ಇದೇ ಮೊದಲ ಬಾರಿಗೆ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಹಾರಾಡಲಿದೆ ಭಾರತದ ಧ್ವಜ!

 73ನೇ ಸ್ವಾತಂತ್ರ್ಯ ದಿನಾಚರಣೆಗೆ ಭಾರತ ಸಜ್ಜಾಗುತ್ತಿದೆ. ಕೊರೋನಾ ವೈರಸ್ ನಡುವೆ ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ತಯಾರಿ ಭರದಿಂದ ಸಾಗಿದೆ. ದಿಲ್ಲಿಯಿಂದ ಹಳ್ಳಿ ವರೆಗೆ ಭಾರತದ ಉದ್ದಗಲಕ್ಕೂ ತಿರಂಗ ಹಾರಾಡಲಿದೆ. ಇದೇ ಮೊದಲ ಬಾರಿಗೆ ನ್ಯೂಯಾರ್ಕ್‌ನ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಭಾರತದ ರಾಷ್ಟ್ರ ಧ್ವಜ ಹಾರಾಡಲಿದೆ.

America will hoist India National flag at times square on august 15

ನ್ಯೂಯಾರ್ಕ್(ಆ.11); ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ ನಡಯುತ್ತಿದೆ. ಕೊರೋನಾ ವೈರಸ್ ಕಾರಣ ಸರ್ಕಾರ ಸ್ವಾತಂತ್ರ್ಯ ದಿನಾಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ದೇಶದಲ್ಲೆಡೆ 73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದೇಶದೆಲ್ಲೆಡೆ ತಿರಂಗ ಹಾರಾಡಲಿದೆ. ಇದೇ ಮೊದಲ ಬಾರಿಗೆ ನ್ಯೂಯಾರ್ಕ್‌ನ ಪ್ರತಿಷ್ಠಿಕ ಟೈಮ್ಸ್ ಸ್ಕ್ವೇರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಾರೋಹಣ ನಡೆಯಲಿದೆ.

ಕೊರೋನಾ ಮಧ್ಯೆ ಸ್ವಾತಂತ್ರ್ಯ ದಿನಾಚರಣೆ: ಯಾವೆಲ್ಲ ಸೂಚನೆಗಳನ್ನು ಪಾಲಿಸಬೇಕು..?

ಫೆಡರೇಶನ್ ಆಫ್ ಇಂಡಿಯನ್ ಆಸೋಸಿಯೇಶನ್ ನ್ಯೂಯಾರ್ಕ್(FIA), ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತದ ತಿರಂಗವನ್ನು ಹಾರಿಸಲಿದೆ. ಆಗಸ್ಟ್ 15, 2020ರಂದು ಇತಿಹಾಸ ನಿರ್ಮಿಸಲಿದ್ದೇವೆ. ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಮೊತ್ತ ಮೊದಲ ಬಾರಿಗೆ ಟೈಮ್ಸ್ ಸ್ಕ್ವೇರ್‌ನಲ್ಲಿ ಧ್ವಜಾರೋಹಣ ಮಾಡಲಿದ್ದೇವೆ ಎಂದಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನ್ಯೂಯಾರ್ಕ್‌ನಲ್ಲಿರುವ ಕೌನ್ಸೆಲ್ ಜನರಲ್ ಆಫ್ ಇಂಡಿಯಾ ರಾಂಧಿರ್ ಜೈಸ್ವಾಲ್ ಭಾಗವಹಿಸುತ್ತಿದ್ದಾರೆ.

ವಿಶೇಷ ಕಾರ್ಯಕ್ರಮಮಕ್ಕೆ ಅಮೆರಿಕದಲ್ಲಿ ನೆಲೆಸಿರುವ ಹಲವು ಭಾರತೀಯರಿಗ ಆಹ್ವಾನ ನೀಡಲಾಗಿದೆ. ಜೊತೆಗೆ ಅಮೆರಿಕದ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಮಾರ್ಗಸೂಚಿಯಂತೆ ಕಾರ್ಯಕ್ರಮ ನಡೆಯಲಿದೆ ಎಂದು FIA ಹೇಳಿದೆ.

ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರವನ್ನು ಇದೇ ಟೈಮ್ಸ್ ಸ್ಕ್ವೇರ್ ಪರದೆಯಲ್ಲಿ ಬಿತ್ತರಿಸಲಾಗಿತ್ತು. ಈ ಮೂಲಕ ಅಮೆರಿಕದಲ್ಲೂ ರಾಮ ನಾಮ ಜಪಕ್ಕೆ ಅನುವು ಮಾಡಿಕೊಡಲಾಗಿತ್ತು. 

Latest Videos
Follow Us:
Download App:
  • android
  • ios