ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ನಿಖಿಲ್ ಸಿಕ್ಕಾಪಟ್ಟೆ ಡಿಫರೆಂಟ್‌ ಆಗಿ ಸೆರೆ ಹಿಡಿದಿರುವ ಫೋಟೋಗಳನ್ನು ಶೇರ್ ಮಾಡುತ್ತಲ್ಲೇ ಇರುತ್ತಾರೆ. ಪತ್ನಿ ಜೊತೆ ಶೇರ್ ಮಾಡುವ ಪ್ರತಿ ಚಿತ್ರವೂ ಸೂಪರ್‌ ಕ್ಲಿಕ್ಸ್ ಪಡೆದುಕೊಂಡು ವೈರಲ್ ಆಗುತ್ತದೆ. ಅಷ್ಟಕ್ಕೂ ಇವರಿಬ್ಬರ ಫೋಟೋ ಯಾರು ಕ್ಲಿಕ್ ಮಾಡುತ್ತಾರೆ?

ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ ಹೀಗಿತ್ತು ನೋಡಿ!

ಕ್ಲಿಕ್‌ ಮಾಡುವುದು ಇವರೇ:

ನಿಖಿಲ್‌ ತಮ್ಮ ಫೋಟೋ ಕ್ಲಿಕ್ ಮಾಡುವುದು  ಯಾರೆಂದು ಸುವರ್ಣ ನ್ಯೂಸ್‌. ಕಾಂಗೆ ತಿಳಿಸಿದ್ದಾರೆ. ಹೌದು! ನಿಖಿಲ್ ಶೇರ್ ಮಾಡುವ ಕೆಲವೊಂದು ಫೋಟೋಗಳನ್ನು ನಾದಿನಿ ಕ್ಲಿಕಿಸುತ್ತಾರಂತೆ.  ಅವರ ಹೆಸರು ಸುಷ್ಮಾ ಮಂಜುನಾಥ್‌. ಈ ಹಿಂದೆ ಅವರ ಹುಟ್ಟಹಬ್ಬಕ್ಕೆ ನಿಖಿಲ್ ಶುಭಕೋರಿದ್ದರು. 

 

 
 
 
 
 
 
 
 
 
 
 
 
 

Belated happy birthday to my sister in law sushmaavre😊 (pls note this picture was taken before the lockdown) @sushmamanjunath

A post shared by Nikhil Kumar (@nikhilgowda_jaguar) on Mar 28, 2020 at 10:24pm PDT

ಕೂಲ್‌ ಗಾಗಲ್ಸ್‌ ಧರಿಸಿ ಇಂದು ಪತ್ನಿ ಜೊತೆ ಮತ್ತೊಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟು 6 ತಿಂಗಳು  ಪೂರೈಸಿದ ಪ್ರಯುಕ್ತ ಅಪ್ಲೋಡ್‌ ಮಾಡಿದ  ರೋಮ್ಯಾಂಟಿಕ್‌ ಫೋಟೋ ಇಂದಿಗೂ ಅಭಿಮಾನಿಗಳು ಫೇವರೆಟ್‌ ಆಗಿದೆ. ಒಟ್ಟಿನಲ್ಲಿ ನಿಖಿಲ್‌ ಅವರು ಶೇರ್ ಮಾಡುವ ಫೋಟೋಗಳನ್ನು ಹೇಗಿರುತ್ತದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ.