ಅಂಬಾನಿ to ರಿತೇಶ್ ದೇಶ್‌ಮುಖ್: ಅಮೆರಿಕಾದ ಟೆಸ್ಲಾ ಕಾರು ಖರೀದಿಸಿದ ಭಾರತೀಯರು!
ಅಮೆರಿಕಾದ ಟೆಸ್ಲಾ ಎಲೆಕ್ಟ್ರಿಕ್ ಕಾರನ್ನು ಹಿಂದಿಕ್ಕಬಲ್ಲ ಕಾರು ಸದ್ಯ ಮಾರುಕಟ್ಟೆಯಲ್ಲಿ ಇಲ್ಲ. ಶೈಲಿ, ಎಂಜಿನ್, ಸಾಮರ್ಥ್ಯ, ಗುಣಮಟ್ಟ, ಚಾರ್ಜಿಂಗ್, ಮೈಲೇಜ್ ಸೇರಿದಂತೆ ಎಲ್ಲಾ ವಿಚಾರದಲ್ಲಿ ಟೆಸ್ಲಾ ಇತರ ಎಲೆಕ್ಟ್ರಿಕ್ ಕಾರಿಗಿಂತ ಮುಂದಿದೆ. ಈ ದುಬಾರಿ ಕಾರು ಭಾರತದಲ್ಲಿ ಬಿಡುಗಡೆಯಾಗಿಲ್ಲ. ಆದರೆ ಅಂಬಾನಿ, ನಟ ರಿತೇಶ್ ದೇಶ್‌ಮುಖ್ ಸೇರಿದಂತೆ ಕೆಲವೇ ಕೆಲವರು ಈ ಕಾರನ್ನು ಆಮದು ಮಾಡಿಕೊಂಡಿದ್ದಾರೆ. ಈ ಲಿಸ್ಟ್ ಇಲ್ಲಿದೆ.
ಮುಂಬೈ(ಜ.26): ಅಮೆರಿಕಾದ ಟೆಸ್ಲಾ ಎಲೆಕ್ಟ್ರಿಕ್ ಕಾರು ವಿಶ್ವದಲ್ಲೇ ಜನಪ್ರೀಯವಾಗಿದೆ. ದುಬಾರಿ ಮೌಲ್ಯದ ಈ ಕಾರು ಶೀಘ್ರದಲ್ಲೇ ಭಾರತದಲ್ಲೂ ಬಿಡುಗಡೆಯಾಗಲಿದೆ. ವಿಶ್ವದ ಬೆಸ್ಟ್ ಎಲೆಕ್ಟ್ರಿಕ್ ಕಾರು ಎಂದೇ ಗುರುತಿಸಿಕೊಂಡಿರುವ ಟೆಸ್ಲಾ ಕಾರು, ಭಾರತದಲ್ಲಿ ಲಾಂಚ್ ಆಗದಿದ್ದರೂ, ಈಗಾಗಲೇ ಹಲವು ಉದ್ಯಮಿಗಳು, ಶ್ರೀಮಂತರು ಈ ಕಾರನ್ನು ಆಮದು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಟೆಸ್ಲಾ ತಂತ್ರಜ್ಞಾನಕ್ಕೆ ಮೋದಿ ಮೆಚ್ಚುಗೆ- ಭಾರತಕ್ಕೆ ಕಾಲಿಡುತ್ತಿದೆ ಅಮೇರಿಕ ಕಾರು!
ಕೋಟಿ ರೂಪಯಿ ಕಾರಿಗೆ ಒಂದೆರಡು ಕೋಟಿ ಆಮದು ಸುಂಕ ನೀಡಿ ಕೆಲ ಶ್ರೀಮಂತರು ಖರೀದಿಸಿದ್ದಾರೆ. ಭಾರತದ ರೂಪಾಯಿಯಲ್ಲಿ ಟೆಸ್ಲಾ ಕಾರುಗಳ ಸರಾಸರಿ ಬೆಲೆ 1 ಕೋಟಿ ರೂಪಾಯಿ. ಈ ಕಾರನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವಾಗ ಕನಿಷ್ಠ 3 ಕೋಟಿ ರೂಪಾಯಿ ದಾಟಲಿದೆ. ಹೀಗೆ ಭಾರತದಲ್ಲಿ ಟೆಸ್ಲಾ ಕಾರು ಖರೀದಿಸಿದ ಶ್ರೀಮಂತರ ಲಿಸ್ಟ್ ಇಲ್ಲಿದೆ.
ಇದನ್ನೂ ಓದಿ: ಭಾರತದ ರಸ್ತೆಗಿಳಿಯುತ್ತಿದೆ ಅಮೇರಿಕದ ಟೆಸ್ಲಾ ಕಾರು!..
ಮುಖೇಶ್ ಅಂಬಾನಿ (ಉದ್ಯಮಿ)
ಟೆಸ್ಲಾ ಮಾಡೆಲ್ S 100D
ಒಂದು ಬಾರಿ ಚಾರ್ಜ್‌ಗೆ 495 km ಮೈಲೇಜ್
ರಿತೇಶ್ ದೇಶಮುಖ್(ಬಾಲಿವುಡ್ ನಟ)
ಟೆಸ್ಲಾ ಮಾಡೆಲ್ X
ಒಂದು ಬಾರಿ ಚಾರ್ಜ್‌ಗೆ 42 km ಮೈಲೇಜ್
ಪ್ರಶಾಂತ್ ರುಯಾ(ಎಸ್ಸಾರ್ ಕಾಗ್ಲಮರೇಟ್ CEO)
ಟೆಸ್ಲಾ ಮಾಡೆಲ್ X
ಒಂದು ಬಾರಿ ಚಾರ್ಜ್‌ಗೆ 42 km ಮೈಲೇಜ್
ಪೂಜಾ ಬಾತ್ರ
ಟೆಸ್ಲಾ ಮಾಡೆಲ್ 3
ಒಂದು ಬಾರಿ ಚಾರ್ಜ್‌ಗೆ 386 km ಮೈಲೇಜ್
ಜನವರಿ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ