ಮೈಸೂರು ದಳಪತಿಗಳ ಅಂಗಳದಲ್ಲಿ ಸಂಚಲನ; ಹೊಸ ದಾಳ ಉರುಳಿಸಿದ JDS ಶಾಸಕ ಜಿಟಿ ದೇವೇಗೌಡ
ಜೆಡಿಎಸ್ ವರಿಷ್ಠರ ವಿರುದ್ಧ ಅಸಮಾಧಾನಗೊಂಡಿರುವ ಶಾಸಕ ಜಿ.ಟಿ.ದೇವೇಗೌಡರು, ಮುಂದಿನ ಚುನಾವಣೆಯಲ್ಲಿ ಒಂದು ವೇಳೆ ಟಿಕೆಟ್ ಸಿಗದಿದ್ದರೆ, ಮತದಾರರ ತೀರ್ಮಾನಕ್ಕೆ ಬದ್ಧ ಎಂದಿರುವ ಅವರ ಹೇಳಿಕೆ ಕುತೂಹಲ ಮೂಡಿಸಿದೆ. ಇದೇ ವೇಳೆ, ಅವರ ಪುತ್ರ ಹರೀಶ್ ಗೌಡ ಕೂಡ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ಮೈಸೂರು ಜೆಡಿಎಸ್ ಅಂಗಳ
ವಿಧಾನಸಭಾ ಚುನಾವಣೆಗೂ ಮುನ್ನಬೇ ಮೈಸೂರು ಜೆಡಿಎಸ್ ಅಂಗಳದಲ್ಲಿ ರಾಜಕೀಯ ತಂತ್ರಗಾರಿಕೆಗಳು ಬಿರುಸಿನಿಂದ ಆರಂಭಗೊಂಡಿವೆ. ಈ ಹಿಂದೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಜಿ.ಟಿ.ದೇವೇಗೌಡರ ಬದಲಾಗಿ ಅವರ ಪುತ್ರ ಹರೀಶ್ ಗೌಡ ಅವರಿಗೆ ಟಿಕೆಟ್ ನೀಡುವ ಕುರಿತು ಚಿಂತನೆಗಳು ನಡೆದಿವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಎಲ್ಲಾ ಬೆಳವಣಿಗೆ ನಡುವೆ ಶಾಸಕ ಜಿ.ಟಿ.ದೇವೇಗೌಡರು ಹೊಸ ರಾಜಕೀಯ ದಾಳವನ್ನು ಉರುಳಿಸಿದ್ದಾರೆ.
ದಳಪತಿಗಳ ವಿರುದ್ಧ ಅಸಮಾಧಾನ
ಹೌದು, ಜೆಡಿಎಸ್ ಪಕ್ಷದಲ್ಲಿದ್ದುಕೊಂಡೇ ದಳಪತಿಗಳ ವಿರುದ್ಧ ಅಸಮಾಧಾನ ಹೊರ ಹಾಕುವ ಜಿ.ಟಿ.ದೇವೇಗೌಡರು ಮುಂದಿನ ಚುನಾವಣೆ ಕುರಿತು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದಲೇ ನನ್ನ ಸ್ಪರ್ಧೆ ಎಂದು ಜಿ.ಟಿ. ದೇವೇಗೌಡರು ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಜೆಡಿಎಸ್‌ನಿಂದ ಟಿಕೆಟ್ ಸಿಗದಿದ್ರೆ ಏನು ಎಂಬ ಪ್ರಶ್ನೆಗೂ ಉತ್ತರವನ್ನು ನೀಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರ
ಚಾಮುಂಡೇಶ್ವರಿ ಕ್ಷೇತ್ರದ ಜಯಪುರ ಗ್ರಾಮದಲ್ಲಿ ಮಾತನಾಡಿದ ಜಿ.ಟಿ.ದೇವೇಗೌಡರು, ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ ಇರುತ್ತೇನೆ. ಟಿಕೆಟ್ ಕೊಡದಿದ್ರೆ ಮತದಾರರು ನೀವು ಏನ್ ಹೇಳ್ತಿರಾ ಅದಕ್ಕೆ ನಾನು ಬದ್ಧವಾಗಿರುತ್ತೇನೆ. ಅರ್ಜಿ ಹಾಕು ಅಂದ್ರೆ ಹಾಕುತ್ತೇನೆ. ನಿಮ್ಮ ಪ್ರೀತಿ ಆಶೀರ್ವಾದವೇ ನನಗೆ ಧೈವ. ನನ್ನ ಬಳಿ ಏನು ಸಹಾಯ ಮಾಡಿಸಿಕೊಳ್ಳದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ನಾನು ಬೆಳೆಸಿದವರು, ದುಡ್ಡು ಮಾಡಿದವರು ನನ್ನ ವಿರುದ್ಧವೇ ನಿಂತಿದ್ದಾರೆ ಎಂದು ಗುಡುಗಿದರು.
ಜಿಟಿ ದೇವಗೌಡರ ಹೇಳಿಕೆ
ಇದು ಇವತ್ತಿನದ್ದಲ್ಲ, ಹಿಂದಿನಿಂದಲೂ ನಡೆದು ಕೊಂಡು ಬಂದಿದೆ. ನಿಮ್ಮ ಜೊತೆ ನಾನು ಇರ್ತೇನೆ ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಜಿ.ಟಿ.ದೇವೇಗೌಡರು ಮನವಿ ಮಾಡಿಕೊಂಡರು. ಜೆಡಿಎಸ್ ಪಕ್ಷದಿಂದ ಎಲ್ಲಾ ಚಟುವಟಿಕೆಗಳಿಂದಲೂ ಜಿ.ಟಿ.ದೇವೇಗೌಡರು ಅಂತರ ಕಾಯ್ದುಕೊಂಡು ಬರುತ್ತಿದ್ದಾರೆ. ಜೆಡಿಎಸ್ ವರಿಷ್ಠರ ಸಭೆಗಳಿಗೂ ಗೈರಾಗುತ್ತಿರುವ ಸಂದರ್ಭದಲ್ಲಿ ಜಿಟಿ ದೇವಗೌಡರ ಹೇಳಿಕೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪುತ್ರ ಹರೀಶ್ ಗೌಡ
ಇತ್ತ ಜೆಡಿಎಸ್ ಸಭೆ-ಸಮಾರಂಭಗಳಿಗಾಗಿ ಹಾಕುತ್ತಿರುವ ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ಜಿ.ಟಿ.ದೇವೇಗೌಡರ ಫೋಟೋಗೆ ಕೊಕ್ ನೀಡಲಾಗಿದೆ. ಮತ್ತೊಂದೆಡೆ ಪುತ್ರ ಹರೀಶ್ ಗೌಡ ಸಹ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು ಸ್ಥಳೀಯ ಸಭೆ-ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಇದನ್ನೂ ಓದಿ: ಸಿಎಂ ಇದ್ದಾಗಲೇ ಸ್ಪೀಕರ್ ಸಭಾತ್ಯಾಗ, ಇದು ಆಡಳಿತ ಅಸಮರ್ಥತೆಗೆ ಸಾಕ್ಷಿ: ಜೋಶಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

