ದೇಶದ ಆರ್ಥಿಕತೆ ಮೇಲೆತ್ತಲು ಸರ್ಕಾರಕ್ಕೆ ಡಾ| ಸಿಂಗ್ 3 ಸಲಹೆ!
ದೇಶದ ಆರ್ಥಿಕತೆ ಮೇಲೆತ್ತಲು ಸರ್ಕಾರಕ್ಕೆ ಡಾ| ಸಿಂಗ್ 3 ಸಲಹೆ| ಲಾಕ್‌ಡೌನ್ ವಿವೇಚನಾರಹಿತ ಕ್ರಮ: ಕಿಡಿ
1. ಜನರಿಗೆ ನೇರ ನಗದು ಸಹಾಯ ನೀಡುವ ಮೂಲಕ ಅವರ ಕೊಳ್ಳುವಿಕೆ ಸಾಮರ್ಥ್ಯ ಹೆಚ್ಚಿಸಬೇಕು
2. ಉದ್ದಿಮೆಗಳಿಗೆ ಸಾಕಷ್ಟುಸಾಲ ದೊರಕುವಂತಾಗಲು ಸರ್ಕಾರ ಸಮರ್ಪಕ ಬಂಡವಾಳ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು
3. ಹಣಕಾಸು ವಲಯಕ್ಕೆ ಸಾಂಸ್ಥಿಕ ಸ್ವಾಯತ್ತೆ ನೀಡಬೇಕು
ನನ್ನ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ; ರಾಹುಲ್ ಗಾಂಧಿ!
ನವದೆಹಲಿ: ಭಾರತದಲ್ಲಿ ಆರ್ಥಿಕ ಮಂದಗತಿ ಅನಿವಾರ್ಯವಾಗಿತ್ತು ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹೇಳಿದ್ದು, ಇದಕ್ಕೆ ನರೇಂದ್ರ ಮೋದಿ ಸರ್ಕಾರ ಕೈಗೊಂಡ ನೀತಿಗಳೇ ಕಾರಣ ಎಂದು ಬೇಸರಿಸಿದ್ದಾರೆ. ಅಲ್ಲದೆ, ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರ 3 ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಬಿಬಿಸಿಗೆ ಇ-ಮೇಲ್ ಸಂದರ್ಶನ ನೀಡಿರುವ ಅವರು, ಭಾರತದಲ್ಲಿನ ಆರ್ಥಿಕ ಹಿಂಜರಿತವು ಮಾನವ ನಿರ್ಮಿತ ಬಿಕ್ಕಟ್ಟು. ಸರ್ಕಾರವು ಕೊರೋನಾ ವೈರಸ್ ಹತ್ತಿಕ್ಕಲು ಕೈಗೊಂಡ ಲಾಕ್‌ಡೌನ್ ಎಂಬ ಆಘಾತಕಾರಿ ಹಾಗೂ ಅಚ್ಚರಿಯ ಕ್ರಮವು ಜನರ ಮೇಲೆ ಕಂಡು ಕೇಳರಿಯದ ಒತ್ತಡ ಹೇರಿತು ಎಂದಿದ್ದಾರೆ.
ಕೊರೋನಾ ಆತಂಕದ ನಡುವೆ ಸಿಹಿ ಸುದ್ದಿ ನೀಡಿದ RBI, ಜೀವನಕ್ಕಿಲ್ಲ ಟೆನ್ಶನ್!
ಇದೇ ವೇಳೆ ಆರ್ಥಿಕತೆ ಚೇತರಿಕೆಗೆ ಅವರು 3 ಸಲಹೆ ನೀಡಿದ್ದಾರೆ. ಜನರಿಗೆ ನೇರ ನಗದು ಸಹಾಯದ ಮೂಲಕ ಅವರ ಕೊಳ್ಳುವಿಕೆ ಸಾಮರ್ಥ್ಯ ಹೆಚ್ಚಿಸಬೇಕು. ಉದ್ದಿಮೆಗಳಿಗೆ ಸಾಕಷ್ಟುಸಾಲ ದೊರಕುವಂತಾಗಲು ಸರ್ಕಾರ ಸಮರ್ಪಕ ಬಂಡವಾಳ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು ಹಾಗೂ ಹಣಕಾಸು ವಲಯಕ್ಕೆ ಸಾಂಸ್ಥಿಕ ಸ್ವಾಯತ್ತೆ ನೀಡಬೇಕು ಎಂಬುವೇ ಆ 3 ಸಲಹೆಗಳಾಗಿವೆ.
‘ಲಾಕ್‌ಡೌನ್ ಆ ಸಂದರ್ಭದಲ್ಲಿ ಅನಿವಾರ್ಯ ಘೋಷಣೆ ಆಗಿರಬಹುದು. ಆದರೆ ತರಾತುರಿಯಲ್ಲಿ ಸಂವೇದನಾ ರಹಿತವಾಗಿ ಹಾಗೂ ವಿವೇಚನೆ ಇಲ್ಲದೇ ಆ ನಿರ್ಣಯ ಕೈಗೊಳ್ಳಲಾಯಿತು’ ಎಂದೂ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಕೊರೋನಾ ಬಿಕ್ಕಟ್ಟಿನ ಮೊದಲೇ ದೇಶದ ಆರ್ಥಿಕತೆ ಪರದಾಡುತ್ತಿತ್ತು. ಜಿಡಿಪಿ ಪ್ರಗತಿ ದರ ದಶಕದ ಕನಿಷ್ಠ ಎನ್ನಿಸಿದ ಕೇವಲ ಶೇ.4.2ರಷ್ಟಿತ್ತು. ಹೀಗಾಗಿ ಸುದೀರ್ಘ ಆರ್ಥಿಕ ಮಂದಗತಿ ಅನಿವಾರ್ಯವಾಗಿತ್ತು ಎಂದೂ ಹೇಳಿದ್ದಾರೆ.