ ಕುಟುಂಬ ಬಂದಿದ್ದು ಮದುವೆ ಮಾತುಕತೆಗಾ ಎಂಬ ಕುತೂಹಲ ಮೂಡಿಸಿದೆ. 

22ರ ಯುವಕನ ಮೇಲೆ 60ರ ಮಹಿಳೆಗೆ ಲವ್!

60 ವರ್ಷದ ಮಹಿಳೆಯೊಬ್ಬಳಿಗೆ 22 ವರ್ಷದ ಯುವಕನ ಮೇಲೆ ಪ್ರೇಮಾಂಕುರ ಉಂಟಾಗಿ, ಆತನ ಜೊತೆ ಮದುವೆ ಮಾಡಿಸುವಂತೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ ಅಪರೂಪದ ಪ್ರಕರಣವೊಂದು ಆಗ್ರಾದ ಇತ್ಮದ್‌ ಊದ್‌-ದೌಲಾ ಎಂಬಲ್ಲಿ ನಡೆದಿದೆ.

ಚಿದು ಬಂಧಿಸಲು ಗೋಡೆ ಹಾರಿದ್ದ ಅಧಿಕಾರಿಗೆ ಪದಕ!

ಹುಕೋಟಿ ಐಎನ್‌ಎಕ್ಸ್‌ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರದ ಮಾಜಿ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಲು ಅವರ ಮನೆಯ ಗೋಡೆ ಹಾರಿದ್ದ ಸಿಬಿಐ ಅಧಿಕಾರಿ ಆರ್‌. ಪಾರ್ಥಸಾರಥಿ ಸೇರಿದಂತೆ ಒಟ್ಟಾರೆ 28 ಮಂದಿ ಸಿಬಿಐ ಅಧಿಕಾರಿಗಳು ರಾಷ್ಟ್ರಪತಿ ಹಾಗೂ ಪೊಲೀಸ್‌ ಪದಕಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗಣರಾಜ್ಯೋತ್ಸವಕ್ಕೆ ಗೆಲುವಿನ ಉಡುಗೊರೆ ನೀಡಿದ ಟೀಂ ಇಂಡಿಯಾ...

ಆಕ್ಲೆಂಡ್‌ನಲ್ಲಿ ಸತತ ಎರಡನೇ ಸಲ ಕಿವೀಸ್ ಕಿವಿ ಹಿಂಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಕನ್ನಡಿಗ ಕೆ.ಎಲ್ ರಾಹುಲ್ ಗೆಲುವಿನ ರೂವಾರಿ ಎನಿಸಿದ್ದಾರೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿದೆ

2020 ರ ಕ್ಯಾಲೆಂಡರ್‌ನಲ್ಲಿ ಕಂಗೊಳಿಸುತ್ತಿದ್ದಾರೆ ಕನ್ನಡದ 'ಕ್ವೀನ್ಸ್'

ಕನ್ನಡದ ನಟಿಮಣಿಯರು 2020 ರ  ಕ್ಯಾಲೆಂಡರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.  ದೇವತೆಗಳ ರೂಪದಲ್ಲಿ ಕ್ಯಾಲೆಂಡರ್‌ನಲ್ಲಿ ಕಂಗೊಳಿಸುತ್ತಿದ್ದಾರೆ ಕನ್ನಡದ 'ಕ್ವೀನ್ಸ್'.  ಶ್ರೀಲೀಲಾ, ಅದಿತಿ ಪ್ರಭು ದೇವ, ಮಾನ್ವಿತಾ, ಹೀಗೆ 12 ನಟಿಯರು ಕ್ಯಾಲೆಂಡರ್‌ಗೆ  ಪೋಸ್ ಕೊಟ್ಟಿದ್ದಾರೆ. 

ಸಂಪುಟ ವಿಸ್ತರಣೆ: ಸಚಿವ ಸ್ಥಾನಕ್ಕೆ ಓರ್ವ ಶಾಸಕನ ಹೆಸರು ಬಹಿರಂಗಗೊಳಿಸಿದ ಸಿಎಂ

ಶಾಸಕರು ಉಪಸಮರ ಗೆದ್ದು ಒಂದೂವರೆ ತಿಂಗಳಾಯ್ತು. ಆದ್ರೆ, ಈವರೆಗೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿರೋ ಆಕಾಂಕ್ಷಿಗಳಿಗೆ ಮಂತ್ರಿಭಾಗ್ಯ ಒಲಿಯಲಿಲ್ಲ. ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆಯಾಗುತ್ತೆ. ನಾವೆಲ್ಲಾ ಸಚಿವರಾಗ್ತೇವೆಂದು ನೂತನ ಶಾಸಕರು ತುದಿಗಾಲಲ್ಲಿ ನಿಂತಿದ್ರು. ಆದ್ರೆ ಅದೆಲ್ಲಾ ಹುಸಿಯಾಗಿದೆ. ಇದೀಗ ಬಿಎಸ್‌ವೈ ಸಚಿವ ಸಂಪುಟ ಕಾರ್ಯ ಚಟುವಟಿಕೆ ಜೋರಾಗಿದ್ದು, ಇದರ ಮಧ್ಯೆ ಸ್ವತಃ ಬಿಎಸ್ ವೈ ಓರ್ವ ಶಾಸಕನಿಗೆ ಮಂತ್ರಿ ಸ್ಥಾನ ಖಚಿತ ಪಡಿಸಿದ್ದಾರೆ.

ಬಜೆಟ್ ಮೂಲಕ ಚೀನಾಗೆ ಗುದ್ದು: ಮೋದಿ ಪ್ಲ್ಯಾನ್ ಮಾಡ್ತಿದೆ ಸದ್ದು!

ಈ ಬಾರಿಯ ಬಜೆಟ್ ಮೂಲಕ ಚೀನಾಗೆ ಹೊಡೆತ ನೀಡಲು ಮೋದಿ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಚೀನಾದ 50ಕ್ಕೂ ಹೆಚ್ಚು ವಸ್ತುಗಳ ಆಮದು ಮೇಲೆ ಸುಂಕವನ್ನು ಏರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಕಟೀಲಿನಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ, ಇಲ್ಲಿವೆ ಚಂದದ ಫೋಟೋಸ್

ಕಟೀಲಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ನಗರದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಇಡೀ ದೇವಳವೇ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದ್ದು, ಭಕ್ತ ಜನಸಾಗರವೇ ದೇವಾಲಯದತ್ತ ಹರಿದುಬರುತ್ತಿದೆ.

ಜವಾಬ್ದಾರಿ ಮುಗಿಸಿ ಜನರತ್ತ ಬಂದ ಪ್ರಧಾನಿ: ಕೈಬೀಸಿ ಸಂಭ್ರಮಿಸಿದ ಜನತೆ!...

71ನೇ ಗಣರಾಜ್ಯೋತ್ಸವಕ್ಕೆ ಅಧಿಕೃತ ತೆರೆ ಬಿದ್ದಿದ್ದು, ನವದೆಹಲಿ ರಾಜಪಥದಲ್ಲಿ ನಡೆಯುತ್ತಿದ್ದ ಪಥಸಂಚಲನ ಮುಕ್ತಾಯ ಕಂಡಿದೆ. ಪಥಸಂಚಲನ ಮುಕ್ತಾಯವಾಗುತ್ತಿದ್ದಂತೇ ವೇದಿಕೆ ಮೇಲಿದ್ದ ಪ್ರಧಾನಿ ಮೋದಿ, ಕೆಳಗಿಳಿದು ಬಂದು ಜನರತ್ತ ಕೈ ಬೀಸಿ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.

ಅಂಬಾನಿ to ರಿತೇಶ್ ದೇಶ್‌ಮುಖ್: ಅಮೆರಿಕಾದ ಟೆಸ್ಲಾ ಕಾರು ಖರೀದಿಸಿದ ಭಾರತೀಯರು!

ಅಮೆರಿಕಾದ ಟೆಸ್ಲಾ ಎಲೆಕ್ಟ್ರಿಕ್ ಕಾರನ್ನು ಹಿಂದಿಕ್ಕಬಲ್ಲ ಕಾರು ಸದ್ಯ ಮಾರುಕಟ್ಟೆಯಲ್ಲಿ ಇಲ್ಲ. ಶೈಲಿ, ಎಂಜಿನ್, ಸಾಮರ್ಥ್ಯ, ಗುಣಮಟ್ಟ, ಚಾರ್ಜಿಂಗ್, ಮೈಲೇಜ್ ಸೇರಿದಂತೆ ಎಲ್ಲಾ ವಿಚಾರದಲ್ಲಿ ಟೆಸ್ಲಾ ಇತರ ಎಲೆಕ್ಟ್ರಿಕ್ ಕಾರಿಗಿಂತ ಮುಂದಿದೆ. ಈ ದುಬಾರಿ ಕಾರು ಭಾರತದಲ್ಲಿ ಬಿಡುಗಡೆಯಾಗಿಲ್ಲ. ಆದರೆ ಅಂಬಾನಿ, ನಟ ರಿತೇಶ್ ದೇಶ್‌ಮುಖ್ ಸೇರಿದಂತೆ ಕೆಲವೇ ಕೆಲವರು ಈ ಕಾರನ್ನು ಆಮದು ಮಾಡಿಕೊಂಡಿದ್ದಾರೆ.