ವಿಶ್ವವಿಖ್ಯಾತ ತಾಜ್'ಮಹಲ್ ಅಸ್ತಿತ್ವದ  ಬಗ್ಗೆ ಮತ್ತೆ ಚರ್ಚೆ ಎದ್ದಿದೆ. ತಾಜ್’ಮಹಲ್’ನ್ನು ಶಹಜಹಾನ್ ಕಟ್ಟಿದ್ದಾ ಅಥವಾ ರಜಪೂತ ರಾಜನೊಬ್ಬ ಶಿವದೇವಾಲಯವನ್ನು ಮುಘಲ್ ಚಕ್ರವರ್ತಿಗೆ ಉಡುಗೊರೆಯಾಗಿ ನೀಡಿದ್ದಾ ಎಂಬುದರ ಬಗ್ಗೆ  ಇರುವ ಜಿಜ್ಞಾಸೆಗೆ ಸ್ಪಷ್ಟೀಕರಣ ನೀಡಿ ಎಂದು ಕೇಂದ್ರೀಯ ಮಾಹಿತಿ ಆಯೋಗ ಕೇಂದ್ರ ಸಂಸ್ಕೃತಿ ಆಯೋಗಕ್ಕೆ ಸೂಚಿಸಿದೆ.

ನವದೆಹಲಿ (ಆ.10): ವಿಶ್ವವಿಖ್ಯಾತ ತಾಜ್'ಮಹಲ್ ಅಸ್ತಿತ್ವದ ಬಗ್ಗೆ ಮತ್ತೆ ಚರ್ಚೆ ಎದ್ದಿದೆ. ತಾಜ್’ಮಹಲ್’ನ್ನು ಶಹಜಹಾನ್ ಕಟ್ಟಿದ್ದಾ ಅಥವಾ ರಜಪೂತ ರಾಜನೊಬ್ಬ ಶಿವದೇವಾಲಯವನ್ನು ಮುಘಲ್ ಚಕ್ರವರ್ತಿಗೆ ಉಡುಗೊರೆಯಾಗಿ ನೀಡಿರುವುದಾ ಎಂಬುದರ ಬಗ್ಗೆ ಇರುವ ಜಿಜ್ಞಾಸೆಗೆ ಸ್ಪಷ್ಟೀಕರಣ ನೀಡಿ ಎಂದು ಕೇಂದ್ರೀಯ ಮಾಹಿತಿ ಆಯೋಗ ಕೇಂದ್ರ ಸಂಸ್ಕೃತಿ ಆಯೋಗಕ್ಕೆ ಸೂಚಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಜ್ ಮಹಲ್ ಅಸ್ತಿತ್ವದ ಬಗ್ಗೆ ಅನೇಕ ಇತಿಹಾಸಕಾರರು ಪ್ರಶ್ನೆಯೆತ್ತಿದ್ದಾರೆ. ಬೇರೆ ಬೇರೆ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆರ್’ಟಿಐ ಮೂಲಕ ಈ ವಿಚಾರ ಕೇಂದ್ರ ಮಾಹಿತಿ ಆಯೋಗಕ್ಕೆ ತಲುಪಿದ್ದು, ಇದೀಗ ಚೆಂಡು ಸಂಸ್ಕೃತಿ ಸಚಿವಾಲಯದ ಅಂಗಳದಲ್ಲಿ ನಿಂತಿದೆ.

ತಾಜ್ ಮಹಲ್ ಅಸ್ತಿತ್ವದ ಬಗ್ಗೆ ಎದ್ದಿರುವ ಅನುಮಾನಗಳಿಗೆ ಸ್ಪಷ್ಟ ಕಾರಣ ಕೊಟ್ಟು ಪೂರ್ಣವಿರಾಮ ಇಡಬೇಕೆಂದು ಶ್ರೀಧರ್ ಆಚಾರ್ಯ ಆಯೋಗ ಸಂಸ್ಕೃತಿ ಸಚಿವಾಲಯಕ್ಕೆ ಸೂಚಿಸಿತ್ತು.