ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ವಿವಾಹಿತ ಮಹಿಳೆಯ ರೊಮ್ಯಾನ್ಸ್, ವಿಡಿಯೋ ಹರಿಬಿಟ್ಟವನ ವಿರುದ್ಧ ಕೇಸ್, ಅದೇ ಹೌಸಿಂಗ್ ಸೊಸೈಟಿ ವ್ಯಕ್ತಿ ಜೊತೆ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ.

ಮುಂಬೈ (ಮಾ.16) ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಗಂಡನ ಹಾಗೂ ಮಕ್ಕಳ ಜೊತೆ ಸಂಸಾರವೂ ಉತ್ತಮವಾಗಿದೆ. ಹೌಸಿಂಗ್ ಸೊಸೈಟಿಯಲ್ಲಿ ಗೌರವಯುತ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಲಿಫ್ಟ್ ಒಳಗಿನ ಸಿಸಿಟಿವಿ ವಿಡಿಯೋ ಇದೀಗ ಸಂಸಾರವನ್ನೇ ಬೀದಿಗೆ ತಂದಿದ್ದು ಮಾತ್ರವಲ್ಲ, ಮಹಿಳೆಯ ಮಾನ ಹರಾಜಾಗಿದೆ. ಅದೇ ಹೌಸಿಂಗ್ ಸೊಸೆೈಟಿಯ ವ್ಯಕ್ತಿ ಜೊತೆ ಲಿಫ್ಟ್ ಒಳಗೆ ಲಿಪ್ ಟು ಲಿಪ್ ಕಿಸ್ ನೀಡಿದ್ದು ಮಾತ್ರವಲ್ಲ, ರೊಮ್ಯಾನ್ಸ್‌ನಲ್ಲಿ ಮೈಮರೆತಿದ್ದಾರೆ. ಆದರೆ ಲಿಫ್ಟ್‌ನ ಸಿಸಿಟಿವಿಯಲ್ಲಿ ಈ ಚುಂಬನ ದೃಶ್ಯಗಳು ಸೆರೆಯಾಗಿದೆ. ಈ ವಿಡಿಯೋ ಹೌಸಿಂಗ್ ಸೊಸೈಟಿಯ ಎಲ್ಲರ ಮೊಬೈಲ್ ಮೂಲಕ ಹರಿದಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.

ಲಿಫ್ಟ್‌ನಲ್ಲಿ ಉಕ್ಕಿ ಹರಿದ ಪ್ರೀತಿ

ಅಂಧೇರಿಯ ಹೌಸಿಂಗ್ ಸೊಸೈಟಿಯಯಲ್ಲಿ ಈ ಘಟನೆ ನಡೆದಿದೆ. ಗಂಡ ಹಾಗೂ ಇಬ್ಬರ ಮಕ್ಕಳ ಜೊತೆ ಸುಖವಾಗಿದ್ದ 36 ವರ್ಷದ ಮಹಿಳೆಗೆ ಅದೇ ಹೌಸಿಂಗ್ ಸೊಸೈಟಿಯ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಶುರುವಾಗಿದೆ. ಎದುರಿಗೆ ಸಿಕ್ಕಾಗ ಹಾಯ್ ಬಾಯ್ ಇದ್ದ ಸಂಬಂಧ ಮೆಲ್ಲಗೆ ಚಾಟ್ ಶುರುವಾಗಿದೆ. ಬಳಿಕ ಅಲ್ಲೊಮ್ಮೆ ಇಲ್ಲೊಮ್ಮೆ ಭೇಟಿಯಲ್ಲಿ ಸಂಬಂಧ ಗಟ್ಟಿಯಾಗಿದೆ. ಗಂಡ, ಮಕ್ಕಳು , ಸಂಸಾರದ ಕಾರಣ ವ್ಯಕ್ತಿ ಜೊತೆ ಹೊರಗಡೆ ಎಲ್ಲೂ ಹೋಗುವಂತಿರಲಿಲ್ಲ. ಹೀಗಾಗಿ ಲಿಫ್ಟ್‍‌ನಲ್ಲಿ ಸಿಕ್ಕಾಗ ಪ್ರೀತಿ ಉಕ್ಕಿ ಹರಿದಿದೆ.

ಲಿಫ್ಟ್‌ನಲ್ಲಿ ಯಾರೂ ಇರಲಿಲ್ಲ. ಹಲವು ಮಹಡಿಗಳ ಮೇಲೆ ಹೋಗಬೇಕಿತ್ತು. ಲಿಫ್ಟ್‌ನಲ್ಲಿ ಮೆಲ್ಲನೆ ಇವರ ರೊಮ್ಯಾನ್ಸ್ ಶುರುವಾಗಿದೆ. ಲಿಪ್ ಟು ಲಿಪ್ ಕಿಸ್ ನೀಡಿ ಶುರುಹಚ್ಚಿದ್ದಾರೆ. ಬಿಗಿ ದಪ್ಪಿ ರೊಮ್ಯಾನ್ಸ್ ಜೋರಾಗಿದೆ. ಇವರ ಅದೃಷ್ಟಕ್ಕೆ ಲಿಫ್ಟ್‌ ಎಲ್ಲೂ ನಿಲ್ಲದೆ ಮೇಲೆಕ್ಕೆ ಸಾಗಿತ್ತು. ಯಾರೂ ಹತ್ತದೆ ಖಾಸಗಿತನಕ್ಕೆ ಅವಕಾಶ ನೀಡಿತ್ತು. ಆದರೆ ಇವರ ರೊಮ್ಯಾನ್ಸ್ ಸಿಸಿಟಿಯಲ್ಲಿ ಸೆರೆಯಾಗಿತ್ತು.

ಮೂರು ತಿಂಗಳ ಬಳಿಕ ಮಾರುಕಟ್ಟೆಯಲ್ಲಿ ಮುಜುಗರ ಸನ್ನಿವೇಶ

ಲಿಫ್ಟ್‌ ರೊಮ್ಯಾನ್ಸ್ ಒಂದೆರೆಡು ಬಾರಿ ನಡೆದಿತ್ತು. ಬಳಿಕ ಸರಿಸುಮಾರು ಮೂರು ತಿಂಗಳು ಕಳೆದಿದಿದೆ. ಈ ಮಹಿಳೆ ಹೌಸಿಂಗ್ ಸೊಸೈಟಿಯ ಪಕ್ಕದಲ್ಲೇ ಇರುವ ಮಾರುಕಟ್ಟೆಗೆ ತೆರಳಿದ್ದಾರೆ. ಮಾರುಕಟ್ಟೆಯಲ್ಲಿ ಕೆಲ ವಸ್ತುಗಳ ಖರೀದಿಸುವಾಗ ಹಲವರು ಈ ಮಹಿಳೆಯ ನೋಡಿ ವ್ಯಂಗ್ಯವಾಗಿ ನಗಲು ಆರಂಭಿಸಿದ್ದಾರೆ. ಅದೇ ವಿಡಿಯೋ, ಆಕೆಯೇ ಇದು ಎಂದು ಹೇಳತೊಡಗಿದ್ದಾರೆ. ಚುಚ್ಚು ಮಾತುಗಳು ಆಡಿದ್ದಾರೆ. ಇದೇ ವೇಳೆ ಅದೇ ಹೌಸಿಂಗ್ ಸೊಸೈಟಿಯ ವ್ಯಕ್ತಿಯೊಬ್ಬರು ನಿಮ್ಮ ವಿಡಿಯೋ ವೈರಲ್ ಆಗಿದೆ ಎಂದಿದ್ದಾರೆ.

ಲಿಫ್ಟ್‌ನಲ್ಲಿನ ರೊಮ್ಯಾನ್ಸ್ ವಿಡಿಯೋ ಹೌಸಿಂಗ್ ಸೊಸೈಟಿ ಮಾತ್ರವಲ್ಲ ಎಲ್ಲೆಡೆ ವೈರಲ್ ಆಗಿತ್ತು. ಮನೆಗೆ ಮರಳಿದಾಗ ಮನೆಯ ವಾತಾವರಣ ಬದಲಾಗಿತ್ತು. ಈ ವಿಡಿಯೋ ಮನೆಗೂ ತಲುಪಿತ್ತು. ಗಂಡ ಹಾಗೂ ಮಕ್ಕಳು ರಂಪಾಟ ಶುರುಮಾಡಿದ್ದಾರೆ. ಹೊರಗಡೆ ಹೋಗುವಂತಿಲ್ಲ, ಮನೆಯಲ್ಲಿ ಇರುವಂತಿಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಡಿಯೋ ಹರಿಬಿಟ್ಟವನ ವಿರುದ್ದ ದೂರು

ದಿಕ್ಕು ತೋಚದ ಮಹಿಳೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತನ್ನ ಖಾಸಗೀತನಕ್ಕೆ ಧಕ್ಕೆಯಾಗಿದೆ. ನಮ್ಮ ಖಾಸಗಿ ಕ್ಷಣಗಳ ವಿಡಿಯೋ ಹರಿಬಿಡಲಾಗಿದೆ. ಈ ಮೂಲಕ ಮಹಿಳೆಯ ಗೌರವಕ್ಕೆ ಧಕ್ಕೆ ತರಲಾಗಿದೆ. ಖಾಸಗಿ ವಿಡಿಯೋಗಳನ್ನು ಹರಿಬಿಟ್ಟು ವಿಕೃತಿ ಮರೆದಿದ್ದಾರೆ ಎಂದು ದೂರು ನೀಡಿದ್ದಾಳೆ. ಇದರಂತೆ ಎಫಐಆರ್ ದಾಖಲಾಗಿದೆ, ಪೊಲೀಸರು ಹೌಸಿಂಗ್ ಸೊಸೈಟಿಯ ಸೆಕ್ಯೂರಿಟಿ ವಿಭಾಗದ ಒಬ್ಬೊಬ್ಬರನ್ನೇ ವಿಚಾರಣೆ ನಡೆಸುತ್ತಿದ್ದಾರೆ.