ಆಗ್ರಾ[ಜ.26]: 60 ವರ್ಷದ ಮಹಿಳೆಯೊಬ್ಬಳಿಗೆ 22 ವರ್ಷದ ಯುವಕನ ಮೇಲೆ ಪ್ರೇಮಾಂಕುರ ಉಂಟಾಗಿ, ಆತನ ಜೊತೆ ಮದುವೆ ಮಾಡಿಸುವಂತೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ ಅಪರೂಪದ ಪ್ರಕರಣವೊಂದು ಆಗ್ರಾದ ಇತ್ಮದ್‌ ಊದ್‌-ದೌಲಾ ಎಂಬಲ್ಲಿ ನಡೆದಿದೆ.

ಅಪ್ಪನ ವಯಸ್ಸಿನ ಪುರುಷನೊಂದಿಗೆ ಕನ್ಯತ್ವ ಕಳೆದುಕೊಳ್ಳೋ ಬಯಕೆ ಈ ಚೆಲುವೆಗೆ...

ಅಂದಹಾಗೆ ಈ ಮಹಿಳೆ ಏಳು ಮಕ್ಕಳ ತಾಯಿ. ಈ ಮುದುವೆಗೆ ಒಪ್ಪದ ಯುವಕನ ಪೋಷಕರು ಹಾಗೂ ಮಹಿಳೆಯ ಪತಿ ಮತ್ತು ಮಗ ಪೊಲೀಸ್‌ ಠಾಣೆಗೆ ಬಂದು ಪರಸ್ಪರ ಜಗಳಾಡಿಕೊಂಡಿದ್ದಾರೆ. ಯಾವ ಕಾರಣಕ್ಕೂ ಮದುವೆಗೆ ಅವಕಾಶ ನೀಡಬಾರದೆಂದು ಪೊಲೀಸರ ಮೇಲೆ ಎರಡೂ ಕುಟುಂಬದವರು ಒತ್ತಡ ಹೇರಿದ್ದಾರೆ.

ಆದರೆ ಯುವಕ ಮತ್ತು ಮಹಿಳೆ ಮದುವೆಯಾಗಲು ಪಟ್ಟು ಹಿಡಿದಿದ್ದರಿಂದ ಇಕ್ಕಟ್ಟಿಗೆ ಸಿಲುಕಿದ ಪೊಲೀಸರು ಗತಿ ಇಲ್ಲದೇ ಯುವಕನ ಮೇಲೆಯೇ ಶಾಂತಿ ಕದಡಿದ ಆರೋಪದ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ. ಇಷ್ಟಾದರೂ ಮಹಿಳೆ ಮಾತ್ರ ಯುವಕನನ್ನು ಮದುವೆ ಆಗುವುದಾಗಿ ಪಟ್ಟು ಹಿಡಿದು ಕುಳಿತಿದ್ದಾಳೆ.

ನಿಮ್ಮ ಮಗು ಇಂಟರ್‌ನೆಟ್‌ ಪೋರ್ನೋಗ್ರಫಿ ನೋಡ್ತಾ ಇದೆಯಾ?

ಜನವರಿ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ