Asianet Suvarna News Asianet Suvarna News

ಸಂಪುಟ ವಿಸ್ತರಣೆ: ಸಚಿವ ಸ್ಥಾನಕ್ಕೆ ಓರ್ವ ಶಾಸಕನ ಹೆಸರು ಬಹಿರಂಗಗೊಳಿಸಿದ ಸಿಎಂ

ಶಾಸಕರು ಉಪಸಮರ ಗೆದ್ದು ಒಂದೂವರೆ ತಿಂಗಳಾಯ್ತು. ಆದ್ರೆ, ಈವರೆಗೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿರೋ ಆಕಾಂಕ್ಷಿಗಳಿಗೆ ಮಂತ್ರಿಭಾಗ್ಯ ಒಲಿಯಲಿಲ್ಲ. ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆಯಾಗುತ್ತೆ. ನಾವೆಲ್ಲಾ ಸಚಿವರಾಗ್ತೇವೆಂದು ನೂತನ ಶಾಸಕರು ತುದಿಗಾಲಲ್ಲಿ ನಿಂತಿದ್ರು. ಆದ್ರೆ ಅದೆಲ್ಲಾ ಹುಸಿಯಾಗಿದೆ. ಇದೀಗ ಬಿಎಸ್‌ವೈ ಸಚಿವ ಸಂಪುಟ ಕಾರ್ಯ ಚಟುವಟಿಕೆ ಜೋರಾಗಿದ್ದು, ಇದರ ಮಧ್ಯೆ ಸ್ವತಃ ಬಿಎಸ್ ವೈ ಓರ್ವ ಶಾಸಕನಿಗೆ ಮಂತ್ರಿ ಸ್ಥಾನ ಖಚಿತ ಪಡಿಸಿದ್ದಾರೆ.

BS Yediyurappa confirms Minister Post To Dr K Sudhakar
Author
Bengaluru, First Published Jan 26, 2020, 3:09 PM IST
  • Facebook
  • Twitter
  • Whatsapp

ಮೈಸೂರು, (ಜ.26): ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ಸೇರಲು ನೂತನ ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ. ಮತ್ತೊಂದೆಡೆ ಮೂಲ ಬಿಜೆಪಿಗರು ಸಹ ನಮಗೂ ಮಂತ್ರಿ ಸ್ಥಾನ ನೀಡಬೇಕೆಂದು ಪಟ್ಟುಹಿಡಿದಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪನವರಿಗೆ ಯಾರಿಗೆ ಸಚಿವ ಸ್ಥಾನ ನೀಡಬೇಕು. ಯಾರನ್ನು ಕೈಬಿಡಬೇಕೆನ್ನುವ ತಲೆ ಬಿಸಿ ಶುರುವಾಗಿದೆ. ಇದರ ಮಧ್ಯೆ ನೂತನ ಶಾಸಕರ ಪೈಕಿ 6 ಜನರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಿ ಎನ್ನುವ ಮಾತುಗಳನ್ನ ಹೇಳಿತ್ತಿದ್ದಾರೆ ಎನ್ನಲಾಗುತ್ತಿದೆ. 

ಒಗ್ಗಟ್ಟಿನಿಂದ BSY ಕುರ್ಚಿ ಗಟ್ಟಿಗೊಳಿಸಿದ ಶಾಸಕರಲ್ಲೇ ಭಿನ್ನಮತ ಸ್ಫೋಟ..?

ಇದು ಬಿಎಸ್‌ವೈಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೆಲ್ಲದರ ಮಧ್ಯೆ ಯಡಿಯೂರಪ್ಪ ಇಂದು (ಭಾನುವಾರ) ಓರ್ವ ನೂತನ ಶಾಸಕನಿಗೆ ಸಚಿವ ಸ್ಥಾನ ಖಚಿತಪಡಿಸಿದ್ದಾರೆ. 

ಭಾನುವಾರ ಸಿಎಂ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು. ಇದರಲ್ಲಿ ಚಿಕ್ಕಬಳ್ಳಾಪುರ ನೂತನ ಡಾ.ಕೆ.ಸುಧಾಕರ್ ಅವರು ಉಪಸ್ಥಿತರಿದ್ದರು.

ಈ ವೇಳೆ  ಮುಂದಿನ ಸಚಿವರಾದ ಸುಧಾಕರ್ ಎಂದು ಸಿಎಂ ಭಾಷಣ ಆರಂಭಿಸಿದರು. ಈ ಮೂಲಕ ಸುಧಾಕರ್‌ಗೆ ಸಚಿವ ಸ್ಥಾನ ಸಿಗುವುದನ್ನು ಖಚಿತಪಡಿಸಿದರು.

ಮುಂದಿನ ಸಚಿವ ಸುಧಾಕರ್ ಎನ್ನುತ್ತಿದ್ದಂತೆಯೇ ಶಾಸಕ ಡಾ.ಸುಧಾಕರ್ ನಗು ಬೀರಿದರು. ಒಟ್ಟಿನಲ್ಲಿ ಸುಧಾಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದನ್ನು ಯಡಿಯೂರಪ್ಪ ಖಚಿತಪಡಿಸಿದಂತಾಗಿದೆ.

ಜನವರಿ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios