ಅರೆಬಿಕ್ ಕಲಿಸಲು ಬಂದ ಮದರಸಾ ಶಿಕ್ಷಕನಿಂದ ಬಾಲಕಿ ಮೇಲೆ ರೇಪ್

ಒಂಭತ್ತು ವರ್ಷದ ಬಾಲಕಿ ಮೇಲೆ ಶಿಕ್ಷಕನಿಂದ ಅತ್ಯಾಚಾರ/ ಅರೆಬಿಕ್ ಕಲಿಸಲು ಮನೆಗೆ ಬರುತ್ತಿದ್ದ ಶಿಕ್ಷಕ/ ಅತ್ಯಾಚಾರ ಎಸಗಿ ಪರಾರಿಯಾಗಿದ್ದ/ ಪೋಷಕರಿಗೆ ಬಾಲಕಿ ವಿಷಯ ತಿಳಿಸಿದ ನಂತರ ಪೊಲೀಸ್ ದೂರು

Madarsa teacher rapes 9-year-old girl in Raipur Chhattisgarh

ರಾಯ್ಪುರ(ಆ. 10)  ಒಂಭತ್ತು ವರ್ಷದ ಬಾಲಕಿ ಮೇಲೆ  25  ವರ್ಷದ ಶಿಕ್ಷಕ ಆಕೆಯ ಮನೆಯಲ್ಲೇ ಅತ್ಯಾಚಾರ ಎಸಗಿದ್ದಾನೆ.   ಭಾನುವಾರ ನಡೆದ ಘಟನೆ ಬೆಳಕಿಗೆ ಬಂದಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಮದರಸಾದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ.  ಅತ್ಯಾಚಾರಕ್ಕೆ ಒಳಗಾದ ಬಾಲಕಿಯ  ಸಹೋದರಿಗೆ ಅರೆಬಿಕ್ ಕಲಿಸಲು  ಶಿಕ್ಷಕ 15 ದಿನದಿಂದ ಸಂತ್ರಸ್ತೆಯ ಮನೆಗೆ ತೆರಳುತ್ತಿದ್ದ. ಅತ್ಯಾಚಾರಕ್ಕೆ ಒಳಗಾದ ಬಾಲಕಿಗೂ ಅರೆಬಿಕ್ ಹೇಳಿಕೊಡುತ್ತೇನೆ ಎಂದಿದ್ದ.

ಇನ್ಸ್ಟಾಗ್ರಾಂನಲ್ಲಿ ಬ್ಲಾಕ್‌ ಮಾಡಿದ ಯುವತಿಯನ್ನು ರೇಪ್ ಮಾಡಿದ!

ಭಾನುವಾರ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.  ಮಗಳು ತಂದೆ ತಾಯಿಗೆ ವಿಷಯ ತಿಳಿಸಿದ ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.  ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ. 

ಇನ್ನೊಂದು ವಿಕೃತ ಘಟನೆಯಲ್ಲಿ ಉತ್ತರ ಪ್ರದೇಶದ ಹಪುರ್ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗಿದೆ.  ಮನೆಯ ಹೊರಗಡೆ ಆಡುತ್ತಿದ್ದ ಬಾಲಕಿಯನ್ನು ಕಿಡ್ನಾಪ್ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.  ಮರುದಿನ ಬಾಲಕಿ ಮನೆಯಿಂದ ಎರಡು ಕಿಮೀ ದೂರದಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಆರೋಪಿ ಬಾಲಕಿಯ ಕುಟುಂಬಕ್ಕೆ ಪರಿಚಯಸ್ಥನೇ ಆಗಿರಬೇಕು ಎಂದು ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. 

Latest Videos
Follow Us:
Download App:
  • android
  • ios