ಕಾಶ್ಮೀರದ ಮತ್ತೊಂದು ನಿಷೇಧ ವಾಪಸ್, ವಿಶ್ವ ಕ್ರಿಕೆಟ್‌ಗೆ ಕೊಹ್ಲಿ ಬಾಸ್; ಆ.11ರ ಟಾಪ್ 10 ಸುದ್ದಿ!
ಜಮ್ಮ ಮತ್ತು ಕಾಶ್ಮೀರದಲ್ಲಿ 4ಜಿ ನಿಷೇಧವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. 73ನೇ ಸ್ವಾತಂತ್ರ್ಯ ದಿನಾಚರಣೆಗೆ ಇದೇ ಮೊದಲ ಬಾರಿಗೆ ಅಮೆರಿಕದ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತ ತ್ರಿವರ್ಣ ಧ್ವಜ ಹಾರಾಡಲಿದೆ. ಪ್ರಧಾನಿ ಮೋದಿ ಕಟ್ಟಿ ಹಾಕಲು ಚೀನಾ ಚಕ್ರವ್ಯೂಹ ಹೆಣೆದಿರುವ ಕುರಿತು ಮಾಹಿತಿಯೊಂದು ಬಹಿರಂಗವಾಗಿದೆ. ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ. ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಫೋಟೋಗ್ರಾಫರ್, ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಸಲಹೆ ಸೇರಿದಂತೆ ಆಗಸ್ಟ್ 9ರ ಟಾಪ್ 10 ಸುದ್ದಿ ಇಲ್ಲಿವೆ.
ಜಮ್ಮ ಮತ್ತು ಕಾಶ್ಮೀರದಲ್ಲಿ 4Gನಿಷೇಧ ವಾಪಸ್; ಮಹತ್ವದ ನಿರ್ಧಾರ ಪ್ರಕಟಿಸಿದ ಕೇಂದ್ರ ಸರ್ಕಾರ!...
ಜಮ್ಮ ಮತ್ತು ಕಾಶ್ಮೀರವನ್ನು ಹೊರತು ಪಡಿಸಿ ಸಂಪೂರ್ಣ ಭಾರತದಲ್ಲಿ 4G ಮೊಬೈಲ್ ಡಾಟಾ ಸೇವೆ ಲಭ್ಯವಿದೆ. ಹಲವು ಕಾರಣಗಳಿಂದ ಕಣಿವೆ ರಾಜ್ಯದಲ್ಲಿ 4G ಮೊಬೈಲ್ ಸೇವೆಯನ್ನು ನಿಷೇಧಿಸಲಾಗಿದ. ಆದರೆ ಇದೀಗ ಕೇಂದ್ರ ಸರ್ಕಾರ ನಿಷೇಧ ವಾಪಸ್ ಪಡೆದಿದೆ.
ಇದೇ ಮೊದಲ ಬಾರಿಗೆ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಹಾರಾಡಲಿದೆ ಭಾರತದ ಧ್ವಜ!...
73ನೇ ಸ್ವಾತಂತ್ರ್ಯ ದಿನಾಚರಣೆಗೆ ಭಾರತ ಸಜ್ಜಾಗುತ್ತಿದೆ. ಕೊರೋನಾ ವೈರಸ್ ನಡುವೆ ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ತಯಾರಿ ಭರದಿಂದ ಸಾಗಿದೆ. ದಿಲ್ಲಿಯಿಂದ ಹಳ್ಳಿ ವರೆಗೆ ಭಾರತದ ಉದ್ದಗಲಕ್ಕೂ ತಿರಂಗ ಹಾರಾಡಲಿದೆ. ಇದೇ ಮೊದಲ ಬಾರಿಗೆ ನ್ಯೂಯಾರ್ಕ್‌ನ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಭಾರತದ ರಾಷ್ಟ್ರ ಧ್ವಜ ಹಾರಾಡಲಿದೆ.
ಅರೆಬಿಕ್ ಕಲಿಸಲು ಬಂದ ಮದರಸಾ ಶಿಕ್ಷಕನಿಂದ ಬಾಲಕಿ ಮೇಲೆ ರೇಪ್...
ಒಂಭತ್ತು ವರ್ಷದ ಬಾಲಕಿ ಮೇಲೆ 25 ವರ್ಷದ ಶಿಕ್ಷಕ ಆಕೆಯ ಮನೆಯಲ್ಲೇ ಅತ್ಯಾಚಾರ ಎಸಗಿದ್ದಾನೆ. ಭಾನುವಾರ ನಡೆದ ಘಟನೆ ಬೆಳಕಿಗೆ ಬಂದಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ಮೋದಿ ಕಟ್ಟಿ ಹಾಕಲು ಚೀನಾ ಚಕ್ರವ್ಯೂಹ: ವರದಿಯಿಂದ ಸಂಚು ಬಹಿರಂಗ!...
ಮೋದಿಯನ್ನು ಕಟ್ಟಿ ಹಾಕಲು ಅಮೆರಿಕ ಅಧ್ಯಕ್ಷರಿಗೆ ತೊಡಕುಂಟು ಮಾಡಲು ಚೀನಾ ಸಜ್ಜಾಗಿದ್ಯಾ? ಮೋದಿ ವಿರುದ್ಧದ ಮಸಲತ್ತಿನಿಂದ ಟ್ರಂಪ್ ಅಧ್ಯಕ್ಷ ಪಟ್ಟಕ್ಕೆ ಕುತ್ತಾಗುತ್ತಾ? ಇಂತಹುದ್ದೊಂದು ಅನುಮಾನ ಸದ್ಯ ಕಾಡಲಾರಂಭಿಸಿದೆ. ಇದಕ್ಕೆ ಪೂರಕವಾಗಿ ಗುಪ್ತಚರ ಇಲಾಖೆ ನೀಡಿದ ವರದಿಯೂ ಪೂರಕವಾಗಿದ್ದು, ಇದು ಅಮೆರಿಕ ಅಧ್ಯಕ್ಷರನ್ನು ನಡುಗಿ ಹೋಗುವಂತೆ ಮಾಡಿದೆ.
ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗ!...
‘ಸೆಮ್‌ರಶ್’ ಎನ್ನುವ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆ ಪ್ರಕಾರ, ಅಭಿಮಾನಿಗಳು ಈ ವರ್ಷ ಜನವರಿಯಿಂದ ಜೂನ್‌ವರೆಗೂ ಗೂಗಲ್ ಸರ್ಚ್‌ನಲ್ಲಿ ಪ್ರತಿ ತಿಂಗಳು ಸರಾಸರಿ 16.2 ಲಕ್ಷ ಬಾರಿ ಕೊಹ್ಲಿ ಹೆಸರಲ್ಲಿ ಹುಡುಕಾಟ ನಡೆಸಿದ್ದಾರೆ.
2021ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ರದ್ದು?...
ಮುಂದಿನ ವರ್ಷ ಅಂದರೆ 2021ರಲ್ಲಿ ನಡೆಯಬೇಕಿದ್ದ ಮೆಗಾ ಐಪಿಎಲ್ ಆಟಗಾರರ ಹರಾಜನ್ನು ರದ್ದುಪಡಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಸಂಪತ್ತು ಕಾಪಾಡಲು ಮನೆ ತೊರೆಯಲು ನಿರಾಕರಿಸಿದ್ರಾ ಅರ್ಚಕರು ಕುಟುಂಬ? ಇಲ್ಲಿದೆ Exclusive ವಿಚಾರ!...
ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಭೂ ಸಮಾಧಿಯಾಗಿರುವ ನಾರಾಯಣಾಚಾರ್ ಕುಟುಂಬದ ಪತ್ತೆ ಕಾರ್ಯ ಮುಂದುವರೆದಿದ್ದು 6 ದಿನವಾದ್ರೂ ಸುಳಿವು ಸಿಕ್ಕಿಲ್ಲ. ಅರ್ಚಕರ ಕಾರು ಚಾಲಕ ಜಯಂತ್ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ನೀಡಿದ್ದಾರೆ. ಅರ್ಚಕರ ಮನೆಯಲ್ಲಿ 10 ಕ್ವಿಂಟಾಲ್ ಕರಿಮೆಣಸು, 5 ಕ್ವಿಂಟಾಲ್ ಏಲಕ್ಕಿ, 10 ಕೆಜಿಯಷ್ಟು ಚಿನ್ನಾಭರಣವಿತ್ತಂತೆ. 25 ರಿಂದ 30 ಲಕ್ಷ ರೂ ನಗದಿತ್ತಂತೆ. ಜಮೀನು ಪತ್ರಗಳು, ದೇವರ ಪೂಜಾ ಸಾಮಗ್ರಿ, ಡಸ್ಟರ್ ಕಾರು ಭು ಸಮಾಧಿಯಾಗಿದೆ.
ಸುಶಾಂತ್ ಸಾವಿಗೂ ಮುನ್ನ ಯಾರ ಸಂಪರ್ಕದಲ್ಲಿದ್ದರು ರಿಯಾ? ಮೊಬೈಲ್ ನಿಂದ ಶಾಕಿಂಗ್ ಮಾಹಿತಿ!
ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ಜಾರಿ ನಿರ್ದೇಶನಾಲಯ(ಇಡಿ) ಸುಶಾಂತ್ ಪ್ರೇಯಸಿ ಎಂದು ಕರೆಸಿಕೊಂಡಿದ್ದ ರಿಯಾ ಚಕ್ರವರ್ತಿ ಪೋನ್ ಮಾಹಿತಿ ಕಲೆಹಾಕಿದಾಗ ಒಂದಷ್ಟು ಶಾಕಿಂಗ್ ಅಂಶಗಳು ಪತ್ತೆಯಾಗಿವೆ.
ನಿಖಿಲ್ ಕುಮಾರಸ್ವಾಮಿ- ರೇವತಿ ಫೋಟೋಗಳನ್ನು ಕ್ಲಿಕ್ ಮಾಡುವುದು ಯಾರು ಗೊತ್ತಾ?...
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಿಖಿಲ್ ಕುಮಾರಸ್ವಾಮಿ ದಂಪತಿಗಳ ಅದ್ಭುತ ಫೋಟೋಗಳನ್ನು ಯಾರು ಕ್ಲಿಕ್ ಮಾಡುತ್ತಾರೆ? ಅವರ ಜೊತೆ ಸದಾ ಯಾರು ಇರುತ್ತಾರೆ? ಎಂದು ತಲೆ ಕೆಡಿಸಿಕೊಂಡಿರುವ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ....
ದೇಶದ ಆರ್ಥಿಕತೆ ಮೇಲೆತ್ತಲು ಸರ್ಕಾರಕ್ಕೆ ಡಾ| ಸಿಂಗ್ 3 ಸಲಹೆ!...
ಭಾರತದಲ್ಲಿ ಆರ್ಥಿಕ ಮಂದಗತಿ ಅನಿವಾರ್ಯವಾಗಿತ್ತು ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹೇಳಿದ್ದು, ಇದಕ್ಕೆ ನರೇಂದ್ರ ಮೋದಿ ಸರ್ಕಾರ ಕೈಗೊಂಡ ನೀತಿಗಳೇ ಕಾರಣ ಎಂದು ಬೇಸರಿಸಿದ್ದಾರೆ. ಅಲ್ಲದೆ, ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರ 3 ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.